Doddaballapur: ಮರಕ್ಕೆ ನೇಣು ಹಾಕಿಕೊಳ್ಳುವಾಗ ಪಂಚೆ ತುಂಡಾಗಿ ಬಿದ್ದು ಯುವಕ ಸಾವು!

Published : Jan 18, 2023, 11:29 AM IST
Doddaballapur: ಮರಕ್ಕೆ ನೇಣು ಹಾಕಿಕೊಳ್ಳುವಾಗ ಪಂಚೆ ತುಂಡಾಗಿ ಬಿದ್ದು ಯುವಕ ಸಾವು!

ಸಾರಾಂಶ

ದೊಡ್ಡಬಳ್ಳಾಪುರ ನಗರದ ಭಗತ್‌ಸಿಂಗ್‌ ಕ್ರೀಡಾಂಗಣದ ಸಮೀಪವಿರುವ ಮರಕ್ಕೆ ಸುಮಾರು 19 ವರ್ಷ ವಯಸ್ಸಿನ ಅಪರಿಚಿತ ಯುವಕನೊಬ್ಬ ತನ್ನ ಪಂಚೆಯಲ್ಲಿ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದು, ಈ ವೇಳೆ, ಪಂಚೆ ಹರಿದು, ಆತ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾನೆ.

ದೊಡ್ಡಬಳ್ಳಾಪುರ (ಜ.18) ದೊಡ್ಡಬಳ್ಳಾಪುರ ನಗರದ ಭಗತ್‌ಸಿಂಗ್‌ ಕ್ರೀಡಾಂಗಣದ ಸಮೀಪವಿರುವ ಮರಕ್ಕೆ ಸುಮಾರು 19 ವರ್ಷ ವಯಸ್ಸಿನ ಅಪರಿಚಿತ ಯುವಕನೊಬ್ಬ ತನ್ನ ಪಂಚೆಯಲ್ಲಿ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದು, ಈ ವೇಳೆ, ಪಂಚೆ ಹರಿದು, ಆತ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾನೆ.

ಯುವಕ ತನ್ನ ಪಂಚೆಯನ್ನು ಹರಿದು, ಅದನ್ನೇ ನೇಣು ಕುಣಿಕೆ ಮಾಡಿಕೊಂಡು, ಕುಣಿಕೆಗೆ ತಲೆಯೊಡ್ಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಪಂಚೆ ಹರಿದಿದ್ದು, ಆತ ನೆಲಕ್ಕೆ ಬಿದ್ದಿದ್ದಾನೆ. ರಭಸದಿಂದ ನೆಲಕ್ಕೆ ಬಿದ್ದ ವೇಳೆ ಆತನ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ದೊಡ್ಡಬಳ್ಳಾಪುರ(Doddaballapur)ದ ಶವಾಗಾರದಲ್ಲಿ ಇಡಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. 

Bengaluru : ದೀಪಾಂಜಲಿನಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

ವಿದ್ಯುತ್‌ ತಗುಲಿ ಗ್ರಾಪಂ ಮಾಜಿ ಸದಸ್ಯ ಸಾವು

ಯಮಕನಮರಡಿ: ಹೊಲದಲ್ಲಿ ವಿದ್ಯುತ್‌ ಚಾಲಿತ ಪಂಪ್‌ಸೆಟ್‌ ಚಾಲು ಮಾಡಲು ಹೋದಾಗ ಆಕಸ್ಮಿಕ ವಿದ್ಯುತ್‌ ತಗುಲಿ ಸಮೀಪದ ಗುಟಗುದ್ದಿ ಗ್ರಾಮದ ನಿವಾಸಿ, ಶಹಾಬಂದರ ಮಾಜಿ ಗ್ರಾಪಂ ಸದಸ್ಯ, ಯಮಕನಮರಡಿ ಬಿಜೆಪಿ ಮಾಧÜ್ಯಮ ಸಂಚಾಲಕ ಬಸಪ್ಪ ಬಸವಣ್ಣಿ ಪೂಜೇರಿ (ದೇಸೂರಿ) (36) ಇವರು ಮೃತಪಟ್ಟಘಟನೆ ಮಂಗಳವಾರ ನಡೆದಿದೆ. ಮೃತರಿಗೆ ಪತ್ನಿ, ಓರ್ವ ಪುತ್ರ, ಐವರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ ಇದೆ. ಈ ಕುರಿತು ಯಮಕನಮರಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಯುವ ದೇಹದಾರ್ಢ್ಯ ಪಟು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕಾರಣ ನಿಗೂಢ?

ಸಂತಾಪ ಸೂಚನೆ:

ಬಸಪ್ಪ ಪೂಜೇರಿ(ದೇಸೂರಿ) ಇವರ ನಿಧನಕ್ಕೆ ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್‌.ಟಿ.ಮೋರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ ಯಮಕನಮರಡಿ ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ಶ್ರೀಶೈಲ ಯಮಕನಮರಡಿ ಹಾಗೂ ಸಮಸ್ತ ಬಿಜೆಪಿ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.

PREV
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!