ಆಮಂತ್ರಣ ನೀಡಲು ಬಂದು ಕಾರು ಕಳೆದುಕೊಂಡರು!

By Kannadaprabha News  |  First Published Jan 27, 2021, 10:48 AM IST

ವಿವಾಹ ಆಹ್ವಾನ ಪತ್ರಿಕೆ ಕೊಡಲು ತಮಿಳುನಾಡಿನಿಂದ ಬಂದಿದ್ದ ಕುಟುಂಬವೊಂದು ಕಾರು ಕಳೆದುಕೊಂಡ ಘಟನೆ  ಚಾಮರಾಜನಗರದಲ್ಲಿ ನಡೆದಿದೆ. 


ಚಾಮರಾಜನಗರ (ಜ.27): ಸಂಬಂಧಿಕರಿಗೆ ವಿವಾಹ ಆಹ್ವಾನ ಪತ್ರಿಕೆ ಕೊಡಲು ತಮಿಳುನಾಡಿನಿಂದ ಬಂದಿದ್ದ ಕುಟುಂಬವೊಂದು ಕಾರು ಕಳೆದುಕೊಂಡ ಘಟನೆ ಯಳಂದೂರು ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. 

ತಮಿಳುನಾಡಿನ ಕೊಯಮತ್ತೂರು ನಿವಾಸಿಯಾದ ಕೀರ್ತಿ ಮತ್ತು ವೆಂಕಟೇಶ್‌ ಎಂಬವರು ಕಾರು ಕಳೆದುಕೊಂಡವರು. ಅಕ್ಕನ ಮದುವೆಗೆ ಸಂಬಂಧಿಕರನ್ನು ಆಹ್ವಾನಿಸಲು ಸ್ನೇಹಿತರೊಬ್ಬರಿಂದ ಮಾರುತಿ ಸ್ವಿಫ್ಟ್‌ ಕಾರನ್ನು ಪಡೆದು ತಂದಿದ್ದ ಅವರು ಅದನ್ನು ಶನಿವಾರ ರಾತ್ರಿ ತಮ್ಮ ಸಂಬಂಧಿಕರ ಮನೆ ಮುಂಭಾಗವೇ ನಿಲ್ಲಿಸಿದ್ದರಂತೆ. 

Tap to resize

Latest Videos

ಹಾಸನದ ವಿಚಿತ್ರ ಮದುವೆ... ನಾಲ್ಕು ದಿನ ಇದ್ದಾಗ ತಾಳಿ ಕಟ್ಟಿದ್ದ ಬಾಯ್ ಫ್ರೆಂಡ್!

ಆದರೆ ಭಾನುವಾರ ಬೆಳಗ್ಗೆ ಎದ್ದು ನೋಡಿದಾಗ ಕಾರು ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಸಾಂದರ್ಭಿಕ ಚಿತ್ರ)

click me!