Koppal News: ಗುಡ್ನಾಪುರದಲ್ಲೊಂದು ಅಪರೂಪದ ಅವಿಭಕ್ತ ಕುಟುಂಬ

Published : Oct 16, 2022, 11:08 AM ISTUpdated : Oct 16, 2022, 11:11 AM IST
Koppal News: ಗುಡ್ನಾಪುರದಲ್ಲೊಂದು ಅಪರೂಪದ ಅವಿಭಕ್ತ ಕುಟುಂಬ

ಸಾರಾಂಶ

ಗುಡ್ನಾಪುರದಲ್ಲೊಂದು ಅವಿಭಕ್ತ ಕುಟುಂಬ ಒಂದೇ ತೆರನಾದ ಏಳು ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿರುವ ಸಹೋದರರು ಮನೆ ಮಾತ್ರ ಬೇರೆ ಮನಸು ಒಂದೇ

ಮಂಜುನಾಥ ಸಾಯೀಮನೆ

 ಶಿರಸಿ (ಅ.16) : ಒಂದೇ ಮನೆಯಲ್ಲಿ ವಾಸವಾಗಿದ್ದರೂ ಒಬ್ಬರಿಗೆ ಒಬ್ಬರು ಹೊಂದಾಣಿಕೆ ಆಗದ ಈ ದಿನಗಳಲ್ಲಿ ಈ ಏಳು ಅಣ್ಣ-ತಮ್ಮಂದಿರು ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದರೂ ಒಂದಾಗಿ ಇದ್ದಾರೆ. ವಿಶೇಷವೆಂದರೆ ಎಲ್ಲ ಏಳು ಮನೆಗಳನ್ನೂ ಒಂದೇ ರೀತಿ ನಿರ್ಮಿಸಿಕೊಂಡಿದ್ದಾರೆ.

Happy family : ಅವಿಭಕ್ತ ಕುಟುಂಬದಲ್ಲಿದೆ ಇಷ್ಟೊಂದು ಲಾಭ

ಶಿರಸಿ ತಾಲೂಕಿನ ಗುಡ್ನಾಪುರ ಪಂಚಾಯಿತಿ ವ್ಯಾಪ್ತಿಯ ಕಂತ್ರಾಜಿ ಗ್ರಾಮದ ರಾಜಶೇಖರ ಗೌಡರ ಕುಟುಂಬ ಮಾದರಿಯಾಗುವಂತಿದೆ. ಬಣ್ಣ, ಗಾತ್ರ, ಸೌಲಭ್ಯಗಳಿಂದ ಹಿಡಿದು ಅಣ್ಣ-ತಮ್ಮಂದಿರ ಒಂದೇ ತೆರನಾದ 7 ಮನೆ ಇಲ್ಲಿವೆ. ಹೊಂದಾಣಿಕೆ, ನಂಬಿಕೆ, ಪ್ರೀತಿ, ವಿಶ್ವಾಸ ಮತ್ತಿತರ ಕೊರತೆಯ ಕಾರಣದಿಂದ ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವ ಈಗಿನ ಕಾಲದಲ್ಲಿ ಅಪರೂಪದ ಗೌಡರ ಅವಿಭಕ್ತ ಕುಟುಂಬವೊಂದಿದೆ. ಇದು ಇತರರಿಗೆ ಮಾದರಿಯಾಗಿದೆ.

ಎಲ್ಲ ಎಂಟು ಸಹೋದರರು ಒಟ್ಟಾಗಿ ಕೃಷಿ ಮಾಡಿ ಅಕ್ಕಪಕ್ಕದಲ್ಲಿಯೇ ಒಂದೇ ತೆರನಾದ ಮನೆ ನಿರ್ಮಿಸಿಕೊಂಡಿದ್ದಾರೆ. ಏಕಕಾಲಕ್ಕೆ ಗೃಹಪ್ರವೇಶವನ್ನೂ ಮಾಡಿದ್ದಾರೆ. ಅಪರೂಪದ ಮತ್ತು ತುಂಬು ಕುಟುಂಬ ಇದಾಗಿದ್ದು ಇವರ ಒಗ್ಗಟ್ಟು ಅಚ್ಚರಿ ಮೂಡಿಸುತ್ತದೆ.

ರಾಜಶೇಖರ ಗೌಡರು ಸೇರಿದಂತೆ ಒಟ್ಟು 12 ಮಂದಿ ಕುಟುಂಬದಲ್ಲಿ 9 ಗಂಡು ಹಾಗೂ 3 ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಗೆಲ್ಲ ಮದುವೆಯಾಗಿದ್ದು 9ಗಂಡು ಮಕ್ಕಳಲ್ಲಿ ಒಬ್ಬರು ನಿಧನರಾಗಿದ್ದಾರೆ. ಇನ್ನುಳಿದ ಎಂಟು ಸಹೋದರರು ಒಗ್ಗಟ್ಟಿನಿಂದ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲಿ 42 ಜನ ಸದಸ್ಯರಿದ್ದು ಅಣ್ಣ ತಮ್ಮಂದಿರು ಇದುವರೆಗೂ ಬೇರೆ ವಾಸ ಇಲ್ಲ. ಮೂಲ ಮತ್ತು ಹಳೆ ಮನೆಯಲ್ಲಿ ರಾಜಶೇಖರ ಗೌಡರಿದ್ದು, ತಮ್ಮಂದಿರಿಗಾಗಿ ಹೊಸ ಮನೆ ನಿರ್ಮಿಸಿಕೊಟ್ಟಿದ್ದಾರೆ.

ಎಲ್ಲರೂ ಒಟ್ಟಾಗಿ ಪ್ರೀತಿಯಿಂದ ಇದ್ದೇವೆ. ಮನೆಯಲ್ಲಿ ಸದಸ್ಯರ ಸಂಖ್ಯೆ ಜಾಸ್ತಿ ಇರುವುದರಿಂದ, ಜಾಗದ ಕೊರತೆ ಕಾರಣದಿಂದ ಒಟ್ಟಾಗಿಯೇ ಮನೆಗಳ ನಿರ್ಮಾಣ ಮಾಡಿಕೊಂಡಿದ್ದೇವೆ. ಮನೆಗಳು ಬೇರೆ ನಿರ್ಮಾಣವಾದರೂ ಮನಸು ಮಾತ್ರ ಎಲ್ಲರದ್ದೂ ಒಂದೇ ತರಹ. ಹಿಂದಿನಂತೆ ಮುಂದೆಯೂ ಎಲ್ಲರೂ ಊಟ, ವ್ಯವಹಾರವನ್ನು ಒಟ್ಟಾಗಿಯೇ ಮಾಡುತ್ತೇವೆ ಎನ್ನುತ್ತಾರೆ ರಾಜಶೇಖರ ಗೌಡರ.

ಸುಮಾರು ಎರಡು ಎಕರೆ ಜಾಗ ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು ಹತ್ತು ಅಡಿ ಅಂತರದಲ್ಲಿ ಏಳು ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಒಬ್ಬರೇ ಎಂಜಿನಿಯರ್‌, ಕೆಲಸಗಾರರು ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಿರ್ಮಿಸಿದ್ದಾರೆ. ವಿಶೇಷವೆಂದರೆ ಈ ಮನೆಗಳಲ್ಲಿ ಎಲ್ಲವೂ ಒಂದೇ ತೆರನಾಗಿದ್ದು ಯಾವುದೇ ಸೌಲಭ್ಯ ವ್ಯತ್ಯಾಸವಿಲ್ಲ. ಮನೆ ಬಣ್ಣ ಸಹ ಒಂದೇ ತರಹದ್ದಾಗಿದೆ. ಎಲ್ಲ ಏಳು ಮನೆಗಳ ಗೃಹಪ್ರವೇಶ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ.

ರಾಜಶೇಖರ ಗೌಡರು ಕುಟುಂಬದ ವ್ಯವಹಾರ ನೋಡಿಕೊಳ್ಳುವವರಾಗಿದ್ದು ಇನ್ನುಳಿದ ಏಳು ಮಂದಿ ಸಹೋದರರು ಅವರಿಗೆ ಸಹಕರಿಸುತ್ತಾರೆ. 40 ಎಕರೆ ಕೃಷಿ ಜಮೀನಿನಲ್ಲಿ ಹೊಸದಾಗಿ ಅಡಕೆ ತೋಟ ಮಾಡಿಕೊಂಡಿದ್ದಾರೆ. ಇನ್ನು ಭತ್ತ, ಕಬ್ಬು, ಅನಾನಸ್‌, ಶುಂಠಿ, ಜೋಳ ಹೀಗೆ ಎಲ್ಲ ತೆರನಾದ ಬೆಳೆ ಬೆಳೆಯುತ್ತಾರೆ.

400 ವರ್ಷದಿಂದ ಜೊತೆಗೇ ಬಾಳುತ್ತಿರುವ ಅವಿಭಕ್ತ ಕುಟುಂಬ

30 ವಿವಿಧ ತಳಿಗಳ ಆಕಳುಗಳನ್ನು ಸಾಕಿರುವ ಈ ಕುಟುಂಬ ದಿನಕ್ಕೆ 20ರಿಂದ 30 ಲೀಟರ್‌ ಹಾಲು ಕರೆಯುತ್ತಾರೆ. ಮನೆ ಬಳಕೆಗಿಂತ ಜಾಸ್ತಿಯಾದ ಹಾಲನ್ನು ಡೈರಿಗೆ ನೀಡುತ್ತಾರೆ. ವಿಶೇಷವೆಂದರೆ ಎಲ್ಲ ಸಹೋದರರು ಒಟ್ಟಾಗಿಯೇ ದುಡಿದು ಆದಾಯ ಹೆಚ್ಚಿಸಿಕೊಂಡಿದ್ದಾರೆ.

ಕುಟುಂಬದ ಕೆಲ ಯುವಕರು ಮಹಾನಗರಗಳಲ್ಲಿ ಉದ್ಯೋಗದಲ್ಲಿದ್ದಾರೆ. ಹಬ್ಬದ ದಿನಗಳಲ್ಲಿ ಮನೆಗೆ ಬರುತ್ತಾರೆ. ಎಲ್ಲ ಸದಸ್ಯರೂ ಒಟ್ಟಾಗೇ ಹಬ್ಬ ಆಚರಿಸುತ್ತೇವೆ.

-ರಾಜಶೇಖರ ಗೌಡ, ಕುಟುಂಬದ ಮುಖ್ಯಸ್ಥ

PREV
Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ