ಚಾರ್ಮಾಡಿ ಘಾಟಿನಲ್ಲಿ 100 ಅಡಿ ಪ್ರಪಾತಕ್ಕೆ ಉರುಳಿ ಬಿದ್ದ ಲಾರಿ, ಪ್ರಾಣ ಉಳಿಸಿದ ಮರ: ಹೇಗೆ ಗೊತ್ತಾ?

By Govindaraj S  |  First Published Sep 16, 2023, 10:43 PM IST

ದಟ್ಟ ಮಂಜು ಹಾಗೂ ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಸುಮಾರು ನೂರು ಅಡಿ ಆಳದ ಪ್ರಪಾತಕ್ಕೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಸೋಮನಕಾಡು ಎಂಬಲ್ಲಿ ನಡೆದಿದೆ. ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.16): ದಟ್ಟ ಮಂಜು ಹಾಗೂ ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಸುಮಾರು ನೂರು ಅಡಿ ಆಳದ ಪ್ರಪಾತಕ್ಕೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಸೋಮನಕಾಡು ಎಂಬಲ್ಲಿ ನಡೆದಿದೆ. ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Tap to resize

Latest Videos

undefined

ಪ್ರಪಾತಕ್ಕೆ ಬಿದ್ದ ಲಾರಿ, ಇಬ್ಬರ ಜೀವ ಉಳಿಸಿದ ಮರ: ಲಾರಿ ಪ್ರಪಾತಕ್ಕೆ ಬಿದ್ದು ಸ್ವಲ್ಪ ದೂರು ಉರುಳಿಕೊಂಡು ಹೋಗುತ್ತಿದ್ದಂತೆ ಪ್ರಪಾತದಲ್ಲಿದ್ದ ಮರಕ್ಕೆ ಲಾರಿ ಸಿಕ್ಕಿಹಾಕಿಕೊಂಡ ಪರಿಣಾಮ ಲಾರಿ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಲಾರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲಿಗಳನ್ನ ತುಂಬಿಕೊಂಡು ಹೋಗುತ್ತಿತ್ತು. ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಕವಿದು ಮಳೆ ಸುರಿಯುತ್ತಿದ್ದ ಕಾರಣ ರಸ್ತೆ ಕಾಣದ ಲಾರಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. 

ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಆರೋಗ್ಯ ಸೇವೆ ನೀಡಲು ಬದ್ದ: ಸಚಿವ ದಿನೇಶ್ ಗುಂಡೂರಾವ್

ವಿಷಯ ತಿಳಿಯುತ್ತಿದ್ದಂತೆ ಬಣಕಲ್ ಪೊಲೀಸರು ಹಾಗೂ ಸ್ಥಳಿಯರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನ ಮೇಲಕ್ಕೆ ಕರೆದುಕೊಂಡು ಬಂದಿದ್ದಾರೆ.ಸ್ಥಳಕ್ಕೆ ಬಂದ ಸಮಾಜಸೇವಕ ಸ್ನೇಕ್ ಆರೀಫ್ ರೋಪ್ ಮೂಲಕ 100 ಅಡಿ ಪ್ರಪಾತಕ್ಕೆ ಹೋಗಿ ಗಾಯಾಳುಗಳನ್ನ ಕರೆತಂದಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಈ ರೀತಿ ಮೇಲಿಂದ ಮೇಲೆ ಅನಾಹುತಗಳು ಸಂಭವಿಸುತ್ತಿದ್ದು ಸ್ಥಳಿಯರು ರಾತ್ರಿ ಹಾಗೂ ಬೆಳಗ್ಗಿನ ಜಾವ ಸಂಚಾರ ಬೇಡವೆಂದು ಮನವಿ ಮಾಡಿದ್ದಾರೆ. ಆದರೂ, ಸಂಚಾರ ಮಾಡುವವರು ಈ ರೀತಿ ಅಪಘಾತಗಳಾದಾಗ ಪರದಾಡುತ್ತಿದ್ದಾರೆ. ಸ್ಥಳಿಯರು ಕೂಡ ಹಗಲಿರುಳೆನ್ನದೆ ಸ್ಥಳಕ್ಕೆ ಹೋಗಿ ಸಹಾಯ ಮಾಡುತ್ತಿದ್ದಾರೆ. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌: ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

ಇನ್ನು ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ಬಹುತೇಕ ವಾಹನಗಳು ನಿಂತು ಪೂಜೆ ಮಾಡಿಸಿ, ಕೈಮುಗಿದು ಮುಂದೆ ಹೋಗುತ್ತಾರೆ. ಆದರೆ, ಈ ದೇವಾಲಯದ ಬಳಿ ಇರುವ ಶೌಚಾಲಯದ ಮೇಲ್ಛಾವನೆ ಮಳೆ-ಗಾಳಿಗೆ ಹಾರಿ ಹೋಗಿ ತಿಂಗಳೇ ಕಳೆದಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಈವರೆಗೂ ಅದನ್ನ ದುರಸ್ಥಿ ಮಾಡಿಲ್ಲ. ಸ್ಥಳಿಯರು ಪ್ರವಾಸಿಗರಿಗೆ ಸಮಸ್ಯೆಯಾಗುತ್ತಿದೆ ಎಂದು ಹಲವು ಬಾರಿ ಮನವಿ ಮಾಡಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಎಲ್ಲೂ ಶೌಚಾಲಯ ಇಲ್ಲ. ಕೊಟ್ಟಿಗೆಹಾರ ಬಿಟ್ಟರೆ ಮತ್ತೆ ಚಾರ್ಮಾಡಿ ಘಾಟಿ ಗ್ರಾಮದಲ್ಲೇ ಶೌಚಾಲಯದ ಇರೋದು. ಚಾರ್ಮಾಡಿ ಘಾಟಿಯಲ್ಲಿ ಇರೋ ಶೌಚಾಲಯವೂ ಹಾಳಾಗಿದೆ. ಹಾಗಾಗಿ, ಪ್ರವಾಸಿಗರ ಅನುಕೂಲಕ್ಕಾಗಿ ಗಾಳಿ-ಮಳೆಗೆ ಹಾಳಾಗಿರುವ ಶೌಚಾಲಯವನ್ನ ಕೂಡಲೇ ದುರಸ್ಥಿ ಮಾಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

click me!