ಕಾರ್ಯನಿರತ ಪತ್ರಕರ್ತರ ಸಂಘದ ಭವನ ನಿರ್ಮಾಣಕ್ಕೆ ಅನೇಕ ವರ್ಷಗಳಿಂದಲೂ ಸಂಘದ ಪದಾಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ. ಇದನ್ನು ಒದಗಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿಗೆ ಸೇರಿದ ಖಾಲಿ ನಿವೇಶನ ಗುರುತಿಸಿ ಕೊಡಿಸಿಕೊಡಲು ಯತ್ನಿಸಲಾಗುವುದು ಎಂದು ಶಾಸಕ ಎನ್. ಮಹೇಶ್ ಭರವಸೆ ನೀಡಿದರು.
ಯಳಂದೂರು (ಫೆ.12): ಕಾರ್ಯನಿರತ ಪತ್ರಕರ್ತರ ಸಂಘದ ಭವನ ನಿರ್ಮಾಣಕ್ಕೆ ಅನೇಕ ವರ್ಷಗಳಿಂದಲೂ ಸಂಘದ ಪದಾಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ. ಇದನ್ನು ಒದಗಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿಗೆ ಸೇರಿದ ಖಾಲಿ ನಿವೇಶನ ಗುರುತಿಸಿ ಕೊಡಿಸಿಕೊಡಲು ಯತ್ನಿಸಲಾಗುವುದು ಎಂದು ಶಾಸಕ ಎನ್. ಮಹೇಶ್ ಭರವಸೆ ನೀಡಿದರು. ಅವರು ಆಗ್ರಹಾರ ಬೀದಿಯಲ್ಲಿರುವ ಶ್ರೀಶಂಕರ ಸಭಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪತ್ರಕರ್ತರು ಸಮೂಹವನ್ನು ಸುಸ್ಥಿತಿಗೆ ತೆಗೆದುಕೊಂಡು ಹೋಗಬೇಕು. ಇದಕ್ಕೆ ಒಳ್ಳೆಯ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕು. ಈಚೆಗೆ ಸಾಮಾಜಿಕ ಜಾಲತಾಣಗಳು ತಾವೇ ಸಮಸ್ಯೆಗಳನ್ನು ಸೃಷ್ಟಿಸಿ ಜಡ್ಜ್‌ಮೆಂಟ್‌ಗಳನ್ನು ತಾವೆ ಕೊಡುವ ಮಟ್ಟಿಗೆ ಬಂದು ನಿಂತಿವೆ. ಸದನದಲ್ಲಿ ನಡೆಯುವ ಚರ್ಚೆಗಳ, ಜಗಳಗಳು ಹೈಲೆಟ್ ಆಗುತ್ತವೆ. ಹೊರತು ಇಲ್ಲಿ ನಡೆಯುವ ಗಂಭೀರ ವಿಷಯಗಳು, ಅಭಿವೃದ್ಧಿ ವಿಷಯಗಳು ಗಣನೆಗೆ ಬರುವುದೇ ಇಲ್ಲ ಎಂದರು. ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಸಂವಿಧಾನದ ನಾಲ್ಕನೆ ಅಂಗ ಪತ್ರಿಕಾರಂಗವಾಗಿದ್ದು, ಇದು ಉಳಿದ ಅಂಗಗಳನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತದೆ.
undefined
ಎಚ್.ಡಿ.ಕುಮಾರಸ್ವಾಮಿಯಿಂದ ಜಾತಿಗಳ ನಡುವೆ ವಿಷಬೀಜ: ಸಚಿವ ಶ್ರೀರಾಮುಲು
ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಸಾಮಾಜಿಕ ಜವಾಬ್ದಾರಿ ಅಧಿಕವಾಗಿರುತ್ತದೆ. ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಈ ರಂಗದಲ್ಲಿ ದುಡಿಯುವಂತೆ ಸಲಹೆ ನೀಡಿದರು. ಮಾಜಿ ಶಾಸಕ ಎಸ್. ಬಾಲರಾಜು ಮಾತನಾಡಿ, ಯಳಂದೂರು ಪತ್ರಕರ್ತರ ಸಂಘಕ್ಕೆ ಬೇಕಿರುವ ನಿವೇಶವನ್ನು ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವೇ ಇಲ್ಲಿಗೆ ಅಗತ್ಯವಾಗಿರುವ ಖಾಲಿ ನಿವೇಶನ ಕೊಡಿಸಲು ಯತ್ನಿಸುತ್ತೇವೆ. ದೃಶ್ಯ ಮಾಧ್ಯಮಗಳು ಹೆಚ್ಚು ಪ್ರಭಾವಶಾಲಿಯಾಗಿವೆ, ಆದರೆ, ಟಿಆರ್‌ಪಿಯ ಭರಾಟೆಯಲ್ಲಿ ನೈಜ ಕಾಳಜಿಯನ್ನು ಮರೆತಿರುವುದು ಅಪಾಯಕಾರಿಯಾಗಿದ್ದು ಈ ದೃಷ್ಟಿಕೋನ ಬದಲಾಗಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್ ಮಾತನಾಡಿ, ಪತ್ರಿಕಾರಂಗದಲ್ಲಿ ತುರುಸಿನ ಪೈಪೋಟಿ ಇದೆ. ಆದರೆ, ಕೆಲವು ಸಾಮಾಜಿಕ ಜಾಲತಾಣಗಳನ್ನೇ ಕೆಲವರು ಮಾಧ್ಯಮಗಳಾಗಿ ಬಳಸಿಕೊಂಡಿವೆ. ಇಂತಹವರಿಗೆ ಸಾಮಾಜಿಕ ಬದ್ಧತೆಯಾಗಲಿ, ಈ ರಂಗದ ಗಂಧಗಾಳಿಯೂ ಗೊತ್ತಿರುವುದಿಲ್ಲ ಇಂತಹದ್ದನ್ನು ಕಡಿವಾಣ ಹಾಕುವ ಜರೂರತ್ತು ಪ್ರಸ್ತುತಕ್ಕಿದೆ ಎಂದರು.ಕಾರ್ಯನಿರತ ಪ್ರತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಗೂಳೀಪುರ ನಂದೀಶ್ ಪತ್ರಕರ್ತರ ಸಂಘದ ಕಟ್ಟಡ ನಿರ್ಮಿಸುವಂತೆ, ಬಸ್ ಪಾಸ್ ಕೊಡಿಸಲು, ನಿವೇಶನಗಳನ್ನು ನೀಡಲು ಧ್ವನಿ ಎತ್ತಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಎಚ್.ಡಿ.ಕುಮಾರಸ್ವಾಮಿಯಿಂದ ಜಾತಿಗಳ ನಡುವೆ ವಿಷಬೀಜ: ಸಚಿವ ಶ್ರೀರಾಮುಲು
ಮಾಜಿ ಶಾಸಕ ಎಸ್. ಜಯಣ್ಣ ಚಾಮುಲ್ ಅಧ್ಯಕ್ಷ ನಾಗೇಂದ್ರ, ಬಿಜೆಪಿ ಮುಖಂಡ ಕಿನಕಹಳ್ಳಿ ರಾಚಯ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಂಬಳೆ ವೀರಭದ್ರನಾಯಕ ಮಾತನಾಡಿದರು. ಪಪಂ ಅಧ್ಯಕ್ಷೆ ಪ್ರಭಾವತಿ ರಾಜಶೇಖರ್, ಸದಸ್ಯ ವೈ.ಜಿ. ರಂಗನಾಥ, ಜಿ.ಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ದಸಂಸ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ಕರುಣಾ ಟ್ರಸ್ಟ್ ಸಂಯೋಜಕ ನಾಗೇಂದ್ರ ಮುಖಂಡರಾದ ಮಲ್ಲು, ನಿಂಗರಾಜು ಸೇರಿದಂತೆ ಪತ್ರಕರ್ತರ ಸಂಘದ ಸದಸ್ಯರು ಹಾಜರಿದ್ದರು.