Udupi: ಕಾರ್ಕಳದಲ್ಲಿ ಅಪರೂಪದ ಪೊಲೀಸ್ ಪಂಜಿನ ಕವಾಯತು: ಮೈಸೂರು ದಸರಾ ನೆನಪಿಸಿದ ಆಯೋಜನೆ

By Govindaraj S  |  First Published Jan 30, 2023, 11:06 PM IST

ಸ್ವರ್ಣ ಕಾರ್ಕಳದ ಭಾಗವಾಗಿ ಕಾರ್ಕಳದಲ್ಲಿ ಹಲವು ವಿನೂತನ ಮಾತು ವೈಶಿಷ್ಟ್ಯ ಪೂರ್ಣ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು. 


ಉಡುಪಿ (ಜ.30): ಸ್ವರ್ಣ ಕಾರ್ಕಳದ ಭಾಗವಾಗಿ ಕಾರ್ಕಳದಲ್ಲಿ ಹಲವು ವಿನೂತನ ಮಾತು ವೈಶಿಷ್ಟ್ಯ ಪೂರ್ಣ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು. ಅವರು ಇಂದು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ನಡೆದ ಪೊಲೀಸ್ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಗಳೂರು ಮತ್ತು ಮೈಸೂರಿಗೆ ಸೀಮಿತವಾಗಿದ್ದ  ಪೊಲೀಸ್ ಬ್ಯಾಂಡ್ ಮತ್ತು ಮಂಜಿನ ಕವಾಯತು ಕಾರ್ಯಕ್ರಮವನ್ನು ಕಾರ್ಕಳದಲ್ಲಿ ಆಯೋಜಿಸುವ ಮೂಲಕ, ತಾಲೂಕಿಗೆ ಇನ್ನಷ್ಟು ಗರಿಮೆ, ಹೊಸತನ ನೀಡುವ ಪ್ರಯತ್ನವಾಗಿದೆ. 

ಕಾರ್ಕಳದಲ್ಲಿ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಿಗೆ  ಜನರ ಸಹಕಾರ ಉತ್ತಮವಾಗಿದೆ. ಇತ್ತೀಚೆಗೆ ಉದ್ಘಾಟನೆಯಾದ ಪರಶುರಾಮ ಥೀಮ್ ಪಾರ್ಕ್‌ಗೆ ಲಕ್ಷಾಂತರ ಜನ ಭೇಟಿ ನೀಡಿದ್ದಾರೆ. ಪಂಜಿನ ಕವಾಯತುಗೆ ಸ್ಥಳೀಯ ಭುವನೇಂದ್ರ ಕಾಲೇಜು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಸ್ವರ್ಣ ಕಾರ್ಕಳ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಉತ್ತಮವಾಗಿದೆ ಎಂದರು. 

Tap to resize

Latest Videos

undefined

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಗೇರು ನಿಗಮದ ಅಧ್ಯಕ್ಷ ಬಿ. ಮಣಿರಾಜ್ ಶೆಟ್ಟಿ,  ಕಾರ್ಕಳ ಪುರಸಭೆಯ ಅಧ್ಯಕ್ಷೆ ಸುಮ ಕೇಶವ, ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ  ಗಣಪತಿ ಕೆ, ಭುವನೇಂದ್ರ ಕಾಲೇಜು ಪ್ರಾಂಶುಪಾಲ ಮಂಜುನಾಥ  ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. 

ನಾನು ಹಿಂದೂ ವಿರೋಧಿಯಲ್ಲ: ಬಿಜೆಪಿ, ಜೆಡಿಎಸ್‌ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಎಸ್ಪಿ ಹಾಕೆ ಅಕ್ಷಯ್ ಮಚ್ಚೆಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮೈಸೂರು ದಸರಾ ಪ್ರದರ್ಶನ ದಲ್ಲಿ ಮಾತ್ರ ಕಂಡುಬರುವ ಪಂಜಿನ ಕವಾಯತು ಹಾಗೂ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಶ್ವಾನಗಳಿಂದ ಆಕರ್ಷಕ ಸಾಹಸ ಪ್ರದರ್ಶನ ನಡೆಯಿತು.

click me!