ಮಹಿಳಾ ಸಾಕ್ಷರತೆಯಿಂದ ದೇಶ ಸುಭಿಕ್ಷವಾಗಿರಲು ಸಾಧ್ಯ: ಬಿ.ವೈ.ವಿಜಯೇಂದ್ರ

By Kannadaprabha News  |  First Published Feb 12, 2023, 11:54 PM IST

ಪುರುಷರು ಮತ್ತು ಮಹಿಳೆಯರ ಆರ್ಥಿಕ ಸಾಕ್ಷರತೆಯ ಮಟ್ಟದಲ್ಲಿ ಸಾಕಷ್ಟುಅಂತರವಿದೆ, ವಿಶ್ವವಿದ್ಯಾಲಯಗಳ ತಜ್ಞರಿಂದ ಅಧ್ಯಯನ ನಡೆಸುವ ಮೂಲಕ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆಯ ನಿರ್ದಿಷ್ಟ ಕಾರ‍್ಯಕ್ರಮಗಳನ್ನು ಅನುಷ್ಠಾನ ಗೊಳಿಸಬೇಕು, ಇದರಿಂದ ದೇಶ ಆರ್ಥಿಕವಾಗಿ ಸುಭಿಕ್ಷವಾಗಿರಲು ಸಾಧ್ಯವೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. 


ಬ್ಯಾಡಗಿ (ಫೆ.12): ಪುರುಷರು ಮತ್ತು ಮಹಿಳೆಯರ ಆರ್ಥಿಕ ಸಾಕ್ಷರತೆಯ ಮಟ್ಟದಲ್ಲಿ ಸಾಕಷ್ಟುಅಂತರವಿದೆ, ವಿಶ್ವವಿದ್ಯಾಲಯಗಳ ತಜ್ಞರಿಂದ ಅಧ್ಯಯನ ನಡೆಸುವ ಮೂಲಕ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆಯ ನಿರ್ದಿಷ್ಟ ಕಾರ‍್ಯಕ್ರಮಗಳನ್ನು ಅನುಷ್ಠಾನ ಗೊಳಿಸಬೇಕು, ಇದರಿಂದ ದೇಶ ಆರ್ಥಿಕವಾಗಿ ಸುಭಿಕ್ಷವಾಗಿರಲು ಸಾಧ್ಯವೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಅತ್ತಿಕಟ್ಟಿಗ್ರಾಮದಲ್ಲಿ ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸ್ವಸಹಾಯ ಸಂಘದ ಹಾವೇರಿ ಜಿಲ್ಲೆಯ ಪ್ರಪ್ರಥಮ ಮಹಿಳಾ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬದಲಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭದ ಕೆಲಸವಲ್ಲ.

ಬಹುತೇಕ ಸರ್ಕಾರಗಳಿಗೂ ಹಣಕಾಸು ಹೊಂದಾಣಿಕೆ ಕಠಿಣ ಸವಾಲಾಗಿದೆ, ಹೀಗಾಗಿ ದೇಶದ ಪ್ರಜೆಗಳು ಜವಾಬ್ದಾರಿಯಿಂದ ಹೆಜ್ಜೆ ಹಾಕುವ ಮೂಲಕ ಸರ್ಕಾರದ ಜೊತೆಗೆ ಕೈಜೋಡಿಸುವಂತೆ ಮನವಿ ಮಾಡಿದರು. ರಾಜ್ಯದ ಮಠಮಾನ್ಯಗಳು ಅವಿರತ ತ್ರಿವಿಧ ದಾಸೋಹ ನಡೆಸುವ ಮೂಲಕ ನಾಡಿನಲ್ಲಿ ಸರ್ಕಾರದ ಪರವಾಗಿ ತಮ್ಮದೇ ಆದ ಜವಾಬ್ದಾರಿ ಛಾಪು ಮೂಡಿಸಿದ್ದು ವಿಶೇಷವಾಗಿ ಪುಷ್ಪಗಿರಿ ಮಹಾಸಂಸ್ಥಾನ ಒಂದು ಹೆಜ್ಜೆ ಮುಂದಿಟ್ಟು ಗ್ರಾಮೀಣ ಪ್ರದೇಶದ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆಯಲು ಶ್ರೀ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿರುವುದು ನಿಜಕ್ಕೂ ಅಗಮ್ಯವಾಗಿದ್ದು ಪುಷ್ಪಗಿರಿಶ್ರೀಗಳ ಕಾರ‍್ಯ ವೈಖರಿಯನ್ನು ಶ್ಲಾಘಿಸಿದರು.

Tap to resize

Latest Videos

undefined

ಬಿಜೆಪಿಯಿಂದ ಧರ್ಮದ ವಿಷ ಬೀಜ ಬಿತ್ತನೆ: ಡಿ.ಕೆ.ಶಿವಕುಮಾರ್‌

ಹಾವೇರಿ, ಶಿವಮೊಗ್ಗ, ದಾವಣಗೆರೆ ಮತ್ತು ಹಾಸನದಲ್ಲಿ ವಿಶೇಷವಾದ ಸಂಘಟನೆಯಲ್ಲಿ ತೊಡಗಿರುವ ಸಂಸ್ಥಾನದ ಸರ್ವ ತೋಮುಖ ಅಭಿವೃದ್ಧಿಗೆ ನಾವುಗಳು ಕೈಜೊಡಿಸುವ ಇಂಗಿತ ವ್ಯಕ್ತಪಡಿಸಿದ ಅವರು, ಯಡಿಯೂರಪ್ಪನವರ ಪುತ್ರ ಎಂದು ತಾವುಗಳು ನನ್ನ ಮೇಲೆ ಇಟ್ಟನಂಬಿಕೆಯನ್ನು ಸದಾ ಉಳಿಸಿಕೊಳ್ಳುವೆ, ಹಾಗೆಯೇ ನಾಡಿನ ಅಕ್ಕ ತಂಗಿಯರ ಮತ್ತು ತಾಯಂದಿರ ಪೂರ್ಣ ಬೆಂಬಲ ನಮ್ಮ ಮೇಲೆ ಇರಲಿ ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ್‌ ಮಾತನಾಡಿ, ಪುಷ್ಪಗಿರಿಮಠದಶ್ರೀಗಳು ಸ್ವಯಂ ಕೃಷಿಯಲ್ಲಿ ತೊಡಗಿ ಹತ್ತಾರು ಪ್ರಯೋಗ ನಡೆಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪುಷ್ಪಗಿರಿ ಮಠದಲ್ಲಿ ಸಾವಯವ ಕೃಷಿ ಸಂಘ ಸ್ಥಾಪಿಸಿ ರೈತರಿಗೆ ಸಾವಯವ ಕೃಷಿ ಬಗ್ಗೆ ತಿಳಿವಳಿಕೆ ಮೂಡಿಸಿದ್ದಾರೆ, ಹಿಂದೆ ನಡೆದ ರಾಜ್ಯ ಮಟ್ಟದ ಸಾವಯವ ಕೃಷಿಮೇಳ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಶ್ರೀಗಳ ಸಾಧನೆ ಮತ್ತು ಕೃಷಿಯ ಬಗ್ಗೆ ಇರುವ ಅವರಿಗಿರುವ ಕಾಳಜಿಯನ್ನು ಗಮನಿಸಿದ್ದೇನೆ ಹೀಗಾಗಿ ಕೃಷಿ ವಿಶ್ವ ವಿದ್ಯಾಲಯ ನೀಡುವ ಗೌರವ ಡಾಕ್ಟರೇಟ್‌ ಪದವಿ ನೀಡಲು ಶಿಫಾರಸು ಮಾಡಿರುವೆ ಎಂದರು.

ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿ, ಪುಷ್ಪಗಿರಿ ಇತ್ತೀಚಿನ ದಿನದಂದು ಭೂಕೈಲಾಸದ ಅಮರಗಿರಿಯಾಗಿ ಬದಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಅತ್ತಿಕಟ್ಟೆಎಂಬ ಸಣ್ಣ ಗ್ರಾಮದ ತರುಣರನ್ನು ತಾವುಗಳು ಪುಷ್ಪಗಿರಿಗೆ ನೀಡಿದ ಕಾರಣದಿಂದ ಸಾಧನೆಯಾಗಿದೆ, ಅವರ ಮಹತ್ವಪೂರ್ಣ ಕನಸುಗಳಿಗೆ ಸರ್ವರೂ ಸಹಕಾರ ನೀಡಬೇಕು ಎಂದರು.

ಪುಷ್ಪಗಿರಿ ಮಹಾಸಂಸ್ಥಾನದ ಜಗದ್ಗುರು ಸೋಮಶೇಖರ ಶಿವಾಚಾರ್ಯಶ್ರೀ ಮಾತನಾಡಿ, ವಿಶೇಷವಾಗಿ ಮಹಿಳಾ ಸ್ವ- ಸಹಾಯ ಸಂಘದವರು ಚುನಾವಣೆಯಲ್ಲಿ ಮುಕ್ತವಾಗಿ ಮತದಾನ ಮಾಡಬೇಕು. ಯಾವುದೇ ಕಾರಣಕ್ಕೂ ಸಂಘವನ್ನು ರಾಜಕೀಯ ಹಿತಾಸಕ್ತಿಗೆ ಬಳಕೆ ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ ಅವರು ಪುಷ್ಪ್ಪಗಿರಿ ಸಂಸ್ಥಾನ ಕೈಗೊಳ್ಳುವ ನಿರ್ಧಾರಕ್ಕೆ ನಾವುಗಳು ಬದ್ಧ ಎಂಬ ಅಭಿಮಾನ ಪ್ರತಿಯೊಬ್ಬರಲ್ಲಿ ಬರಬೇಕಿದೆ, ಅತ್ತಿಕಟ್ಟೆಎಂಬ ಸಣ್ಣ ಗ್ರಾಮ ರಾಜ್ಯ ಮಟ್ಟದಲ್ಲಿ ಗುರ್ತಿಸುವ ಕೆಲಸಕ್ಕೆ ಗ್ರಾಮಸ್ಥರು ಕಂಕಣಬದ್ಧರಾಗಿ ಕೆಲಸ ಮಾಡಬೇಕಿದೆ ಎಂದರು.

ಸಚಿವ ಮುನಿರತ್ನ ಉದ್ಧಟತನದ ಮಾತು ನಿಲ್ಲಿಸಲಿ: ಶಾಸಕ ಕೆ.ಶ್ರೀನಿವಾಸ ಗೌಡ

ಪುಷ್ಪಗಿರಿ ಕಲಾತಂಡದಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಸಲಾಯಿತು, ಹೋತನಹಳ್ಳಿ ಸಿದ್ಧಾರೂಢಮಠದ ಶಂಕರಾನಂದಶ್ರೀ, ಯಲವಟ್ಟಿಸಿದ್ಧಾಶ್ರಮದಶ್ರೀ ಯೋಗಾನಂದಶ್ರೀ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಎಸ್‌.ಆರ್‌. ಪಾಟೀಲ, ಉದ್ಯಮಿ ಪರಮೇಶ್ವರ ಕಾಗಿನೆಲೆ, ಸೃಷ್ಟಿಪಾಟೀಲ್‌, ವೇ. ಮಲ್ಲಿಕಾರ್ಜುನ ಶಾಸ್ತಿಗಳು, ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಿಇಓ ನಾಗಯ್ಯ, ಯೋಜನಾಧಿಕಾರಿ ವಿನುತ ಧನಂಜಯ್‌, ಆಡಳಿತಾಧಿಕಾರಿ ಕಿಟ್ಟಪ್ಪ ಇನ್ನಿತರರಿದ್ದರು. ಬೇಲೂರಿನ ಪತ್ರಕರ್ತ ಹೆಬ್ಬಾಳು ಹಾಲಪ್ಪ ನಿರೂಪಿಸಿ, ವಂದಿಸಿದರು.

click me!