ಮೈಷುಗರ್‌ ಮುಚ್ಚಿಸಲು ಜೆಡಿಎಸ್‌ ಷಡ್ಯಂತ್ರ: ಚೆಲುವರಾಯಸ್ವಾಮಿ

By Kannadaprabha News  |  First Published Jul 23, 2023, 2:45 AM IST

ನಾಲ್ಕು ವರ್ಷಗಳ ನಂತರ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭವಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಿದ್ದು, ಇದನ್ನು ಕಂಡು ಸಂತಸಪಡದೆ ಅಪಪ್ರಚಾರಕ್ಕೆ ಷಡ್ಯಂತ್ರ ಹೆಣೆಯೋದು ಎಷ್ಟರ ಮಟ್ಟಿಗೆ ಸರಿ? ಎಂದು ಜೆಡಿಎಸ್‌ ಪಕ್ಷದವರನ್ನೇ ಗುರಿಯಾಗಿಸಿಕೊಂಡು ಪ್ರಶ್ನಿಸಿದ ಚೆಲುವರಾಯಸ್ವಾಮಿ


ಮಂಡ್ಯ(ಜು.23):  ಮೈಷುಗರ್‌ ಕಾರ್ಖಾನೆಯೊಳಗಿನ ಹಾಟ್‌ವಾಟರ್‌ ಹಳ್ಳಕ್ಕೆ ಬಿಡಲಾಗಿದ್ದು, ಅದನ್ನೇ ವಿಡಿಯೋ ಮಾಡಿ ಕಬ್ಬಿನ ರಸವನ್ನು ಹಳ್ಳಕ್ಕೆ ಬಿಡಲಾಗಿದೆ ಎಂದು ಬಿಂಬಿಸಲಾಗಿದ್ದು, ಕಾರ್ಖಾನೆ ಸ್ಥಗಿತಗೊಳ್ಳುವಂತೆ ಮಾಡಲು ಒಂದು ವರ್ಗ ಷಡ್ಯಂತ್ರ ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚೆಲುವರಾಯಸ್ವಾಮಿ ದೂರಿದರು. ಶನಿವಾರ ಕಾರ್ಖಾನೆಗೆ ಭೇಟಿ ನೀಡಿದ ಅವರು ಅಧಿಕಾರಿಗಳು, ರೈತ ಪ್ರತಿನಿಧಿಗಳಿಂದ ಈ ಬಗ್ಗೆ ಮಾಹಿತಿ ಪಡೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾಲ್ಕು ವರ್ಷಗಳ ನಂತರ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭವಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಿದ್ದು, ಇದನ್ನು ಕಂಡು ಸಂತಸಪಡದೆ ಅಪಪ್ರಚಾರಕ್ಕೆ ಷಡ್ಯಂತ್ರ ಹೆಣೆಯೋದು ಎಷ್ಟರ ಮಟ್ಟಿಗೆ ಸರಿ? ಎಂದು ಜೆಡಿಎಸ್‌ ಪಕ್ಷದವರನ್ನೇ ಗುರಿಯಾಗಿಸಿಕೊಂಡು ಪ್ರಶ್ನಿಸಿದರು.

Latest Videos

undefined

ಮಂಡ್ಯ ಜಿಲ್ಲೆಯಲ್ಲಿ 21,899 ಹೆಕ್ಟೇರ್‌ ಮಣ್ಣು ಫಲವತ್ತತೆ ಕ್ಷೀಣ..!

ಕಾರ್ಖಾನೆ ನಿತ್ಯ 3000 ಟನ್‌ವರೆಗೆ ಕಬ್ಬು ಅರೆಯುತ್ತಿದೆ. ಇಲ್ಲಿಯವರೆಗೆ 30 ಸಾವಿರ ಟನ್‌ ಕಬ್ಬು ಅರೆದಿದೆ. ಶೇ.6ರವರೆಗೆ ಇಳುವರಿ ಬರುತ್ತಿದ್ದು, ಎರಡು ಮಾದರಿಯ ಸಕ್ಕರೆ ಉತ್ಪಾದನೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.

click me!