ಶವ ಸಂಸ್ಕಾರಕ್ಕೆ ಮೃತ ವ್ಯಕ್ತಿಯ ಆಧಾರ್‌ ಕಡ್ಡಾಯವಲ್ಲ: ಸ್ಪಷ್ಟನೆ

By Kannadaprabha NewsFirst Published Feb 12, 2020, 9:04 AM IST
Highlights

ಬಿಬಿಎಂಪಿಯ ವಿದ್ಯುತ್‌ ಚಿತಾಗಾರ ಹಾಗೂ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಮೃತ ವ್ಯಕ್ತಿಯ ಆಧಾರ್‌ ಗುರುತಿನ ಚೀಟಿ ಕಡ್ಡಾಯವಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಬೆಂಗಳೂರು(ಫೆ.12): ಬಿಬಿಎಂಪಿಯ ವಿದ್ಯುತ್‌ ಚಿತಾಗಾರ ಹಾಗೂ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಮೃತ ವ್ಯಕ್ತಿಯ ಆಧಾರ್‌ ಗುರುತಿನ ಚೀಟಿ ಕಡ್ಡಾಯವಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಈ ಕುರಿತು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರವಿಕುಮಾರ್‌ ಸುರಪುರ ಸುತ್ತೋಲೆ ಹೊರಡಿಸಿದ್ದು, ಶವ ಸಂಸ್ಕಾರಕ್ಕೆ ಮೃತ ವ್ಯಕ್ತಿಯ ಆಧಾರ್‌ ಗುರುತಿನ ಚೀಟಿ ಕಡ್ಡಾಯವಲ್ಲ. ಪಾಲಿಕೆಯ ವಿವಿಧ ಚಿತಾಗಾರ ಹಾಗೂ ರುದ್ರ ಭೂಮಿಯಲ್ಲಿನ ಸಿಬ್ಬಂದಿ, ಮೃತ ವ್ಯಕ್ತಿಯ ಶವ ಸಂಸ್ಕಾರಕ್ಕೆ ಆಧಾರ್‌ ಕಾರ್ಡ್‌ ಕೇಳುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಲಾಗಿದೆ.

ಕೊರೋನಾಗೆ ಹೋಮಿಯೋಪತಿ ಔಷಧ ಇಲ್ಲ: ಸರ್ಕಾರ ಸ್ಪಷ್ಟನೆ!

ಆಧಾರ್‌ ಕಾರ್ಡ್‌ ಪಡೆಯುವಂತೆ ಯಾವುದೇ ಸೂಚನೆ ನೀಡಿಲ್ಲ. ಸೂಚನೆ ನೀಡಿರುವ ದಾಖಲೆಗಳನ್ನು ಹೊರತುಪಡಿಸಿ, ಬೇರೆ ದಾಖಲೆಗಳನ್ನು ಕೇಳಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

ಶವ ಸಂಸ್ಕಾರಕ್ಕೆ ನೀಡಬೇಕಾದ ದಾಖಲೆಗಳು:

ವ್ಯಕ್ತಿ ಮರಣ ಹೊಂದಿರುವ ಬಗ್ಗೆ ವೈದ್ಯ ಅಥವಾ ಆಸ್ಪತ್ರೆಯಿಂದ ದೃಢೀಕರಣ ಪತ್ರ, ಶವ ಸಂಸ್ಕಾರಕ್ಕೆ ತಂದಿರುವ ದೇಹವನ್ನು ಖಚಿತಪಡಿಸಿಕೊಳ್ಳುವುದಕ್ಕೆ ಮೃತ ವ್ಯಕ್ತಿಯ ಭಾವಚಿತ್ರ ಹೊಂದಿರುವ ಯಾವುದಾದರೂ ಗುರುತಿನ ಚೀಟಿ, ಸೂಕ್ತ ದಾಖಲೆ ಇಲ್ಲದ ಸಂದರ್ಭದಲ್ಲಿ ಪಾರ್ಥೀವ ಶರೀರದೊಂದಿಗೆ ಬರುವ ನಿಕಟವರ್ತಿಯಿಂದ, ವೈದ್ಯರಿಂದ ಅಥವಾ ಆಸ್ಪತ್ರೆಯಿಂದ ಶವ ಸಂಸ್ಕಾರಕ್ಕೆ ತಂದಿರುವ ಮೃತದೇಹದ ಬಗ್ಗೆ ‘ಸ್ವಯಂ ಮುಚ್ಚಳಿಕೆ ಪತ್ರ’ ಹಾಗೂ ಯಾವುದಾದರೂ ಗುರುತಿನ ಚೀಟಿ ಪಡೆದುಕೊಳ್ಳುವಂತೆ ನಿರ್ದೇಶಿಸಲಾಗಿದೆ.

click me!