Udupi: ಸಂಕಷ್ಟದಲ್ಲಿದ್ದ ಕಾರ್ಯಕರ್ತನಿಗೆ ಮನೆ ನಿರ್ಮಿಸಿಕೊಟ್ಟ ಹಿಂದೂ ಸಂಘಟನೆ

By Sathish Kumar KH  |  First Published Jan 11, 2023, 9:57 PM IST

ಹಿಂದೂ ಸಂಘಟನೆ ಕಾರ್ಯಕರ್ತನಾಗಿ ದಶಕಗಳ ಕಾಲ ಸೇವೆ ಮಾಡಿದ್ದ ರಾಜು ಮರವಂತೆ
ಮೂರು ವರ್ಷದ ಹಿಂದೆ ನಡೆದ ಅಪಘಾತದಲ್ಲಿ ಸ್ವಂತ ಕಾಲಮೇಲೆ ನಿಲ್ಲಲೂ ಆಗದಂತಹ ಸ್ಥಿತಿ ಉಲ್ಬಣ
ಹಿಂದೂ ಸಂಘಟನೆ, ಸಮಾಜ ಸೇವಕ ಗೋವಿಂದ ಪೂಜಾರಿ ಅವರಿಂದ ಮನೆ ನಿರ್ಮಾಣ


ಉಡುಪಿ (ಜ.11):  ಆತ ಜೀವನವಿಡೀ ಸಮಾಜ ಸೇವೆಗೆ ಮುಡಿಪಿಟ್ಟ ಹಿಂದೂ ಸಂಘಟನೆ ಕಾರ್ಯಕರ್ತ. ಅಪಘಾತದಿಂದಾಗಿ ಕಾಲಿನ ಬಲ ಕಳೆದುಕೊಂಡು ಹತಾಶನಾಗಿದ್ದನು.  ನಿಲ್ಲಲೂ ಆಗಲಾರದ ಸ್ಥಿತಿಯಲ್ಲಿ ನರಳುತ್ತಿದ್ದ ಕಾರ್ಯಕರ್ತನು, ಗಟ್ಟಿಯಾದ ಸೂರು ಇಲ್ಲದೆ ಸಂಸಾರದೊಂದಿಗೆ ಬೀದಿಗೆ ಬರುವ ಸ್ಥಿತಿಯಲ್ಲಿದ್ದನು. ಈಗ ಆತನಿಗೆ ಆಸರೆಯಾಗಿ ಸಮಾಜ ಸೇವಕರೊಬ್ಬರು ನೆರಳಾಗುವಂತೆ ನೆರವು ನೀಡಿದ್ದಾರೆ. ಹಿಂದೂ ಕಾರ್ಯಕರ್ತನಿಗೆ ಹೊಸದೊಂದು ಮನೆಯನ್ನೇ ನಿರ್ಮಿಸಿಕೊಟ್ಟು, ಮತ್ತೊಮ್ಮೆ ಬದುಕು ಕಟ್ಟಿಕೊಳ್ಳುವ ಭರವಸೆ ನೀಡಿದ್ದಾರೆ.

ಬೈಂದೂರು ತಾಲೂಕು ವ್ಯಾಪ್ತಿಯ ಮರವಂತೆಯ ನಿವಾಸಿ ರಾಜು ಮರವಂತೆ ಮೊದಲಿನಿಂದಲೂ ಹಿಂದೂ ಸಂಘಟನೆಗಳ ಒಡನಾಟದಲ್ಲಿದ್ದ ಕಾರ್ಯಕರ್ತ. ಮರವಂತೆ ಭಾಗದಲ್ಲಿ ಸಂಘಟನೆಯನ್ನು  ಕಟ್ಟಿ ಬೆಳೆಸುವಲ್ಲಿ ರಾಜು ಮರವಂತೆ ಪಾತ್ರ ಬಲು ದೊಡ್ಡದು. ಈ ಭಾಗದಲ್ಲಿ ಜನರ ಸಂಕಷ್ಟಗಳಿಗೆ ಹೆಗಲು ಕೊಡುತ್ತಿದ್ದಾತ ಅಪಘಾತದಿಂದಾಗಿ ಇನ್ನೊರ್ವರ ಆಸರೆ ಇಲ್ಲದೆ ನಿಲ್ಲಲೂ ಆಗದ ಪರಿಸ್ಥಿತಿಗೆ ತಲುಪಿದ್ದರು. 20 ವರ್ಷಗಳ ಕಾಲ ನಿರಂತರ ಜನರ ಒಡನಾಟದಲ್ಲಿದ್ದಾತ, ಮೂರು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಕಾಲಿನ ಬಲ ಕಳೆದುಕೊಂಡು ಮಂಚ ಹಿಡಿದರು.

Tap to resize

Latest Videos

undefined

Shourya sanchalana: ಇಸ್ಲಾಂ ದಾಳಿ​ಗೆ ಜಗ್ಗದೇ ಉಳಿದ ಹಿಂದೂ ಧರ್ಮ: ಸುನೀಲ್‌

ಮನೆಯಲ್ಲಿಯೇ ಕುಳಿತು ಕಣ್ಣೀರು ಹಾಕುತ್ತಿದ್ದ:  ಅತ್ತ ಕೆಲಸಕ್ಕೂ ಹೋಗಲಾರದೆ ಮನೆಯಲ್ಲಿಯೇ ಕುಳಿತು ಕಣ್ಣೀರಿನಲ್ಲಿ ದಿನದೂಡುತ್ತಿದ್ದಾಗ, ಸಮಾಜ ಸೇವಕರು ನೆರವಿಗೆ ಬಂದಿದ್ದಾರೆ. ಸಮಾಜ ಸೇವಕ ಡಾ.ಗೋವಿಂದ ಬಾಬು ಪೂಜಾರಿ ಅವರು ನೆರವು ನೀಡಿದ್ದಾರೆ. ಎರಡು ವರ್ಷಗಳಿಂದ ತನ್ನ ಕಾಲಿನ ಸ್ವಾದೀನ ಕಳೆದುಕೊಂಡು ದುಡಿಮೆ ಇಲ್ಲದೇ, ಮನೆಯಲ್ಲೇ ಇದ್ದನು. ಉಡುಪಿಯ ರಾಜು ಮರವಂತೆ ಕುಟುಂಬಕ್ಕೆ ಉದ್ಯಮಿ ಗೋವಿಂದ ಬಾಬು ಪೂಜಾರಿ ಆಶ್ರಯದಾತರಾಗಿದ್ದಾರೆ. ರಾಜು ಮರವಂತೆಯ ಮನೆ ಕಟ್ಟುವ ಕನಸು ಸಾಕಾರಗೊಳಿಸಿದ್ದಾರೆ. ಅದರ ಫಲವೇ ವರಲಕ್ಷೀ ನಿಲಯ ಎನ್ನುವ ಈ ಸುಂದರ ಮನೆಯಾಗಿದೆ. 

ವರಲಕ್ಷೀ ಚಾರಿಟೇಬಲ್ ಟ್ರಸ್ಟ್ ಮೂಲಕ ಮನೆ: ಗೋವಿಂದ ಬಾಬು ಪೂಜಾರಿ ಅವರು, ಇದುವರೆಗೆ ತಮ್ಮ ವರಲಕ್ಷೀ ಚಾರಿಟೇಬಲ್ ಟ್ರಸ್ಟ್ ಮೂಲಕ 10 ಮನೆಯನ್ನು ಬಡವರಿಗೆ ಉಚಿತವಾಗಿ ನೀಡಿದ್ದು, 11 ನೇ ಮನೆಯಾಗಿ ರಾಜು ಪೂಜಾರಿಯವರಿಗೆ ಮನೆ ನಿರ್ಮಾಣ ಮಾಡಿದ್ದಾರೆ. ಮನೆ ನಿರ್ಮಿಸಿ ಅದ್ದೂರಿಯಾಗಿ, ಗೃಹಪ್ರವೇಶ ಕಾರ್ಯಕ್ರಮ ಕೂಡ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವದೂತ ವಿನಯ್ ಗುರೂಜಿ ಅವರು, ಮನೆ ನಿರ್ಮಾಣದ ಒಳ್ಳೆಯ ಕೆಲಸವನ್ನು ಶ್ಲಾಘಿಸಿ, ರಾಜು ಮತ್ತು ಪೂಜಾರಿ ಅವರಿಗೆ ಮುಂದಿನ ದಿನಗಳಲ್ಲಿ ತಾವು ಕೂಡ ನೆರವಾಗುವ ಭರವಸೆ ನೀಡಿದರು. ಸುಂದರ ಕಾರ್ಯಕ್ರಮದಲ್ಲಿ ಹಿಂದೂ ಮುಖಂಡ ಶರಣ್ ಪಂಪ್‌ವೆಲ್, ಚೈತ್ರಾ ಕುಂದಾಪುರ ಸಹಿತ ನೂರಾರು ಹಿಂದೂ ಸಂಘಟನೆ ಕಾರ್ಯಕರ್ತರು ಭಾಗವಹಿಸಿ ಶುಭಕೋರಿದರು.

ಮಕ್ಕಳಿಗೆ ಸಾತ್ವಿಕ ಆಹಾರ ನೀಡಿ, ಮಾಂಸವನ್ನು ವಧೆ ಮಾಡಿ ತೂಗು ಹಾಕಬೇಡಿ: ಪೇಜಾವರ ಶ್ರೀ

ಒಟ್ಟಾರೆಯಾಗಿ ಹಿಂದೂ ಸಂಘಟನೆಗಳಿಗೆ ದುಡಿದು ಕೊನೆಯಲ್ಲಿ ಕಷ್ಟಕ್ಕೆ ಬಿದ್ದರೆ ಸಂಘಟನೆ ನೆರವಿಗೆ ಬರುತ್ತದೆ ಎನ್ನುವ ಸಂದೇಶಗೆ ಈ ಮನೆ ಸಾಕ್ಷಿಯಾಗಿದೆ. ಅಲ್ಲದೇ ಕಾಲು ಕಳೆದುಕೊಂಡು ಜೀವನ ಮುಗಿಯಿತು ಎಂದು ಕಣ್ಣೀರು ಹರಿಸುತ್ತಿದ್ದ ಸಂಘದ ಕಾರ್ಯಕರ್ತನ ಮೊಗದಲ್ಲಿ ಆನಂದ ಭಾಷ್ಪ ಮೂಡಿದೆ.

click me!