ಕೋಟೆನಾಡಿನಲ್ಲಿ 13 ದಿನದ ಹೆಣ್ಣು ಶಿಶುವಿನ ಮೇಲೆ ಕೋತಿ ದಾಳಿ

By Govindaraj S  |  First Published Jul 16, 2023, 10:36 AM IST

ಜಿಲ್ಲೆಯ ಚಳ್ಳಕೆರೆ ತಾಲೂಕಿನ ತೊರೆಕೋಲಮ್ಮನಹಳ್ಳಿಯ ಮಂಜುಳಾ-ಸಿದ್ದೇಶ್ ದಂಪತಿಯ 13 ದಿನದ ನವಜಾತ ಶಿಶುವಿನ ಮೇಲೆ ಕೋತಿ ದಾಳಿ ಮಾಡಿದೆ. ಈ ವೇಳೆ ಮಗುವಿನ ಹಣೆ, ತಲೆ ಭಾಗದಲ್ಲಿ ಗಾಯವಾಗಿದ್ದು, ಗಾಬರಿಗೊಂಡ ತಾಯಿ ಜೋರಾಗಿ ಕೂಗಿದಾಗ ಕೋತಿ ಓಡಿ ಹೋಗಿದೆ. 


ಚಿತ್ರದುರ್ಗ (ಜು.16): ಕೋಟೆನಾಡು ಜಿಲ್ಲೆಯ ಚಳ್ಳಕೆರೆ ತಾಲೂಕಿನ ತೊರೆಕೋಲಮ್ಮನಹಳ್ಳಿಯ ಮಂಜುಳಾ-ಸಿದ್ದೇಶ್ ದಂಪತಿಯ 13 ದಿನದ ನವಜಾತ ಶಿಶುವಿನ ಮೇಲೆ ಕೋತಿ ದಾಳಿ ಮಾಡಿದೆ. ಈ ವೇಳೆ ಮಗುವಿನ ಹಣೆ, ತಲೆ ಭಾಗದಲ್ಲಿ ಗಾಯವಾಗಿದ್ದು, ಗಾಬರಿಗೊಂಡ ತಾಯಿ ಜೋರಾಗಿ ಕೂಗಿದಾಗ ಕೋತಿ ಓಡಿ ಹೋಗಿದೆ. ಕೂಡಲೇ ಗಾಯಗೊಂಡ ಮಗುವನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಕಳೆದ ಒಂದು ವಾರದಿಂದ ಈ ಕೋತಿ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಇದೀಗ ಏಕಾಏಕಿ ಮನೆಗೆ ನುಗ್ಗಿ ಮಗುವಿನ ಮೇಲೆ ದಾಳಿ ಮಾಡಿದ್ದು, ಕೋತಿ ಸೆರೆಗೆ ತೊರೆಕೋಲಮ್ಮನಹಳ್ಳಿ ಗ್ರಾಮಸ್ಥರ ಆಗ್ರಹಿಸಿದ್ದಾರೆ.

ಚಿರತೆ ದಾಳಿಗೆ ಒಳಗಾಗಿದ್ದ ಹನೂರಿನ 6ರ ಬಾಲಕಿ ಚಿಕಿತ್ಸೆ ಫಲಿಸದೆ ಸಾವು: ಮನೆಯ ಮುಂದೆ ಆಟವಾಡುತ್ತಿದ್ದಾಗ ಚಿರತೆ ದಾಳಿ ನಡೆಸಿ ತೀವ್ರ ಗಾಯಗೊಂಡಿದ್ದ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದ ಸುಶೀಲ (6) ಎಂಬ ಬಾಲಕಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾಳೆ. ಕಳೆದ ಜೂ.26ರಂದು ಮನೆಯ ಮುಂಭಾಗ ಆಟವಾಡುತ್ತಿದ್ದ ಸುಶೀಲಾ ಮೇಲೆ ಚಿರತೆ ದಿಢೀರ್‌ ದಾಳಿ ನಡೆಸಿತ್ತು. ದಾಳಿಯಿಂದ ಸುಶೀಲಾಳ ದವಡೆ ಮೂಳೆ ಮುರಿದು, ತೀವ್ರವಾಗಿ ಗಾಯಗೊಂಡ ಅವಳನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 

Tap to resize

Latest Videos

ಸ್ಮಾರ್ಟ್‌ ಸಿಟಿಯಾಗಿ ದೇವನಹಳ್ಳಿ ಅಭಿವೃದ್ಧಿ: ಸಚಿವ ಮುನಿಯಪ್ಪ

ಕಳೆದ 14 ದಿನಗಳಿಂದಲೂ ಚಿಕಿತ್ಸೆ ನೀಡಿ, ಜು.11ರಂದು ಆಕೆಗೆ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆದರೆ ಕಡೆಗೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಶುಕ್ರವಾರ ರಾತ್ರಿ ಅಸುನೀಗಿದ್ದಾಳೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ. ಈ ಮಧ್ಯೆ, ಘಟನೆ ನಡೆದು 18 ದಿನವಾದರೂ ಚಿರತೆ ಸೆರೆ ಹಿಡಿಯದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿರತೆ ದಾಳಿ ನಡೆಸಿ ಸುಮಾರು 18 ದಿನಗಳೇ ಕಳೆದಿವೆ. ಚಿರತೆ ಸೆರೆಗಾಗಿ ಅದು ದಾಳಿ ನಡೆಸಿದ ಸ್ಥಳ ಹಾಗೂ ಅಕ್ಕಪಕ್ಕದಲ್ಲೇ ಮೂರು ಬೋನ್‌ಗಳನ್ನು ಇಡಲಾಗಿದೆ. ಆದರೆ, ಇದು ವರೆಗೂ ಚಿರತೆ ಬಲೆಗೆ ಬಿದ್ದಿಲ್ಲ. ಇನ್ನು, ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಐತಿಹಾಸಿಕ ಜಿ-20 ಶೃಂಗಸಭೆಗೆ ವಿಧ್ಯುಕ್ತ ತೆರೆ: ಹಂಪಿ ಬಗ್ಗೆ ಪ್ರಶಂಸೆ

ಕರಡಿ ದಾಳಿ, ರೈತನಿಗೆ ತೀವ್ರ ಗಾಯ: ಜಮೀನಿಗೆ ತೆರಳುತ್ತಿದ್ದ ರೈತರೊಬ್ಬರ ಮೇಲೆ ಕರಡಿಯೊಂದು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ಹೊರವಲಯದಲ್ಲಿ ಬುಧವಾರ ನಡೆದಿದೆ. ಪ್ರತಾಪರೆಡ್ಡಿ(45)ಕರಡಿ ದಾಳಿಗೊಳಗಾದ ರೈತ. ಪ್ರತಾಪ್‌ ತನ್ನ ಜಮೀನಿಗೆ ತೆರಳುತ್ತಿದ್ದ ವೇಳೆ ಪೋದೆಯಲ್ಲಿದ್ದ ಕರಡಿಯೊಂದು ಏಕಾಏಕಿ ದಾಳಿ ನಡೆಸಿದ್ದು, ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿದೆ. ದಾಳಿಯಿಂದ ಗಾಬರಿಗೊಂಡ ಪ್ರತಾಪ್‌ ಜೋರಾಗಿ ಕಿರುಚಿಕೊಂಡ ಕಾರಣ ಕರಡಿ ಪರಾರಿಯಾಗಿದೆ. ಸ್ಥಳೀಯರ ಸಹಕಾರದ ಮೇರೆಗೆ ಪ್ರತಾಪ್‌ರನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲು ಪಡಿಸಿ ಚಿಕಿತ್ಸೆ ಕೊಡಿಸಲಾಗಿದು, ಘಟನೆ ಕುರಿತು ಪಾವಗಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ಮಾಹಿತಿ ಇದ್ದರೂ ಗಾಯಾಳುವಿನ ಸ್ಥಿತಿಗತಿ ವಿಚಾರಿಸುವಲ್ಲಿ ಸಂಬಂಧಪಟ್ಟಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ. ತಾಲೂಕಿನಲ್ಲಿ ಮನುಷ್ಯರ ಮೇಲೆ ಪದೇ ಪದೇ ಪ್ರಾಣಿ ದಾಳಿ ನಡೆಯುತ್ತಿದ್ದು, ಸೂಕ್ತ ಕ್ರಮವಹಿಸುವಲ್ಲಿ ಇಲ್ಲಿನ ಅರಣ್ಯ ಇಲಾಖೆ ನಿರ್ಲಕ್ಷ್ಯವಹಿಸಿದೆ ಎಂದು ಸಾರ್ವಜನಿಕರು ಆಸಮಾಧಾನ ವ್ಯಕ್ತಪಡಿಸಿದ್ದಾರೆ.

click me!