ಕೇಂದ್ರದ ವಿರುದ್ಧ ಕಳೆದ ಅನೇಕ ತಿಂಗಳಿನಿಂದ ನಿರಂತರ ಹೋರಾಟ ಮಾಡುತ್ತಿರುವ ರೈತರು| ಕೃಷಿ ಸಚಿವರು ಪದೇಪದೆ ರೈತರ ಕುರಿತು ಹಗುರವಾಗಿ ಮಾತನಾಡುವುದನ್ನುಬ ಬಿಡಬೇಕು| ರೈತರ ಹತ್ತಿರ ಕ್ಷಮಾಪಣೆ ಕೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದ ಅಬ್ದುಲ್ ನಯೀಮ್|
ಕುಷ್ಟಗಿ(ಜ.27): ಕೆಂಪುಕೋಟೆ ಮೇಲೆ ಹತ್ತಿರುವ ರೈತರು ಭಯೋತ್ಪಾದಕರು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೆಂಪುಕೋಟೆ ಮೇಲೆ ಹತ್ತಿರುವ ರೈತರು ಭಯೋತ್ಪಾದಕರು ಎಂದು ತಮಗೆ ಮೊದಲೇ ಮಾಹಿತಿ ಇದ್ದಿದ್ದರೆ ಮುಂಜಾಗ್ರತಾ ಕ್ರಮ ಯಾಕೆ ಕೈಗೊಳ್ಳಲಿಲ್ಲ ಎಂದು ದಾಳಿಂಬೆ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ನಯೀಮ್ ಹೇಳಿದರು.
ಮಂಗಳವಾರ ಈ ಕುರಿತು ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರದ ವಿರುದ್ಧ ದೇಶದ ಅನ್ನದಾತರು ಕಳೆದ ಅನೇಕ ತಿಂಗಳಿನಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. ಮಂಗಳವಾರ ಹೋರಾಟ ಪ್ರಾರಂಭ ಮಾಡುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಪ್ರಯತ್ನಪಟ್ಟಿದ್ದಾರೆ.
ರೈತರ ಆದಾಯ ದ್ವಿಗುಣಕ್ಕೆ ನೇರ ಮಾರಾಟ ಸಹಕಾರಿ: ಸಚಿವ ಪಾಟೀಲ್
ಕೃಷಿ ಸಚಿವರು ಪದೇಪದೆ ರೈತರ ಕುರಿತು ಹಗುರವಾಗಿ ಮಾತನಾಡುವುದನ್ನು ಬಿಟ್ಟು ನೇರವಾಗಿ ರೈತರ ಕಷ್ಟಗಳನ್ನು ಅರ್ಥಮಾಡಿಕೊಂಡು ಅವರ ಸಮಸ್ಯೆಗಳನ್ನು ಬಗೆಹರಿಸಿ ರೈತರ ಪ್ರೀತಿಗೆ ಪಾತ್ರರಾಗಬೇಕು. ಇಲ್ಲದಿದ್ದರೆ ಕೂಡಲೇ ರೈತರ ಹತ್ತಿರ ಕ್ಷಮಾಪಣೆ ಕೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.