ಹೊನ್ನಾವರದಲ್ಲಿ ಸೊಳ್ಳೆಕಾಟ ಹೆಚ್ಚಳ; ಆತಂಕ

Published : Oct 16, 2022, 10:45 AM IST
ಹೊನ್ನಾವರದಲ್ಲಿ ಸೊಳ್ಳೆಕಾಟ ಹೆಚ್ಚಳ; ಆತಂಕ

ಸಾರಾಂಶ

ಹೊನ್ನಾವರದಲ್ಲಿ ಸೊಳ್ಳೆಕಾಟ ವಿಪರೀತವಾಗಿದ್ದು, ಜನರು ಹೈರಾಣಾಗಿದ್ದಾರೆ. ನಿರಂತರ ಮಳೆ, ಎಲ್ಲೆಂದರಲ್ಲೆ ನಿಂತಿರುವ ಕೊಳಚೆ ನೀರು, ಕಟ್ಟಡ ನಿರ್ಮಾಣದಿಂದ ಸೊಳ್ಳೆ ಕಾಟ ವಿಪರೀತವಾಗಿದ್ದು. ಸೊಳ್ಳೆ ನಿಯಮತ್ರಣಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಹೊನ್ನಾವರ (ಆ.16) : ತಾಲೂಕಿನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅದರಲ್ಲಿಯು ಗ್ರಾಮೀಣ ಭಾಗದಲ್ಲಿ ರಕ್ತಾಸುರನಂತೆ ಮನುಷ್ಯರ ರಕ್ತ ಹೀರುವ ರಕ್ಕಸರೂಪಿಯಂತೆ ಸೊಳ್ಳೆಗಳು ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಮಳೆ ಬಂದಾಗ ಖಾಲಿ ಪ್ರದೇಶದಲ್ಲಿ ನೀರು ನಿಂತು ಅವುಗಳಲ್ಲಿ ಸೊಳ್ಳೆಗಳು ಸೃಷ್ಟಿಯಾಗುತ್ತವೆ. ಸಿಹಿ ನೀರಿನಲ್ಲಿ ಸೃಷ್ಟಿಯಾಗುವ ಸೊಳ್ಳೆಗಳು ಡೆಂಗ್ಯೂ, ಚಿಕೂನ್‌ ಗುನ್ಯಾನಂತಹ ಜೀವಕ್ಕೆ ಮಾರಕ ರೋಗ ರುಜಿನಗಳಿಗೆ ಕಾರಣವಾಗುತ್ತಿವೆ. ಈ ಮಾದರಿಯ ಸೊಳ್ಳೆಗಳು ಹೆಚ್ಚಾಗಿದ್ದು, ಜನರು ಆತಂಕದಲ್ಲಿ ಕಳೆಯುವಂತಾಗಿದೆ.

Mosquito free Home: ಮೋಡವಾದರೆ ಹೆಚ್ಚುತ್ತೆ ಸೊಳ್ಳೆ, ಇಲ್ಲಿದೆ ಪರಿಹಾರ

ಕೆಲವೆಡೆ ಜನರು ಜ್ವರಬಾಧೆಯಿಂದ ಬಳಲುತ್ತಿದ್ದು ಹವಾಮಾನ ವೈಪರೀತ್ಯವೂ ಕಾರಣವಾಗಿರಬಹುದು. ಇದನ್ನು ನಿರ್ಲಕ್ಷಿಸಿ ಸ್ಥಳೀಯ ಕ್ಲಿನಿಕ್‌ಗಳಲ್ಲಿ ಜ್ವರಕ್ಕೆ ಔಷಧಿ ಪಡೆದು ಸುಧಾರಿಸಿಕೊಳ್ಳುತ್ತಿದ್ದಾರೆ. ಜ್ವರ ಕಡಿಮೆಯಾಗದಾಗ ಮಾತ್ರ ತಜ್ಞ ವೈದ್ಯರ ಮೊರೆ ಹೋಗುತ್ತಿದ್ದಾರೆ.

ಆಸ್ಪತ್ರೆ ಸೇರುವ ಪರಿಸ್ಥಿತಿ:

ಕಟ್ಟಡ ನಿರ್ಮಾಣ ಪ್ರದೇಶ, ಖಾಲಿ ನಿವೇಶನಗಳು, ಚರಂಡಿ, ತ್ಯಾಜ್ಯ ವಿಂಗಡಣಾ ಘಟಕ ಸುತ್ತಮುತ್ತಲ ಪ್ರದೇಶಗಳು ಇದರ ಆವಾಸ ಸ್ಥಾನವಾದಂತಾಗಿದೆ. ಎಳನೀರು ಕುಡಿದು ಅಲ್ಲಲ್ಲಿ ಎಸೆಯುವುದು, ಇದರಿಂದ ಮಳೆ ಬಂದಾಗ ನೀರು ತುಂಬಿ ಸೊಳ್ಳೆಗಳ ಉತ್ಪತ್ತಿಯಾಗುತ್ತಿದೆ. ಜನರು ಸೊಳ್ಳೆ ಪರದೆ, ಬತ್ತಿ, ಸ್ಪ್ರೇಗಳ ಅವಲಂಬಿಸಿ ನಿದ್ದೆ ಮಾಡುವಂತಾಗಿದೆ. ಸೊಳ್ಳೆ ಕಚ್ಚಿಸಿಕೊಂಡು ಆಸ್ಪತ್ರೆ ಸೇರುವ ಪರಿಸ್ಥಿತಿಗೆ ತಲುಪಿದ್ದಾರೆ.

ಕ್ರಮ ಅಗತ್ಯ:

ಪಟ್ಟಣದ ಸುತ್ತಮುತ್ತಲ ಪ್ರದೇಶ ಹಾಗೂ ಕೊಳಗೇರಿಗಳಲ್ಲಿ ಸೊಳ್ಳೆಗಳ ಹಾವಳಿ ಜಾಸ್ತಿ ಇದೆ. ಇಲ್ಲಿನ ಪ್ರದೇಶದ ಮಳೆ ನೀರು ಕಾಲುವೆ ಹಾಗೂ ಮೋರಿಗಳ ಕಸ ಎತ್ತದ ಕಾರಣ ನೀರು ನಿಂತು ಸೊಳ್ಳೆ ಪ್ರಮಾಣ ಜಾಸ್ತಿಯಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಸೊಳ್ಳೆಯ ಕಾಟದಿಂದ ಮುಕ್ತಿ ಪಡೆಯಲು ಈ ನ್ಯಾಚುರಲ್ ಟ್ರಿಕ್ ಟ್ರೈ ಮಾಡಿ

ಸೊಳ್ಳೆ ಉತ್ಪತ್ತಿ ತಾಣ:

ರಸ್ತೆ, ಚರಂಡಿ ಅಕ್ಕ-ಪಕ್ಕ ಕಳೆ ಗಿಡಗಳು ಬೆಳೆದು ನಿಂತಿವೆ. ಕೆಲವೆಡೆ ರಸ್ತೆ ಬದಿಗಳಲ್ಲಿ ಜನರು ಕಸ ತಂದು ರಾಶಿ ಸುರಿಯುತ್ತಿದ್ದಾರೆ. ಹೀಗಾಗಿ ಸೊಳ್ಳೆಗಳು ಉತ್ಪತ್ತಿ ಜಾಸ್ತಿಯಾಗಿದೆ. ಸಾರ್ವಜನಿಕ ಶೌಚಾಲಯಗಳನ್ನು ಬಳಸದೇ ಬೀದಿ ಬದಿಯಲ್ಲೇ ಮೂತ್ರ ವಿಸರ್ಜನೆ ಮಾಡುವ ಕಾರಣ ಅಲ್ಲೂ ಸೊಳ್ಳೆಗಳು ಸೃಷ್ಟಿಯಾಗುತ್ತಿದೆ.

PREV
Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್