ಯಾವಾಗ ಬೇಕಾದ್ರೂ ಬೀಳುತ್ತೆ ನೀರಿನ ಟ್ಯಾಂಕ್: ಶಿಥಿಲಗೊಂಡ ಟ್ಯಾಂಕ್‌ನಿಂದ ನಿರಂತರ ನೀರು ಸೋರಿಕೆ!

By Govindaraj S  |  First Published Jun 4, 2022, 1:35 AM IST

ಅದು 40 ವರ್ಷ ಹಳೆಯ ಬೃಹತ್ ಟ್ಯಾಂಕ್. ಸುಮಾರು 800 ಮನೆಗಳಿಗೆ ಆ ಟ್ಯಾಂಕ್ ಮೂಲಕವೇ ನೀರು ಸರಬರಾಜು ಆಗ್ತಿದೆ. ಆದ್ರೆ ಇದೀಗ ಅದೇ ಟ್ಯಾಂಕ್ ಕುಸಿದು ಬೀಳುವ ಹಂತಕ್ಕೆ ತಲುಪಿದ್ದು, ಗ್ರಾಮಸ್ಥರು ಜೀವ ಕೈಯಲ್ಲಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 


ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಜೂ.04): ಅದು 40 ವರ್ಷ ಹಳೆಯ ಬೃಹತ್ ಟ್ಯಾಂಕ್. ಸುಮಾರು 800 ಮನೆಗಳಿಗೆ ಆ ಟ್ಯಾಂಕ್ ಮೂಲಕವೇ ನೀರು ಸರಬರಾಜು ಆಗ್ತಿದೆ. ಆದ್ರೆ ಇದೀಗ ಅದೇ ಟ್ಯಾಂಕ್ ಕುಸಿದು ಬೀಳುವ ಹಂತಕ್ಕೆ ತಲುಪಿದ್ದು, ಗ್ರಾಮಸ್ಥರು ಜೀವ ಕೈಯಲ್ಲಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರ್ಯಾಯ ಬೃಹತ್ ಟ್ಯಾಂಕ್ ಇದ್ರು ಸಹ ಬಳಕೆ ಮಾಡದೇ, ಜೀವನ ಜೊತೆ ಚೆಲ್ಲಾಟವಾಡ್ತಿರುವ ಗ್ರಾಮ ಪಂಚಾಯಿತಿ ಬಗ್ಗೆ ಒಂದು ರಿಪೋರ್ಟ್‌. ಒಂದು ಕಡೆ ಶಿಥಿಲಗೊಂಡಿರುವ 1 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್. ಮತ್ತೊಂದೆಡೆ ಅದರ ಕೆಳಗೆ ಗ್ರಾಮಸ್ಥರ ಓಡಾಟ.10 ವರ್ಷಗಳ ಹಿಂದೆಯೇ ಹೊಸ ಟ್ಯಾಂಕ್ ನಿರ್ಮಾಣ ಮಾಡಿದ್ರು ಬಳಕೆ ಆಗ್ತಿಲ್ಲ.

Latest Videos

undefined

ಅಂದಹಾಗೆ ಇವೆಲ್ಲಾ ದೃಶ್ಯಗಳು ಕಂಡು ಬರುತ್ತಿರೋದು ಕೋಲಾರ ತಾಲೂಕಿನ ಹೋಳೂರು ಗ್ರಾಮದಲ್ಲಿ.ಈಗೆ ಶಿಥಿಲಗೊಂಡು, ಅಲ್ಲಲ್ಲಿ ಬಿರುಕು ಬಿಟ್ಟು ನೀರು ತೊಟ್ಟಿಕುತ್ತಿರುವ ಈ ಬೃಹತ್ ಟ್ಯಾಂಕ್‌ನ 40 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ, ಈಗಲೂ ಈ ಟ್ಯಾಂಕ್ ಮೂಲಕ ಇಡೀ ಹೋಳೂರು ಗ್ರಾಮದಲ್ಲಿರುವ ಸುಮಾರು 800 ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗ್ತಿದೆ. ಗ್ರಾಮದಲ್ಲಿರುವ 5 ಬೋರ್‌ವೇಲ್‌ಗಳ ಮೂಲಕ ಬರೋಬರಿ ಒಂದು ಲಕ್ಷ ಸಾಮರ್ಥ್ಯವಿರುವ ಈ ಬೃಹತ್ ಟ್ಯಾಂಕ್‌ಗೆ ನೀರು ತುಂಬಿಸಿ ಇಲ್ಲಿಂದ ಮನೆ ಮನೆಗೆ ನೀರು ಸರಬರಾಜು ಮಾಡಲಾಗ್ತಿದೆ.

ಕೋಲಾರದಲ್ಲಿ ಮತ್ತೊಮ್ಮೆ ರೈತರ ಆವಿಷ್ಕಾರ: ಅಪರೂಪದ ಜುಕಿನಿ ಬೆಳೆಯನ್ನು ಬೆಳೆದ ರೈತ!

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಹೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಈ ಟ್ಯಾಂಕ್ ಸೇರಿದ್ದು,ಇಲ್ಲಿನ ವಾಟರ್ ಮ್ಯಾನ್ ಹಾಗೂ ಗ್ರಾಮಸ್ಥರು ಶಿಥಿಲಗೊಂಡಿರುವ ಈ ಟ್ಯಾಂಕ್‌ನ ದಬ್ಬಿಸಿ, ನೂತನವಾಗಿ ನಿರ್ಮಾಣವಾಗಿರುವ ಟ್ಯಾಂಕ್ ಮೂಲಕ ನೀರು ಹರಿಸಿ ಎಂದು ಮನವಿ ಮಾಡಿಕೊಂಡರು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ.ಈ ಟ್ಯಾಂಕ್ ನ ಪಕ್ಕದಲ್ಲೇ ರಸ್ತೆ ಇದ್ದು ಪ್ರತಿದಿನ ಸಾವಿರಾರು ಜನರು ಇಲ್ಲಿ ಸಂಚತಿಸುತ್ತಾರೆ. ಮಕ್ಕಳು ಸಹ ಇದೆ ಮಾರ್ಗದಲ್ಲಿ ಶಾಲೆಗೆ ತೆರಳುತ್ತಾರೆ. ಜೀವ ಕೈಯಲ್ಲಿಡಿದು ಸಂಚಾರ ಮಾಡ್ತಿದ್ದಾರೆ. ಹೀಗಿರುವಾಗ ಇಲ್ಲಿನ ಪಂಚಾಯ್ತಿ ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬುವಂತೆ ವರ್ತಿಸುತ್ತಿದ್ದಾರೆ.

ಇನ್ನು ಒಂದು ಲಕ್ಷ ಲೀಟರ್ ನ ಸಾಮರ್ಥ್ಯವಿರುವ ಈ ಟ್ಯಾಂಕ್ ಭಾರ ತಡಿಲಾರದೆ ಯಾವಾಗ ಬೇಕಾದ್ರೂ ಬೀಳಬಹುದು. ಇದೊಂದು ಟ್ಯಾಂಕ್ ಮೂಲಕ ನೀರು ಮನೆಗಳಿಗೆ ಹರಿಸುವು ಅನಿವಾರ್ಯತೆವೂ ಸಹ ಇಲ್ಲ. ಯಾಕಂದ್ರೆ ಗ್ರಾಮದಲ್ಲೇ ಮತ್ತೊಂದು ನೂತನ ಟ್ಯಾಂಕ್ ನಿರ್ಮಾಣವಾಗಿ 10 ವರ್ಷ ಕಳೆದು ಹೋಗಿದೆ. ಆದ್ರೆ ಇದುವರೆಗೂ ಅದರ ಬಳಕೆ ಸಹ ಆಗಿಲ್ಲ. ಕೇವಲ ಹೋಳೂರು ಗ್ರಾಮದಲ್ಲಿ ಮಾತ್ರವಲ್ಲದೆ, ಅಕ್ಕಪಕ್ಕದ ನಾಲ್ಕು ಹಳ್ಳಿಗಳಲ್ಲೂ ಒಂದೊಂದು ಟ್ಯಾಂಕ್ಗೆ 10 ಲಕ್ಷ ಖರ್ಚು ಮಾಡಿ 2012-13 ನೇ ಸಾಲಿನಲ್ಲಿ ನಿರ್ಮಾಣ ಮಾಡಲಾಗಿದೆ. ಆದ್ರೆ ಇದುವರೆಗೂ ಯಾರು ಸಹ ಅದನ್ನು ಉದ್ಘಾಟನೆ ಮಾಡಿ ನೀರು ಕೊಡುವ ಕೆಲಸಕ್ಕೆ ಮುಂದಾಗಿಲ್ಲ.

ಸಿದ್ದು ಸ್ಪರ್ಧೆಗಾಗಿ ಹೆಚ್ಚಿದ ಒತ್ತಡ, ಈ ಕ್ಷೇತ್ರಕ್ಕೆ ನಿಲ್ಲುತ್ತಾರಾ ಸಿದ್ದರಾಮಯ್ಯ?

ಅಷ್ಟೊಂದು ಪ್ರಮಾಣದಲ್ಲಿ ಖರ್ಚು ಮಾಡಿ ಟ್ಯಾಂಕ್ ನಿರ್ಮಾಣ ಮಾಡಿರುವ ನೀರು ಸರಬರಾಜು ಮಾಡುವ ಇಲಾಖೆಯವ್ರು ಉದ್ಘಾಟನೆ ಮಾಡಿ ಯಾಕೆ ಉದ್ಘಾಟನೆ ಮಾಡಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಹಣವನ್ನು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಅಂತ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಒಂದು ಕಡೆ ಶಿಥಿಲಗೊಂಡು ಯಾವಾಗ ಬೇಕಾದರೂ ಬೀಳುವ ಹಂತದಲ್ಲಿರುವ ಟ್ಯಾಂಕ್ ಮೂಲಕ ನೀರು ಸರಬರಾಜು. ಮತ್ತೊಂದು ಕಡೆ 10 ವರ್ಷ ಕಳೆದ್ರು ನೂತನ ಟ್ಯಾಂಕ್ ಉದ್ಘಾಟನೆ ಮಾಡದೆ ಜನರ ಜೀವದ ಜೊತೆ ಅಧಿಕಾರಿಗಳು ಚೆಲ್ಲಾಟವಾಡ್ತಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು  ಮುಂದಾಗುವ ಅನಾಹುತಗಳನ್ನು ತಪ್ಪಿಸಲಿ ಅನ್ನೋದು ನಮ್ಮ ಮನವಿ ಕೂಡ.

click me!