:ಗಣರಾಜ್ಯೋತ್ಸವದ ದಿನವೇ ಶಾಲಾ ಮೈದಾನದ ಬಳಿ ಅನುಮಾನಾಸ್ಪದವಾಗಿ ಬಿದ್ದ ಸೂಟುಕೇಸ್‌ನಿಂದ ಆತಂಕ ಸೃಷ್ಟಿಸಿದ ಘಟನೆ ದಾವಣಗೆರೆ ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ನಡೆದಿದೆ.
ದಾವಣಗೆರೆ (ಜ.26): ಗಣರಾಜ್ಯೋತ್ಸವದ ದಿನವೇ ಶಾಲಾ ಮೈದಾನದ ಬಳಿ ಅನುಮಾನಾಸ್ಪದವಾಗಿ ಬಿದ್ದ ಸೂಟುಕೇಸ್‌ನಿಂದ ಆತಂಕ ಸೃಷ್ಟಿಸಿದ ಘಟನೆ ದಾವಣಗೆರೆ ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಪಕ್ಕದಲ್ಲಿ ಶಾಲಾ ಮೈದಾನ, ಸರ್ಕಾರಿ ಬಸ್ ನಿಲ್ದಾಣ. ಜನನಿಬಿಡ ಪ್ರದೇಶವಾಗಿ ಸ್ಥಳದಲ್ಲಿ ಸೂಟ್‌ಕೇಸ್ ಕಂಡು ಆತಂಕಗೊಂಡು ಅದರ ಬಳಿ ಸುಳಿಯದೇ ದೂರದಿಂದ ನಿಂತು ನೋಡುತ್ತಿದ್ದ ಸಾರ್ವಜನಿಕರು. ಸೂಟು ಕೇಸ್ ನಲ್ಲಿ ಬಾಂಬ್ ಇದೆ ಎಂಬ ಮಾತುಗಳು ಕೇಳಿ ಯಾರೂ ಅತ್ತ ಸುಳಿಯಲ್ಲಿ. ಬೆಳಗ್ಗೆಯಿಂದ ಬಿದ್ದಿದ್ದ ಸೂಟುಕೇಸ್ ಕಂಡು ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು.
ನಗರ ಪೊಲೀಸರಿಂದ ಡಾಗ್ ಸ್ಕ್ವಾಡ್ ಗೆ ಮಾಹಿತಿ ನೀಡಲಾಯಿತು. ಬಳಿಕ ಸ್ಥಳಕ್ಕೆ ಬಂದ ಡಾಗ್ ಸ್ಕಾಡ್ ತಂಡ ಸೂಟ್‌ಕೇಸ್ ಪರಿಶೀಲನೆ ನಡೆಸಿದ್ದಾರೆ. ಅದರೊಳಗೆ ಯಾವುದೇ ಸ್ಫೋಟಕ ಇಲ್ಲದಿರುವುದು, ಖಾಲಿ ಸೂಟ್‌ಕೇಸ್ ಎಂಬುದು ತಿಳಿದ ಬಳಿಕವೇ ನಿಟ್ಟುಸಿರುವ ಬಿಟ್ಟ ಪೊಲೀಸರು ಹಾಗೂ ಸಾರ್ವಜನಿಕರು.
ಮಕ್ಕಳ ಕೈಯಲ್ಲಿ ಕಮಲದ ಹೂ ಕಂಡು ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ; ಶಿಕ್ಷಕಿ ವಿರುದ್ಧ ಏಕವಚನದಲ್ಲೇ ಮಾತು!