ಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ಬಿದ್ದ ಹಣವನ್ನು ಒಂದುಗೂಡಿಸಿ ಕಳೆದುಕೊಂಡ ವ್ಯಕ್ತಿಗೆ ಮರಳಿಸಿ ಮಾನವೀಯತೆ ಮೆರೆದ ಘಟನೆ ಬುಧವಾರ ಇಲ್ಲಿನ ಮೇಲಿನಕೇರಿಯಲ್ಲಿ ನಡೆದಿದೆ.
ಗೋಕರ್ಣ (ಏ.21) : ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ಬಿದ್ದ ಹಣವನ್ನು ಒಂದುಗೂಡಿಸಿ ಕಳೆದುಕೊಂಡ ವ್ಯಕ್ತಿಗೆ ಮರಳಿಸಿ ಮಾನವೀಯತೆ ಮೆರೆದ ಘಟನೆ ಬುಧವಾರ ಇಲ್ಲಿನ ಮೇಲಿನಕೇರಿಯಲ್ಲಿ ನಡೆದಿದೆ.
ಮಧ್ಯಾಹ್ನದ ವೇಳೆ ಹಳೆ ಚೆಕ್‌ಪೋಸ್ಟ್ ಬಳಿ 500 ರೂಪಾಯಿಗಳ ನೋಟುಗಳು ಬಿದ್ದು ಹರಡಿದ್ದವು. ಇದನ್ನು ದಾರಿಯಲ್ಲಿ ಸಂಚರಿಸುವರು ಒಂದು ಮಾಡುತ್ತಿರುವ ವೇಳೆ ಜೊತೆಯಾದ ಅಂಕೋಲಾದ ಎಂಜಿನಿಯರ್ ಸೂರಜ್ ನಾಯ್ಕ(Sooraj naik) ಹಣ ಒಟ್ಟುಗೂಡಿಸಿ ಹತ್ತಿರದಲ್ಲಿದ್ದ ಗಣಂಜಯ ಹೊಟೇಲ್ ಮಾಲೀಕ ಮಹಾಬಲೇಶ್ವರ ಕೋ ಆಪ್‌ರೇಟಿವ್ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ ಬಳಿ ನೀಡಿದರು.
undefined
ಎಟಿಎಂ ಸ್ಥಳದಲ್ಲಿ ಹಣ ಸಿಕ್ಕಿದ್ದರಿಂದ ಆ ಬ್ಯಾಂಕ್‌ಗೆ ತೆರಳಿ ವಿಷಯ ತಿಳಿಸಿದ್ದು, ಬ್ಯಾಂಕ್‌ನವರು ಕಾರ್ಡ್ ಆಧಾರದ ಮೇಲೆ ಖಾತೆದಾರರನ್ನು ಪತ್ತೆ ಮಾಡಿದ್ದಾರೆ. ನಂತರ ದೂರವಾಣಿ ಮೂಲಕ ಸಂಪರ್ಕಿಸಿದಾಗ ತನ್ವೀರ ಎಂಬವರು ಹಣ ಕಳೆದುಕೊಂಡವರು ಎಂದು ತಿಳಿದು ಬಂದಿದೆ. ನಂತರ ಗಣಂಜಯ ಹೊಟೇಲ್‌ನಲ್ಲಿ ಅವರಿಗೆ ಹಣ ತಲುಪಿಸಲಾಗಿದೆ. ಒಟ್ಟು 25 ಸಾವಿರ ರೂಪಾಯಿಯನ್ನು ವಾಪಸ್ ಮಾಡಿದ್ದು, ಇವರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸಿದ್ದಾರೆ. ಈ ವೇಳೆ ಮೋಹನ ನಾಯಕ, ಸೋಮನಾಥ ನಾಯಕ, ಸೂರಜ್ ನಾಯ್ಕ ಉಪಸ್ಥಿತರಿದ್ದರು.
ಕುತೂಹಲ: ಏಕಾಏಕಿ ರಸ್ತೆಯಲ್ಲಿ ಒಣಗಿದ ಎಲೆಯಂತೆ ಎಲ್ಲೆಡೆ ಗರಿ ಗರಿ ನೋಟುಗಳು ಹರಿಡಿದ್ದರಿಂದ ಜನರು ಒಮ್ಮೆ ಕಂಗಾಲಾದರು. ಚುಣಾವಣೆಯ ಸಮಯದಲ್ಲಿ ಈ ಘಟನೆ ಜನರಲ್ಲಿ ಕೆಲಕಾಲ ತೀವ್ರ ಕುತೂಹಲ ಮೂಡಿಸಿತ್ತು.
ಮಿಸ್ ಆಗಿ 10 ಸಾವಿರ ರೂಪಾಯಿ ಕಳಿಸಿದ ಪ್ರಯಾಣಿಕ, ವಾಪಾಸ್ ಕಳಿಸಿದ ಆಟೋ ಚಾಲಕ!