ಬೆಂಗಳೂರಿನಲ್ಲಿ AI ತಂತ್ರಜ್ಞಾನ ಬಳಸಿ 1600 ಕಿ.ಮೀ ಉದ್ದದ ರಸ್ತೆ ಸಮೀಕ್ಷೆ; ವರದಿಯಲ್ಲೇನಿದೆ?

Published : Jul 23, 2026, 06:38 AM IST
Bengaluru Roads

ಸಾರಾಂಶ

ಬೆಂಗಳೂರಿನ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೃತಕ ಬುದ್ದಿಮತೆ ತಂತ್ರಜ್ಞಾನ ಬಳಸಿ 1600 ಕಿ.ಮೀ ಉದ್ದದ ರಸ್ತೆಗಳ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯು ರಸ್ತೆ ಗುಂಡಿಗಳು, ಮೇಲ್ಮೈ ಹಾನಿ ಮತ್ತು ಇತರ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ನಿಖರ ಮಾಹಿತಿ ನೀಡಿ, ಕಾಮಗಾರಿಗಳ ವೆಚ್ಚವನ್ನು ಅಂದಾಜಿಸಲು ಸಹಕಾರಿಯಾಗಿದೆ.

ಬೆಂಗಳೂರು: ಕೃತಕ ಬುದ್ದಿಮತೆ ತಂತ್ರಜ್ಞಾನ ಬಳಸಿ ವಾಹನಗಳಿಗೆ ವಿಶೇಷ ಕ್ಯಾಮೆರಾ ಅಳವಡಿಸಿ, ಯೋಲೊ ಇಮೇಜ್ ಪ್ರೊಸೆಸಿಂಗ್ ಮಾದರಿ ಮೂಲಕ ಪೂರ್ವ ನಗರ ಪಾಲಿಕೆ ವ್ಯಾಪ್ತಿ ಸುಮಾರು 1,600 ಕಿಲೋಮೀಟರ್ ಉದ್ದದ ರಸ್ತೆಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಗಿದೆ ಎಂದು ಪೂರ್ವ ಪಾಲಿಕೆ ವಿಭಾಗದ ಆಯುಕ್ತ ಡಿ.ಎಸ್.ರಮೇಶ್ ತಿಳಿಸಿದರು.

ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿ, ಈ ಸಮೀಕ್ಷೆಯ ಆಧಾರದ ಮೇಲೆ ನಗರ ಪಾಲಿಕೆ ವ್ಯಾಪ್ತಿಯು ರಸ್ತೆಗಳ ಸ್ಥಿತಿಗತಿ, ರಸ್ತೆ ಗುಂಡಿಗಳು, ರಸ್ತೆ ಮೇಲ್ಮೈ ಹಾನಿ, ಯುಟಿಲಿಟಿ ಸಂಪರ್ಕಕ್ಕಾಗಿ ರಸ್ತೆ ಅಗೆತ ಹಾಗೂ ಇತರೆ ಮೂಲಸೌಕರ್ಯ ಸಮಸ್ಯೆಗಳ ಕುರಿತು ನಿಖರ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದರು.

ರಸ್ತೆ ಗುಂಡಿ ಉದ್ದ ಹಾಗೂ ಅಗಲ ನಿಖರವಾಗಿ ಲೆಕ್ಕ

ವಿಷನ್ ಲ್ಯಾಂಗ್ವೇಜ್ ಮಾಡೆಲ್ ಬಳಸಿ ಪ್ರತಿ ರಸ್ತೆ ಗುಂಡಿ ಉದ್ದ ಹಾಗೂ ಅಗಲ ನಿಖರವಾಗಿ ಲೆಕ್ಕ ಹಾಕಲಾಗುತ್ತಿದ್ದು, ಉಧಾಹರಣೆಗೆ ವಿಭೂತಿಪುರ ವಾರ್ಡ್ ನಲ್ಲಿ ಸುಮಾರು 144 ಚದರ ಮೀಟರ್ ಪ್ಯಾಚ್ ವರ್ಕ್ ಅಗತ್ಯವಿರುವುದಾಗಿ ಎಐ ವರದಿಯಲ್ಲಿ ದಾಖಲಿಸಲಾಗಿದೆ.

ಈ ರೀತಿಯ ನಿಖರ ಮಾಹಿತಿಯ ಆಧಾರದ ಮೇಲೆ ವಿವಿಧ ಅನುದಾನದಡಿಯಲ್ಲಿ ಈಗಾಗಲೇ ಅನುಮೋದನೆಯಾಗಿರುವ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಹೊರತುಪಡಿಸಿ ಇನ್ನುಳಿದ ಕಾಮಗಾರಿಗಳಿಗೆ ಅಗತ್ಯ ಪ್ರಮಾಣದ ಹಾಟ್ ಮಿಕ್ಸ್, ಸಾಮಗ್ರಿ ಹಾಗೂ ವೆಚ್ಚವನ್ನು ಪೂರ್ವದಲ್ಲಿಯೇ ಅಂದಾಜಿಸಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.

PREV
Read more Articles on
click me!

Recommended Stories

ಮೊರಾರ್ಜಿ ಶಾಲೆಯಲ್ಲಿ ನಾನ್‌ವೆಜ್‌ ಊಟಕ್ಕೆ ತಾರತಮ್ಯ: ಮಕ್ಕಳ ಕಾದಾಟ, ಕಿರಿಯರ ಮೇಲೆ ದೌರ್ಜನ್ಯ
ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್‌ಗೆ ಹುಬ್ಬಳ್ಳಿ ಮಾರ್ಗದ ಕೂಗು: ಏನಿದು ಹೊಸ ತಿರುವು?