ನಿವೃತ್ತ ನೌಕರನನ್ನು ಮನೆಗೆ ಡ್ರಾಪ್ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ.
ಶಿವಮೊಗ್ಗ (ಆ.1) : ನಿವೃತ್ತ ನೌಕರನನ್ನು ಮನೆಗೆ ಡ್ರಾಪ್ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ.
ನಿವೃತ್ತಿಯಾದ ಗುಮಾಸ್ತ ಕೃಷ್ಣಪ್ಪ. ನಿವೃತ್ತರಾದ ಹಿನ್ನೆಲೆ ಸರ್ಕಾರಿ ವಾಹನದಲ್ಲಿ ಮನೆಗೆ ಡ್ರಾಪ್ ಮಾಡುವ ಮೂಲಕ ಗೌರವದೊಂದಿಗೆ ಬೀಳ್ಕೊಟ್ಟಿದ್ದಾರೆ. ಮೇಲಾಧಿಕಾರಿ ಮನೆವರೆಗೆ ಡ್ರಾಪ್ ಕೊಟ್ಟಿದ್ದರಿಂದ ನಿವೃತ್ತ ನೌಕರ ಕೃಷ್ಣಪ್ಪನಿಗೆ ಶಾಕ್ ಆಗಿದೆ ಮತ್ತು ಕಣ್ಣು ತುಂಬಿಬಂತಾಗಿದೆ.
ಸಾಗರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಕೃಷ್ಣಪ್ಪ ಅವರು ಸೋಮವಾರದಂದು ವಯೋನಿವೃತ್ತಿ ಹೊಂದಿದರು. ಅವರಿಗೆ ವಿಶೇಷವಾಗಿ ಬೀಳ್ಕೊಟ್ಟ ಪಲ್ಲವಿ ಸಾತೇನಹಳ್ಳಿ ಅವರು, ತಾವು ಅಧಿಕಾರಿ ಎನ್ನುವ ಯಾವ ಹಮ್ಮುಬಿಮ್ಮು ಇಲ್ಲದೆ ಸಿಬ್ಬಂದಿಗೆ ಸಮಾನ ಗೌರವ ಕೊಡುವ ಮೂಲಕ ಇತರರಿಗೆ ಮಾದರಿಯೆನಿಸಿದರು.
ಬೆಂಗಳೂರು- ಶಿವಮೊಗ್ಗ ವಿಮಾನ ಟಿಕೆಟ್ ಬುಕಿಂಗ್ ಆರಂಭ: ಟಿಕೆಟ್ ದರ 3,999 ರೂ.
ಸಾಗರದಿಂದ ಶಿರವಂತೆ ಗ್ರಾಮದ ಕೃಷ್ಣಪ್ಪನವರ ಮನೆಯವರೆಗೂ ಸರ್ಕಾರಿ ಕಾರಿನಲ್ಲಿ ಡ್ರಾಪ್ ಮಾಡಿದ ಹಿನ್ನೆಲೆಯಲ್ಲಿ ಇದು ತನ್ನ ಪ್ರಾಮಾಣಿಕ ಸೇವೆಗೆ ಸಿಕ್ಕ ಸೌಭಾಗ್ಯ ಎಂದು ಗುಮಾಸ್ತ ಕೃಷ್ಣಪ್ಪ ಭಾವಿಸಿದರು.
ಜೀವನದಲ್ಲಿ ಮರೆಯಲಾಗದ ಈ ಅಪರೂಪದ ಘಟನೆಯನ್ನು ಕೃಷ್ಣಪ್ಪನವರ ಜೊತೆಗೆ ಕಣ್ತುಂಬಿಕೊಂಡ ಕುಟುಂಬಸ್ಥರು.
ಶಿವಮೊಗ್ಗ ಏರ್‌ಪೋರ್ಟ್‌ನಿಂದ ವಿಮಾನ ಹಾರಾಟಕ್ಕೆ ಕೊನೆಗೂ ಮುಹೂರ್ತ ಫಿಕ್ಸ್..!