ಕೊಪ್ಪಳದಲ್ಲಿ ಅ. 5ರಿಂದ ಆರ್‌ಪಿಸಿ, ಅ. 12ರಿಂದ ಕೆಕೆ ಅಭ್ಯರ್ಥಿಗಳಿಗೆ ಪರೀಕ್ಷೆ ಮಾಹಿತಿ

Published : Sep 26, 2026, 02:49 PM IST
Physical test

ಸಾರಾಂಶ

ರಾಜ್ಯದಲ್ಲಿ 3,991 ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆಗಳು ಸೆ. 28ರಿಂದ ಆರಂಭವಾಗಲಿವೆ. ಕೊಪ್ಪಳದಲ್ಲಿ ಆರ್‌ಪಿಸಿ ಅಭ್ಯರ್ಥಿಗಳಿಗೆ ಅ. 5ರಿಂದ ಮತ್ತು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಅ. 12ರಿಂದ ಪರೀಕ್ಷೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಿಂದ ಕಾಲ್ ಲೆಟರ್ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಕೊಪ್ಪಳ: ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯ ದೇಹದಾರ್ಢ್ಯ ಹಾಗೂ ಸಹಿಷ್ಣುತೆ ಪರೀಕ್ಷೆಗಳು ಸೆ. 28ರಿಂದ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಆರಂಭವಾಗಲಿದ್ದು, ಕೊಪ್ಪಳದಲ್ಲಿ ಆರ್‌ಪಿಸಿ ಹಾಗೂ ಕಲ್ಯಾಣ ಕರ್ನಾಟಕ (ಕೆಕೆ) ವೃಂದದ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.

ರಾಜ್ಯದಲ್ಲಿ ಒಟ್ಟು 3,991 ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ 19,396 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಉಳಿಕೆ ಮೂಲ ವೃಂದದ (ಆರ್‌ಪಿಸಿ) 3,395 ಹುದ್ದೆಗಳಿಗೆ 16,454 ಹಾಗೂ ಕೆಕೆ ವೃಂದದ 596 ಹುದ್ದೆಗಳಿಗೆ 2,942 ಅಭ್ಯರ್ಥಿಗಳು ಅರ್ಹರಾಗಿದ್ದಾರೆ.

ಕೆಎಸ್‌ಆರ್‌ಪಿ ಪಿಟಿಎಸ್ ಮೈದಾನದಲ್ಲಿ ದೈಹಿಕ ಪರೀಕ್ಷೆ

ಬಳ್ಳಾರಿ ವಲಯದ ಆರ್‌ಪಿಸಿ ಘಟಕಗಳಾದ ಬಳ್ಳಾರಿ ಮತ್ತು ರಾಯಚೂರು ವ್ಯಾಪ್ತಿಯ 30 ಹುದ್ದೆಗಳಿಗೆ 144 ಅಭ್ಯರ್ಥಿಗಳಿಗೆ ಅ. 5 ಮತ್ತು 6ರಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನ ಹೊಸಹಳ್ಳಿ ಬಳಿಯ ಕೆಎಸ್‌ಆರ್‌ಪಿ ಪಿಟಿಎಸ್ ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ.

ಇದೇ ಮೈದಾನದಲ್ಲಿ ಕೆಕೆ ವೃಂದದ ಬಳ್ಳಾರಿ ವಲಯದ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಘಟಕಗಳ 174 ಹುದ್ದೆಗಳಿಗೆ ಅರ್ಹತೆ ಪಡೆದಿರುವ 869 ಅಭ್ಯರ್ಥಿಗಳಿಗೆ ಅ. 12ರಿಂದ 15ರ ವರೆಗೆ ದೈಹಿಕ ಪರೀಕ್ಷೆ ನಡೆಯಲಿದೆ.

ಉಳಿದಂತೆ ಬೆಂಗಳೂರು ನಗರ, ಕೇಂದ್ರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಉತ್ತರ ವಲಯಗಳ ಅಭ್ಯರ್ಥಿಗಳಿಗೆ ಆಯಾ ನಿಗದಿತ ಕೇಂದ್ರಗಳಲ್ಲಿ ಸೆ. 28ರಿಂದ ಅ. 6ರ ವರೆಗೆ ಹಂತ ಹಂತವಾಗಿ ಪರೀಕ್ಷೆ ನಡೆಯಲಿದೆ. ಕೆಕೆ ವೃಂದದ ಬೆಂಗಳೂರು ನಗರ ಹಾಗೂ ಈಶಾನ್ಯ ವಲಯದ ಅಭ್ಯರ್ಥಿಗಳಿಗೂ ಅಕ್ಟೋಬರ್‌ನಲ್ಲಿ ಪರೀಕ್ಷೆ ನಿಗದಿಯಾಗಿದೆ.

ಕಾಲ್ ಲೆಟರ್ ಡೌನ್‌ಲೋಡ್

ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಕೃತ ವೆಬ್‌ಸೈಟ್‌ನಿಂದ ಕಾಲ್ ಲೆಟರ್ ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿ ನಮೂದಿಸಿರುವ ದಿನಾಂಕ ಮತ್ತು ಸಮಯಕ್ಕೆ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು ಎಂದು ಪೊಲೀಸ್ ನೇಮಕಾತಿ ವಿಭಾಗ ತಿಳಿಸಿದೆ.

PREV
Read more Articles on
click me!

Recommended Stories

ಹೈನುಗಾರಿಕೆಯಿಂದ 25 ಲಕ್ಷ ಮೌಲ್ಯದ ಥಾರ್ ಖರೀದಿಸಿದ ಕೆಎಂ ದೊಡ್ಡಿ ರೈತನಿಂದ ಹಸುವಿಗೆ ಸೀಮಂತ
ರೆಹಮಾನ್ ಹ*ತ್ಯೆ ಪ್ರಕರಣ: RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನೋಟಿಸ್, ಮುಂದೇನು?