ಅವೈಜ್ಞಾನಿಕ ಮೀನುಗಾರಿಕೆ ವಿರುದ್ಧ ಬೀದಿಗಿಳಿದ ಮೀನುಗಾರರು: ಕಠಿಣ ಕ್ರಮ ಕೈಗೊಳ್ಳಲು ಒತ್ತಾಯ

By Govindaraj SFirst Published Jan 11, 2023, 9:03 PM IST
Highlights

ಮೀನುಗಾರರ ಭವಿಷ್ಯದ ದೃಷ್ಠಿಯಿಂದ ರಾಜ್ಯ ಮತ್ತು ಕೇಂದ್ರ ಸರಕಾರ ಅವೈಜ್ಞಾನಿಕ ಮೀನುಗಾರಿಕೆ ನಡೆಸದಂತೆ ನಿಷೇಧಿಸಿ ಆದೇಶ ಹೊರಡಿಸಿದೆ. ಆದರೂ, ಈ ನಿಯಮಗಳನ್ನು ಧಿಕ್ಕರಿಸಿ ಇಂದಿಗೂ   ಬುಲ್‌ಟ್ರಾಲ್ ಹಾಗೂ ಲೈಟ್ ಫಿಶಿಂಗ್ ಮೀನುಗಾರಿಕೆಯನ್ನು ಭರ್ಜರಿಯಾಗಿ ನಡೆಸಲಾಗುತ್ತಿದೆ.‌

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ (ಜ.11): ಮೀನುಗಾರರ ಭವಿಷ್ಯದ ದೃಷ್ಠಿಯಿಂದ ರಾಜ್ಯ ಮತ್ತು ಕೇಂದ್ರ ಸರಕಾರ ಅವೈಜ್ಞಾನಿಕ ಮೀನುಗಾರಿಕೆ ನಡೆಸದಂತೆ ನಿಷೇಧಿಸಿ ಆದೇಶ ಹೊರಡಿಸಿದೆ. ಆದರೂ, ಈ ನಿಯಮಗಳನ್ನು ಧಿಕ್ಕರಿಸಿ ಇಂದಿಗೂ   ಬುಲ್‌ಟ್ರಾಲ್ ಹಾಗೂ ಲೈಟ್ ಫಿಶಿಂಗ್ ಮೀನುಗಾರಿಕೆಯನ್ನು ಭರ್ಜರಿಯಾಗಿ ನಡೆಸಲಾಗುತ್ತಿದೆ.‌ ಅಧಿಕಾರಿಗಳು ಕೂಡಾ ಸುಮ್ಮನಿದ್ದಾರೆ. ಇದನ್ನು ವಿರೋಧಿಸಿ ನಾಡ ದೋಣಿ ಮೀನುಗಾರರು ಬೀದಿಗಿಳಿದಿದ್ದು, ಅವೈಜ್ಞಾನಿಕ ಮೀನುಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ. 

ಹೌದು! ರಾಜ್ಯದ ಕರಾವಳಿಯಲ್ಲಿ ಸುಮಾರು 4500ಕ್ಕೂ ಮಿಕ್ಕಿ ಸಣ್ಣ ಟ್ರಾಲ್ ಬೋಟ್, ಆಳ ಸಮುದ್ರ ಬೋಟ್, ಪರ್ಸೀನ್ ಬೋಟ್‌ಗಳು ಯಾಂತ್ರೀಕೃತ ಮೀನುಗಾರಿಕೆ ನಡೆಸುತ್ತಿವೆ. ಸುಮಾರು 2500ಕ್ಕೂ ಮಿಕ್ಕಿ ನಾಡದೋಣಿಗಳು ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿವೆ. ಈ ನಡುವೆ ಹೊಸ ಪರ್ಸೀನ್ ಬೋಟುಗಳಿಗೆ ಅನುಮತಿಯಿಲ್ಲದಿದ್ದರೂ ರಾಜ್ಯದಲ್ಲಿ ಅಧಿಕೃತ 285 ಹಾಗೂ ಅನಧಿಕೃತವಾಗಿ 400ಕ್ಕೂ ಮಿಕ್ಕಿ ಬೆಳಕು ಕೇಂದ್ರಿತ ಪರ್ಸೀನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿವೆ. ಇದರೊಂದಿಗೆ ತಮ್ಮ ತಾತ್ಕಾಲಿಕ‌ ಲಾಭಕ್ಕಾಗಿ ಬುಲ್‌ಟ್ರಾಲ್ ಹಾಗೂ ಹೈವೋಲ್ಟೇಜ್ ಲೈಟ್ ಫಿಶಿಂಗ್ ಮೀನುಗಾರಿಕೆ ನಡೆಸಲಾಗುತ್ತಿದೆ. 

ಕೊಡಗು ಜಿಲ್ಲೆಯಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದ ತಾಪಮಾನ: ಸ್ಥಳೀಯರ ಆತಂಕ

ಈ ಕಾರಣದಿಂದಾಗಿ ಕಳೆದ 5 ವರ್ಷಗಳಿಂದ ಮೀನುಗಳ ಕ್ಷಾಮ ಉಂಟಾಗಿ ಮೀನುಗಾರರು ಬರಗಾಲವನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕಾದ ಕಾರವಾರ, ಕುಮಟ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಸಾವಿರಾರು ನಾಡದೋಣಿ ಹಾಗೂ ಸಾಂಪ್ರದಾಯಿಕ ಮೀನುಗಾರರು ಹಾಗೂ ಮೀನುಗಾರ ಮಹಿಳೆಯರು  ಇಂದು ಕಾರವಾರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿ, ಪ್ರತಿಭಟಿಸಿದ್ದಾರೆ. ರಾತ್ರಿ ಸಮಯದಲ್ಲಿ ಲೈಟ್ ಪಿಶಿಂಗ್ ಮತ್ತು ಬುಲ್ ಟ್ರಾಲ್  ಮೀನುಗಾರಿಕೆ ಮಾಡುವುದರಿಂದಾಗಿ ಮೀನಿನ ಸಂತತಿಗಳು ನಾಶವಾಗುತ್ತದೆ. 

ಇದರಿಂದಾಗಿ ಮುಂದಿನ ಪೀಳಿಗೆಗೆ ಮೀನು ನೋಡಲು ಸಿಗದಪರಿಸ್ಥಿ ನಿರ್ಮಾಣವಾಗಲಿದೆ. ಇದರಿಂದಾಗಿ ಸಮುದ್ರದ ನಿರ್ದಿಷ್ಟ ಪ್ರದೇಶದಲ್ಲಿ ಮೀನುಗಾರಿಕೆ ಮಾಡುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಭಾರೀ ಸಮಸ್ಯೆ ಉಂಟಾಗುತ್ತಿದೆ. ಇದನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ಸಾವಿರಾರು ಕುಟುಂಬಗಳು ಅತಂತ್ರದ ಸ್ಥಿತಿಯನ್ನು‌ ಎದುರಿಸುತ್ತಿವೆ.‌ ಸರಕಾರ, ಜಿಲ್ಲಾಡಳಿತ ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾನೂನು ಹೋರಾಟಕ್ಕೂ ಸಿದ್ಧ ಅಂತಿದ್ದಾರೆ ಮೀನುಗಾರ ಮುಖಂಡರು. ಇನ್ನು ಹೈ ಓಲ್ಟೇಜ್ ಲೈಟ್ ಹಾಕಿ ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲಿಂಗ್ ಮೀನುಗಾರಿಕೆ ಮಾಡುವುದರಿಂದ ಆಳ ಸಮುದ್ರದಲ್ಲಿ ಇರುವ ಎಲ್ಲಾ ಬಗೆಯ ಮೀನುಗಳು ಬಲೆಗೆ ಸಿಲುಕಿ ನಾಶವಾಗುತ್ತವೆ. 

ಲೈಟ್ ಫಿಶಿಂಗ್ ಮಾಡುವುದರಿಂದ ಮೀನಿ‌ನ ಸಂತಾನೋತ್ಪತ್ತಿಗೆ‌ ಕೂಡ ಸಮಸ್ಯೆ ಆಗಲಿದೆ. ಅನಾದಿಕಾಲದಿಂದಲೂ ನಾಡದೋಣಿ ಹಾಗೂ ಸಾಂಪ್ರದಾಯಿಕ ಮೀನುಗಾರಿಕೆ ಮಾಡುವ ಮೂಲಕವೇ ಇಲ್ಲಿನ ಮೀನುಗಾರರು ತಮ್ಮ ಬದುಕು, ಕಟ್ಟಿಕೊಂಡಿದ್ದಾರೆ.  ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲಿಂಗ್ ನಡೆಸಿ ಮೀನುಗಾರಿಕೆ ಮಾಡಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರದ ಆದೇಶವಿದ್ದರೂ ಕೆಲವು ಪ್ರಭಾವಿಗಳು ತಮ್ಮ ಪ್ರಭಾವವನ್ನು ಬಳಿಸಿಕೊಂಡು ಈ ಮೀನುಗಾರಿಕೆ ನಡೆಸುತ್ತಿದ್ದಾರೆ‌. ಕಳೆದ ಅನೇಕ ವರ್ಷಗಳಿಂದ ಇದನ್ನ ನಿಲ್ಲಸಬೇಕು ಎಂದು ಸಾಮಾನ್ಯ ಮೀನುಗಾರರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರಾದ್ರೂ ಆ ಸಮಯದಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಂಡಂತೆ ಮಾಡಿ ಮತ್ತೆ ಲೈಟ್ ಫಿಶಿಂಗ್ ನಡೆಸಲು ಅವಕಾಶ ನೀಡಲಾಗ್ತಿದೆ. 

ಸಂಸದ ಜಿ.ಎಸ್.ಬಸವರಾಜು ದೊಡ್ಡ ಲೂಟಿಕೋರ: ಶಾಸಕ ಎಸ್.ಆರ್.ಶ್ರೀನಿವಾಸ್

ಕೇವಲ  ಕ್ರಮ ತೆಗೆದುಕೊಂಡು ಬಿಡುವ ಬದಲು ಲೈಟ್ ಫಿಶಿಂಗ್ ನಡೆಸುವವರ ಬೋಟ್ ಗಳ ಲೈಸೆನ್ಸ್ ರದ್ದು ಪಡಿಸಬೇಕು. ಇಂತಹ ಅವೈಜ್ಞಾನಿಕ ಮೀನುಗಾರಿಕೆಯನ್ನು ನಿಲ್ಲಿಸಿ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಸುಸೂತ್ರವಾಗಿ ನಡೆಸುವಂತೆ ವಾತಾವರಣ ಕಲ್ಪಿಸಬೇಕಾಗಿದೆ ಅನ್ನೋ ಮೀನುಗಾರರ ಅಭಿಪ್ರಾಯ. ಒಟ್ಟಿನಲ್ಲಿ ಆಳ ಸಮುದ್ರದಲ್ಲಿ ಅವೈಜ್ಞಾನಿಕವಾಗಿ ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲಿಂಗ್  ಮಾಡೋ ಮೂಲಕ ಮೀನಿನ ಸಂತತಿಯನ್ನು ನಾಶ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೇ, ಅನಾದಿ ಕಾಲದಿಂದಲೂ ಮೀನುಗಾರಿಕೆ ನಡೆಸಿಕೊಂಡು ಜೀವನ ನಡೆಸುತ್ತಿರುವ ನಾಡದೋಣಿ ಹಾಗೂ ಸಾಂಪ್ರದಾಯಿಕ ಮೀನುಗಾರರಿಗೆ ಸಂಬಂಧ ಪಟ್ಟ ಇಲಾಖೆಗಳು ನ್ಯಾಯ ಒದಗಿಸಿಕೊಡಬೇಕಾಗಿದೆ.

click me!