ತಾಯಿ-ಮಗ ಸಾವಿನಲ್ಲೂ ಒಂದಾಗಿರುವ ಮನಕಲುಕುವ ಘಟನೆ ವಿಜಯಪುರ ಜಿಲ್ಲೆ, ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ನಡೆದಿದೆ.
ವಿಜಯಪುರ (ನ.30) ತಾಯಿ-ಮಗ ಸಾವಿನಲ್ಲೂ ಒಂದಾಗಿರುವ ಮನಕಲುಕುವ ಘಟನೆ ವಿಜಯಪುರ ಜಿಲ್ಲೆ, ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ನಡೆದಿದೆ.ಅನಾರೋಗ್ಯದಿಂದಾಗಿ ಮಗ ಮೃತಪಟ್ಟಿದ್ದಾನೆ. ಮಗನ ಸಾವಿನ ಸುದ್ದಿ ತಿಳಿದು ತಾಯಿ ದುಃಖ ತಡೆಯಲಾಗದೆ ಕುಸಿದುಬಿದ್ದಿದ್ದಾಳೆ. ಮಗ ಮೃತಪಟ್ಟ ಒಂದು ತಾಸಿನಲ್ಲೇ ತಾಯಿ ಹೃದಯಾಘಾತದಿಂದ ಕೊನೆಯುಸಿರೆಳಿದಿದ್ದಾಳೆ.
ಮಗ ಸತ್ತ ತಾಸಿನೊಳಗೆ ತಾಯಿಯೂ ಮೃತಪಟ್ಟಿದ್ದಾಳೆ. ಮನಕಲುಕುವ ಈ ಘಟನೆಯಿಂದ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.
ಇಂದು ಸಂಜೆ ಅನಾರೋಗ್ಯದಿಂದ ಶರಣಪ್ಪ ಚನ್ನಮಲ್ಲಪ್ಪ ರೂಗಿ(48) ನಿಧನರಾಗಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿದ ತಾಯಿ ಸುಗಲಾಬಾಯಿ ಚನ್ನಮಲ್ಲಪ್ಪ ರೂಗಿ (65) ತೀವ್ರ ಆಘಾತಕ್ಕೊಳಗಾಗಿದ್ದಾಳೆ. ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಈ ಘಟನೆಯಿಂದ ಇಡೀ ಗ್ರಾಮವೇ ದುಃಖದಲ್ಲಿ ಮುಳುಗಿದೆ.
ಅನ್ಯೋನ್ಯವಾಗಿ ಬದುಕಿ ಸಾವಿನಲ್ಲೂ ಒಂದಾದ ದಂಪತಿ