ಜ.19ರಂದು ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಕೊಡೇಕಲ್‌ನಲ್ಲಿ ಶಾಸಕ ನರಸಿಂಹನಾಯಕ (ರಾಜೂಗೌಡ) ಅವರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿದರು.
ಕೊಡೇಕಲ್ (ಜ.18) : ಜ.19ರಂದು ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಕೊಡೇಕಲ್‌ನಲ್ಲಿ ಶಾಸಕ ನರಸಿಂಹನಾಯಕ (ರಾಜೂಗೌಡ) ಅವರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ದೇಶದ ಪ್ರಧಾನಮಂತ್ರಿಗಳು ಸರ್ಕಾರದ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಮ್ಮ ಗ್ರಾಮಕ್ಕೆ ಬರುತ್ತಿರುವುದು ನಮ್ಮ ಸೌಭಾಗ್ಯವಾಗಿದ್ದು, ಈ ವೇಳೆಯಲ್ಲಿ ಲಕ್ಷಾಂತರ ಜನ ಸೇರುವುದರಿಂದ ಅವರಿಗೆ ಕಾರ್ಯಕ್ರಮದಲ್ಲಿ ಮುಕ್ತವಾಗಿ ಭಾಗವಹಿಸಲು ಬಿಜೆಪಿ ಕಾರ್ಯಕರ್ತರು(BJP workers) ಸಹಕರಿಸಿ ಕುಳಿತುಕೊಳ್ಳಲು ಆಸನ ಸೇರಿದಂತೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದಾಗ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಪಡೆದು ದೇಶದಲ್ಲಿಯೇ ಅತ್ಯುತ್ತಮ ಪ್ರಧಾನಿ ಕಾರ್ಯಕ್ರಮ ನಿರ್ವಹಿಸಿದ ಕೀರ್ತಿ ನಮ್ಮ ಸುರಪುರದ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಸಲ್ಲಿದಂತಾಗಬೇಕೆಂದು ಹೇಳಿದರು.
ಕಾರ್ಯಕ್ರಮಕ್ಕೆ ಈಗಾಗಲೇ 1ಲಕ್ಷಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, 2 ಲಕ್ಷಕ್ಕಿಂತ ಹೆಚ್ಚಿನ ಜನತೆ ಭಾಗವಹಿಸುವ ನಿರೀಕ್ಷೆವಿರುವ ಕಾರಣ ಜಿಲ್ಲಾಡಳಿತದಿಂದ ಸೂಕ್ತ ಬಂದೋಬಸ್‌್ತ ಒದಗಿಸಲಾಗಿದೆ. ಜೊತೆಗೆ ಎಸ್‌ಪಿಜಿ ಭದ್ರತೆ ಸಹ ಇದೆ. ಆದ ಕಾರಣ ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊರ್ವ ಕಾರ್ಯಕರ್ತನು ಅಗತ್ಯವಿರುವ ಸ್ಥಳಗಳಲ್ಲಿ ಟ್ರಾಪಿಕ್ ಸಮಸ್ಯೆ ಉಂಟಾಗದಂತೆ ಸ್ವಯಂ ಸೇವಕರಾಗಿ ನಿರ್ವಹಣೆ ಮಾಡಿ ಕಾರ್ಯಕ್ರಮದ ಯಶಸ್ಸಿಗೆ ನೆರವಾಗಬೇಕೆಂದು ತಿಳಿಸಿದರು.
ಬಿಜೆಪಿ ವಿಭಾಗೀಯ ಸಂಘಟನೆ ಕಾರ್ಯಸದರ್ಶಿ ಅರುಣ ಭಿನ್ನಾಡೆ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ, ಯಾದಗಿರಿ ಜಿಲ್ಲಾ ಎಸ್‌ಪಿ ಡಾ. ಸಿ.ಬಿ. ವೇದಮೂರ್ತಿ, ಸ್ಥಳೀಯ ಬಿಜೆಪಿ ಹಾಗೂ ತಾಲೂಕಿನ ಪ್ರಮುಖ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಇತರರಿದ್ದರು
ಮೋದಿ ಆಗಮನ ಸಗರ ನಾಡಿಗೆ ಹೆಮ್ಮೆ: ರಾಜಾ ಕೃಷ್ಣಪ್ಪ ನಾಯಕ
ಸುರಪುರ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ(PM Narendra Modi)ಯವರು ಸಗರನಾಡಿನ ರೈತರ ಅನುಕೂಲಕ್ಕಾಗಿ ಸ್ಕಾಡ ಗೇಟ್, ಅಮೃತ ಜಲಧಾರೆ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆಗೆ ಆಗಮಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಬಲವಂತ ಬಹರಿ ಬಹದ್ದೂರ ಸುರಪುರ ಸಂಸ್ಥಾನದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ವಾಗತಿಸಲಾಗುವುದು ಎಂದು ಸಂಸ್ಥಾನದ ಅರಸು ರಾಜಾ ಕೃಷ್ಣಪ್ಪ ನಾಯಕ(Raja krishnappa nayaka) ಹೇಳಿದರು.
ನಗರದ ದರಬಾರ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ನದಿಗೆ ಅಡ್ಡಲಾಗಿ ಕ್ರಿಶ 1715ರಲ್ಲೇ ರಾಜಾ ಪೀತಾಂಬರಿ ಬಹರಿ ಪಿಡ್ಡನಾಯಕ ಅವರ ಕಾಲದಲ್ಲೇ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ನಂತರ ಅಂದಿನ ಪ್ರಧಾನಮಂತ್ರಿಗಳಾಗಿದ್ದ ಲಾಲ್ ಬಹುದ್ದೂರ್ ಶಾಸ್ತಿ್ರ ಯವರು 1964ರಲ್ಲಿ ಅಂದಿನ ಶಾಸಕರಾಗಿದ್ದ ನಮ್ಮ ತಾತನವರಾದ ರಾಜಾ ಪಿಡ್ಡನಾಯಕ ಬಲವಂತ ಬಹರಿ ಬಹದ್ದೂರ್ ಅವರ ಸಹಭಾಗಿತ್ವದಲ್ಲಿ ಶಂಕುಸ್ಥಾಪನೆ ನೆರವೇರಿ 12 ವರ್ಷಗಳ ಕಾಲ ಜಲಾಸಯ ನಿರ್ಮಾಣ ನಡೆದಿವೆ ಎಂದು ತಿಳಿಸಿದರು.
ಈ ನಾಡಿನ ಅನ್ನದಾತರ ಒಳಿತಿಗಾಗಿ ಅಂದಿನ ನಮ್ಮ ರಾಜರು ಕೃಷ್ಣಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದೇ ಅಣೆಕಟ್ಟಿನ ಮುಂಭಾಗದಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸೇನಾನಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅವರ 25 ಅಡಿ ಎತ್ತರದ ಅಶ್ವಾರೂಢ ಪ್ರತಿಮೆಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಮಳಖೇಡಕ್ಕೆ ಆಗಮಿಸಲಿರುವ ಪ್ರಧಾನಿಗೆ ವಿಶೇಷ ಉಡುಗೊರೆ
ಈ ಭಾಗದ ರೈತರ ಅಭಿವೃದ್ಧಿಗಾಗಿ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಾಸಕ ನರಸಿಂಹ ನಾಯಕ ರಾಜೂಗೌಡ ಅವರಿಗೆ ಸಂಸ್ಥಾನದ ವತಿಯಿಂದ ಅಭಿನಂದನೆಗಳು ತಿಳಿಸುವೆ. ನಮ್ಮ ಸಗರನಾಡಿನಲ್ಲಿ ಮೋದಿಯವರ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಪ್ರಧಾನಮಂತ್ರಿ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ಬಂದಿಲ್ಲ. ಆಹ್ವಾನಿಸಿದರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವೆ ಎಂದು ತಿಳಿಸಿದರು. ರಾಜಾ ಲಕ್ಷ್ಮೇನಾರಾಯಣ ನಾಯಕ, ವಿಜಯರಾಘವನ್, ಶ್ರೀಹರಿರಾವ್ ಅದೋನಿ, ಶಿವಕುಮಾರ ಮಸ್ಕಿ ಇತರರಿದ್ದರು.