ಸತ್ತಿದೆ ಎಂದು ಭಾವಿಸಿ ಜೀವಂತ ಮೊಸಳೆ ಹಿಡಿಯಲು ಹೋಗಿ ಅರಣ್ಯ ಸಿಬ್ಬಂದಿ ಪೇಚಿಗೆ ಸಿಲುಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕುಳಗಿ ರಸ್ತೆಯ ಕಾಳಿ ನದಿಯಲ್ಲಿ ನಡೆದಿದೆ.
ಕಾರವಾರ, ಉತ್ತರಕನ್ನಡ (ಜ.26): ಸತ್ತಿದೆ ಎಂದು ಭಾವಿಸಿ ಜೀವಂತ ಮೊಸಳೆ ಹಿಡಿಯಲು ಹೋಗಿ ಅರಣ್ಯ ಸಿಬ್ಬಂದಿ ಪೇಚಿಗೆ ಸಿಲುಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕುಳಗಿ ರಸ್ತೆಯ ಕಾಳಿ ನದಿಯಲ್ಲಿ ನಡೆದಿದೆ.
ಕಾಳಿ ನದಿಯಲ್ಲಿ ಮೊಸಳೆ ತೇಲುತ್ತಿರುವುದು ಕಂಡು ಸತ್ತುಹೋಗಿದೆ ಎಂದು ಯಾರೋ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ. ದೂರದಿಂದ ನೋಡಿದಾಗ ಸೇತುವೆಯಡಿ ನದಿಯಲ್ಲಿ ಸತ್ತಂತೆ ಬಿದ್ದಿದ್ದಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಸತ್ತ ಮೊಸಳೆಯ ಮೃತದೇಹ ನದಿಯಿಂದ ಹೊರಗೆ ತರಲು ಮುಂದಾಗಿದ್ದಾರೆ.
ಸ್ಕೂಬಾ ಡೈವಿಂಗ್ ಮಾಡುವ ಪ್ರವಾಸಿಗರೇ ಎಚ್ಚರ! ಮುರ್ಡೇಶ್ವರ ಸಮುದ್ರ ತೀರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ತಿಮಿಂಗಿಲ!
ಹಗ್ಗದೊಂದಿಗೆ ಮೂವರು ಸಿಬ್ಬಂದಿ ನದಿಗೆ ಇಳಿದಿದ್ದರು. ಸಿಬ್ಬಂದಿ ಹತ್ತಿರಬರುವವರೆಗೆ ಸತ್ತಂತೆ ತೇಲುತ್ತಿದ್ದ ಮೊಸಳೆ, ಸಿಬ್ಬಂದಿ ಬಾಲ ಹಿಡಿಯುತ್ತಿದ್ದಂತೆ ಒಮ್ಮೆಗೆ ಎಚ್ಚರಗೊಂಡ ಮೊಸಳೆ! ಮೊಸಳೆ ಬದುಕಿರುವುದು ತಿಳಿಯುತ್ತಿದ್ದಂತೆ ಬೆಚ್ಚಿಬಿದ್ದ ಸಿಬ್ಬಂದಿ. ಅದೃಷ್ಟವಶಾತ್ ದಾಳಿ ಮಾಡದೇ ಮುಂದಕ್ಕೆ ಸಾಗಿದೆ. ಘಟನೆಯಿಂದ ದಿಗಿಲುಗೊಂಡ ಸಿಬ್ಬಂದಿ. ಸುರಕ್ಷಿತವಾಗಿ ವಾಪಸ್ ಬಂದಿದ್ದಾರೆ.
ಮೊಸಳೆಗಳು ಕೆಲವೊಮ್ಮೆ ನಿಶ್ಚಲವಾಗಿ ಮಲಗಿ ವಿರಮಿಸುವುದು ಸಾಮಾನ್ಯ. ಇನ್ನು ಕೆಲವು ವೇಳೆ ಬೇಟೆಯಾಡಲು ಅಲುಗಾಡದೇ ತೇಲುತ್ತಿರುವುದು ಹಲವು ವಿಡಿಯೋಗಳಲ್ಲಿ ಕಾಣಬಹುದಾಗಿದೆ.
Ticket fight: ಅನಂತ್ ಸುತ್ತಲೇ ಗಿರಕಿ ಹೊಡೆಯುತ್ತಿರುವ ಬಿಜೆಪಿ ಟಿಕೆಟ್!