Vijayapura ಹೊಲದಲ್ಲಿ ಸ್ವತಃ ನೇಗಿಲು ಹಿಡಿದು ಬಿತ್ತನೆ ಮಾಡಿದ ಮಠಾಧೀಶರು..!

Published : Jun 03, 2022, 09:29 PM ISTUpdated : Jun 03, 2022, 09:52 PM IST
Vijayapura ಹೊಲದಲ್ಲಿ ಸ್ವತಃ ನೇಗಿಲು ಹಿಡಿದು ಬಿತ್ತನೆ ಮಾಡಿದ ಮಠಾಧೀಶರು..!

ಸಾರಾಂಶ

• ಹೊಲದಲ್ಲಿ ಸ್ವತಃ ನೇಗಿಲು ಹಿಡಿದು ಬಿತ್ತನೆ ಮಾಡಿದ ಮಠಾಧೀಶರು..! • ಈ ಮಠದಲ್ಲಿ ಇಂದಿಗೂ ರೂಢಿಯಲ್ಲಿದೆ ಸಾಮೂಹಿಕ ಬೇಸಾಯ, ಸಾಮೂಹಿಕ ಭೋಜನ ಪದ್ಧತಿ..! • ವಿಜಯಪುರ ಜಿಲ್ಲೆಯಲ್ಲಿದ್ದಾರೆ ವಿಶೇಷ ಮಠಾಧೀಶರು..!

ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್


ವಿಜಯಪುರ, (ಜೂನ್. 03) : ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರಿಸಿತ್ತು. ಈಗಲೂ ಆಗಾಗ ಮಳೆ ಸುರಿಯುತ್ತಿದೆ. ಹೀಗಾಗಿ ಎಲ್ಲೆಡೆ ಬಿತ್ತನೆ ಕಾರ್ಯಗಳು ಭರದಿಂದ  ಸಾಗಿವೆ.. ವಿಶೇಷ ಎಂದರೆ ಸಾಮೂಹಿಕ ಬೇಸಾಯ, ಸಾಮೂಹಿಕ ಭೋಜನದ ವಿಶೇಷ ಪರಿಕಲ್ಪನೆ ಇರುವ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠದಲ್ಲಿ ಸ್ವತಃ ಮಠದ ಪೀಠಾಧಿಪತಿಗಳೆ ಹೊಲದಲ್ಲಿ ನೇಗಿಲು ಹೂಡಿ ಬಿತ್ತನೆ ಮಾಡಿದ್ದಾರೆ..

ಸ್ವತಃ ನೇಗಿಲು ಹೂಡಿ ಬಿತ್ತನೆ ಮಾಡಿದ ಮಠಾಧೀಶರು..!
ಮುಂಗಾರು ಆರಂಭವಾಗ್ತಿದ್ದಂತೆ ಇಂಚಗೇರಿ ಮಠಕ್ಕೆ ಸೇರಿದ ಕೃಷಿ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಶುರುವಾಗಿದೆ. ವಾಡಿಕೆಯಂತೆ ಮಠದ ಭಕ್ತರೇ ಸೇರಿ ಬಿತ್ತನೆ ಮಾಡ್ತಾರೆ. ಆದ್ರೆ ಈ ಬಾರಿ ಮಾತ್ರ ಇಂಚಗೇರಿ ಮಠದ ಮಠಾಧೀಶರಾದ ರೇವಣಸಿದ್ದೇಶ್ವರ ಮಹಾರಾಜರೇ ನೇಗಿಲು ಹೂಡಿ ಬಿತ್ತನೆ ಮಾಡಿದ್ದಾರೆ.‌ ಪ್ರತಿ ವರ್ಷವೂ ಬಿತ್ತನೆ ಸಂದರ್ಭದಲ್ಲಿ ಸ್ವತಃ ರೇವಣಸಿದ್ದೇಶ್ವರ ಶ್ರೀಗಳೆ ನೇಗಿಲು ಹೂಡಿ ಬಿತ್ತನೆ ಮಾಡ್ತಾರೆ ಅನ್ನೋದು ವಿಶೇಷ.. ಓರ್ವ ಮಠಾಧೀಶರಾಗಿ ಹೊಲದಲ್ಲಿ ಉಳುಮೆ ಮಾಡುವ ರೇವಣಸಿದ್ದೇಶ್ವರ ಶ್ರೀಗಳ ಕಾರ್ಯದ ಬಗ್ಗೆ ಭಕ್ತರು ಅಚ್ಚರಿಯನ್ನ ಹೊರಹಾಕ್ತಾರೆ..

ದಾಸೋಹಕ್ಕೆ ಬೇಕಾದ ದವಸ ತಾವೇ ಉತ್ತು, ಬೆಳೆಯುವ ಸಂತ ರೈತ ರತ್ನ ಪ್ರಶಸ್ತಿಗೆ ಆಯ್ಕೆ

ಸಾಮೂಹಿನ ಬೇಸಾಯ ಶ್ರೀಮಠದ ವಿಶೇಷ..!

ಸಾಮೂಹಿಕ ಬೇಸಾಯ ಪದ್ದತಿ ಈಗ ಎಲ್ಲಿಯೂ ನೋಡೋದಕ್ಕು ಸಿಗೋದಿಲ್ಲ. ಆದ್ರೆ ವಿಜಯಪುರ ಜಿಲ್ಲೆಯ ಇಂಚಗೇರಿ ಮಠದಲ್ಲಿ ಇಂದಿಗೂ ಸಾಮೂಹಿಕ ಬೇಸಾಯ ಪದ್ದತಿ ಇದೆ.. ಮಠಕ್ಕೆ ಸೇರಿದ ನೂರಾರು ಏಕರೆ ಜಮೀನಿನಲ್ಲಿ ಮಠದಲ್ಲಿರುವ ಹತ್ತಾರು ಕುಟುಂಬಗಳು ಸೇರಿ ಉಳುಮೆ, ಬಿತ್ತನೆ, ಕಟಾವು ಸೇವೆ ಮಾಡ್ತಾರೆ.. ಸಾಮೂಹಿಕವಾಗಿ ಭೋಜನವನ್ನು ಹಿಂದಿನಿಂದಲು ಕುಟುಂಬಗಳು ರೂಢಿಸಿಕೊಂಡು ಬಂದಿರೋದು ವಿಶೇಷ.. ಸಾಮೂಹಿಕವಾಗಿ ಬೆಳೆದ ಬೆಳೆಯನ್ನ ಕಟಾವು ಮಾಡಿ, ಮಠದಲ್ಲೆ ಎಲ್ಲ‌ ಕುಟುಂಬಗಳು ಸೇರಿ  ಸಾಮೂಹಿಕವಾಗಿ ಅಡುಗೆ ಮಾಡಿಕೊಂಡು ಭೋಜನ ಮಾಡುವ ಪದ್ಧತಿ ಇದೆ..

ಸಾಮೂಹಿಕ ಬೇಸಾಯಕ್ಕೆ ಪದ್ದತಿ ರೂಢಿಗೆ ತಂದ ಮಹಾದೇವರು..!
ಸ್ವಾತಂತ್ರ ಸಂಗ್ರಾಮದ ವೇಳೆ ಬಂದೂಕು ಕಾರ್ಖಾನೆ ತೆರೆದು ಹೋರಾಡಿದ ಇಂಚಗೇರಿ ಮಠದ ಸದ್ಗುರು ಮಾಧವಾನಂದ ಪ್ರಭುಜಿಗಳೇ ಈ ಸಾಮೂಹಿಕ ಬೇಸಾಯ, ಸಾಮೂಹಿಕ ಭೋಜನೆ ಪದ್ದತಿಯನ್ನ ಹಾಕಿಕೊಟ್ಟರು.. ಅಂದು ಮಹಾದೇವರು ಹಾಕಿಕೊಟ್ಟ ಪದ್ದತಿ ಇಂದಿಗೂ ಇಂಚಗೇರಿ ಮಠದಲ್ಲಿ ರೂಢಿಯಲ್ಲಿದೆ ಅನ್ನೋದು ಅಚ್ಚರಿಯ ವಿಚಾರ..

ಮಠಕ್ಕೆ ಬರುವ ಭಕ್ತರಿಗೆ ಇಲ್ಲಿ ಬೆಳೆಯಲ್ಲೆ ಮಹಾಪ್ರಸಾದ..!
ಶ್ರೀಮಠದ ನೂರಾರು ಏಕರೇ ಜಮೀನು ಮಠದ ಸುತ್ತಲೂ ಇದೆ. ಈ ಜಮೀನಿನಲ್ಲಿ ವ್ಯವಸಾಯವನ್ನ ಮಾಡಲಾಗುತ್ತೆ, ಪ್ರತಿ ವರ್ಷ ಜೋಳ, ಗೋಧಿ, ಕಡಲೆ, ಹೆಸರು, ತೊಗರೆ ಬೆಳೆಯುತ್ತಾರೆ. ಜೊತೆಗೆ ತರಕಾರಿಗಳನ್ನು ಬೆಳೆಯಲಾಗುತ್ತೆ. ಇಲ್ಲಿ ಬೆಳದ ಬೇಳೆಕಾಳು, ತರಕಾರಿಯನ್ನ ಮಠದಲ್ಲೆ ತಲೆತಲಾಂತರದಿಂದ ವಾಸವಿರುವ ಕುಟುಂಬಗಳು ಸಾಮೂಹಿಕ ಭೋಜನೆ ಬಳಸಿಕೊಳ್ತಾರೆ. ಜೊತೆಗೆ ಮಠದಲ್ಲಿ ಬರುವ ಭಕ್ತರಿಗು ನಿತ್ಯ ದಾಸೋಹವನ್ನ ಇದರಿಂದ ಮಾಡಲಾಗುತ್ತೆ...

PREV
Read more Articles on
click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು