ಮಕ್ಕಳ ಕಾಲಿನಲ್ಲಿ ಕಪ್ಪು ಕಲೆ ಪ್ರಕರಣ. ಸ್ವಚ್ಚತೆ ಕಾಪಾಡಲು ಶಾಸಕರ ಸೂಚನೆ

By Kannadaprabha News  |  First Published Jun 27, 2023, 5:51 AM IST

ತಾಲೂಕಿನ ಕುಣಿಕೇನಹಳ್ಳಿಯ ಶಾಲಾ ವಿದ್ಯಾರ್ಥಿಗಳ ಕಾಲಿನಲ್ಲಿ ಕಪ್ಪು ಕಲೆ ಉಂಟಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಗ್ರಾಮಕ್ಕೆ ಭೇಟಿ ನೀಡಿದರು.


  ತುರುವೇಕೆರೆ : ತಾಲೂಕಿನ ಕುಣಿಕೇನಹಳ್ಳಿಯ ಶಾಲಾ ವಿದ್ಯಾರ್ಥಿಗಳ ಕಾಲಿನಲ್ಲಿ ಕಪ್ಪು ಕಲೆ ಉಂಟಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಗ್ರಾಮಕ್ಕೆ ಭೇಟಿ ನೀಡಿದರು.

ಈ ಸಂಧರ್ಭದಲ್ಲಿ ಮಕ್ಕಳಲ್ಲಿ ಉಂಟಾಗಿರುವ ಕಪ್ಪು ಕಲೆಗಳನ್ನು ಸ್ವತಃ ಶಾಸಕ ಎಂ.ಟಿ.ಕೃಷ್ಣಪ್ಪನವರು ವೀಕ್ಷಣೆ ಮಾಡಿ, ಶಾಲಾ ಆವರಣದಲ್ಲಿ ಕಲುಷಿತ ನೀರು ಹರಿದು ಬರುತ್ತಿರುವುದನ್ನು ಮನಗಂಡು ಶಾಲಾ ಆವರಣವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಶಾಲಾ ಅಭಿವೃದ್ಧಿ ಮಂಡಲಿ ಮತ್ತು ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.

Tap to resize

Latest Videos

ಶಾಲೆಯ ಅಕ್ಕಪಕ್ಕದಲ್ಲೇ ಗ್ರಾಮಸ್ಥರು ಕಸಕಡ್ಡಿಗಳನ್ನು ಮತ್ತು ತಿಪ್ಪೆಯನ್ನು ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ನೀರು ಹರಿದು ಕೊಚ್ಚೆ ಉಂಟಾಗುತ್ತಿದೆ. ಈ ಸಂದರ್ಭದಲ್ಲಿ ಸಣ್ಣ ಸಣ್ಣ ಕ್ರಿಮಿಕೀಟಗಳು ಉತ್ಪತ್ತಿಯಾಗಿ ಮೆದು ಚರ್ಮಕ್ಕೆ ಹಾನಿ ಮಾಡುತ್ತಿವೆ. ಹಾಗಾಗಿ ಕೂಡಲೇ ಶಾಲಾ ಆವರಣವನ್ನು ಶುಚಿಗೊಳಿಸಲು ಎಲ್ಲರಿಗೂ ಸೂಚಿಸಿದರು. ಅಲ್ಲದೇ ಮಕ್ಕಳಿಗೆ ಶೂ ಧರಿಸಲು ವ್ಯವಸ್ಥೆ ಮಾಡಬೇಕೆಂದೂ  ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಇಓ ಸತೀಶ್‌ ಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಸುಪ್ರಿಯಾ, ಬಿಇಓ ಪದ್ಮನಾಭ್‌, ಗ್ರಾಮ ಪಂಚಾಯ್ತಿ ಸದಸ್ಯ ಮರಿಯಾ, ಕಾರ್ಯದರ್ಶಿ ಸೋಮಶೇಖರ್‌ ಸೇರಿದಂತೆ ಹಲವಾರು ಗ್ರಾಮಸ್ಥರು ಇದ್ದರು.

ಸ್ಥಳದಲ್ಲಿದ್ದ ಡಾ.ಸುಪ್ರಿಯಾರವರು ಮಾತನಾಡಿ ಕೊಳಚೆ ನೀರಿನಲ್ಲಿ ಮಕ್ಕಳು ಓಡಾಡಿರುವ ಕಾರಣಕ್ಕೆ ಕಪ್ಪು ಚುಕ್ಕೆಗಳು ಉಂಟಾಗಿವೆ. ಸೂಕ್ತ ಔಷಧ ನೀಡಲಾಗಿದೆ. ಹಾಗಾಗಿ ಇನ್ನು ಒಂದೆರೆಡು ದಿನಗಳಲ್ಲಿ ಕಪ್ಪು ಚುಕ್ಕೆ ಕಣ್ಮರೆಯಾಗಲಿದೆ ಎಂದು ಹೇಳಿದರು.

ಕನಸಿನ ಸೈಕಲ್‌ಗಳನ್ನು ತಮ್ಮ ಸ್ವಂತ ಸ್ನೇಹಿತರು ಮತ್ತು ಸಹಪಾಠಿಗಳಿಂದ ಉಡುಗೊರೆಯಾಗಿ ಪಡೆದ ವಿದ್ಯಾರ್ಥಿಗಳು

ತಿರುವನಂತಪುರಂ (ಜೂನ್ 7, 2023): ಸಾಮಾನ್ಯವಾಗಿ ದೇಶದ ಹಲವು ರಾಜ್ಯಗಳಲ್ಲಿ ಜೂನ್ 1 ರಂದು ಶಾಲೆಗಳು ಪ್ರಾರಂಭವಾಗುತ್ತವೆ. ಇದೇ ರೀತಿ, ಇತ್ತೀಚೆಗೆ ಹೊಸ ಶೈಕ್ಷಣಿಕ ವರ್ಷಕ್ಕೆ ಶಾಲೆಗಳು ಪುನರಾರಂಭಗೊಂಡಾಗ, ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರಿನ ಶೆಣೈ ಸ್ಮಾರಕ ಹೈಯರ್ ಸೆಕೆಂಡರಿ ಶಾಲೆಯ ಹಲವು ವಿದ್ಯಾರ್ಥಿಗಳ ಖುಷಿಗೆ ಪಾರವೇ ಇರಲಿಲ್ಲ. ಅವರು ತಮ್ಮ ಕನಸಿನ ಸೈಕಲ್‌ಗಳನ್ನು ತಮ್ಮ ಸ್ವಂತ ಸ್ನೇಹಿತರು ಮತ್ತು ಸಹಪಾಠಿಗಳಿಂದ ಉಡುಗೊರೆಯಾಗಿ ಪಡೆದರು. 

ಹೌದು, ಹಳೆಯ ಸೈಕಲ್‌ಗಳನ್ನು ಸಂಗ್ರಹಿಸಿ, ರಿಪೇರಿ ಮಾಡಿ ಪುನಃ ಬಣ್ಣ ಬಳಿಯುವ ವಿದ್ಯಾರ್ಥಿಗಳ ಉಪಕ್ರಮದ ನಂತರ ಕೇರಳ ವಿಧಾನಸಭೆಯ ಸ್ಪೀಕರ್ ಎ.ಎನ್. ಶಂಸೀರ್ ಅವರು ನೆರೆಹೊರೆಯ ಶಿಕ್ಷಣ ಸಂಸ್ಥೆಗಳ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಸೈಕಲ್‌ಗಳನ್ನು ಉಡುಗೊರೆಯಾಗಿ ನೀಡಿದರು. SMHSS ನಲ್ಲಿ ಬೇಸಿಗೆ ರಜೆಯ ಸಮಯದಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಶಿಬಿರದಿಂದ 'ಮರುಬಳಕೆ' ಎಂಬ ಅಭಿಯಾನವು ಹೊರಹೊಮ್ಮಿದ್ದು, ಈ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳು ಹಳೆಯ, ಹಾಳಾದ ಸೈಕಲ್‌ಗಳನ್ನು ರಿಪೇರಿ ಮಾಡಿ, ಮತ್ತೆ ಪೇಂಟ್‌ ಮಾಡಿ ಅಂದ ಚೆಂದ ನೀಡಿದ್ದಾರೆ. 

ಇದನ್ನು ಓದಿ: 50 ಲಕ್ಷ ಮೌಲ್ಯದ ಕಾರು ಖರೀದಿಸಿದ್ದಕ್ಕೆ ಕಮ್ಯುನಿಸ್ಟ್‌ ನಾಯಕನ ವಿರುದ್ಧವೇ ತಿರುಗಿಬಿದ್ದ ಪಕ್ಷ: ತನಿಖೆ ಆರಂಭ

ಈ ಶಿಬಿರದ ಸಮಯದಲ್ಲಿ, ಮೊದಲು ವಿದ್ಯಾರ್ಥಿಗಳು ಮರುಬಳಕೆಯ ಕಾಗದ ಮತ್ತು ಇತರ ವಸ್ತುಗಳಿಂದ ಕೆಲವು ಕರಕುಶಲ ಇತ್ಯಾದಿಗಳನ್ನು ತಯಾರಿಸಿದರು. ನಂತರ ನಾನು ಹಳೆಯ ಸೈಕಲ್‌ಗಳನ್ನು ಮರುಬಳಕೆ ಮಾಡಲು ಯೋಚಿಸಿದೆ. ಏಕೆಂದರೆ ಈ ಶಿಬಿರದ ಥೀಮ್‌ ‘ಮರುಬಳಕೆ ಮತ್ತು ದುರಸ್ತಿ’ ಎಂದು SMHSS ನಲ್ಲಿ ಶಿಕ್ಷಕ ಮತ್ತು SPC-ಇನ್‌ಚಾರ್ಜ್‌ನ ಸಿವಿ ರಾಜು ಈ ಉಪಕ್ರಮದ ಬಗ್ಗೆ ತಿಳಿಸಿದ್ದಾರೆ.

ಈ ಹಿನ್ನೆಲೆ ಪಯ್ಯನೂರು ಮತ್ತು ಸುತ್ತಮುತ್ತಲಿನ ಮನೆಗಳಿಂದ ಹಳೆಯ ಮತ್ತು ತಿರಸ್ಕರಿಸಿದ ಸೈಕಲ್‌ಗಳನ್ನು ಸಂಗ್ರಹಿಸಿ, ಅವುಗಳನ್ನು ರಿಪೇರಿ ಮಾಡಿ ತಮ್ಮ ಮಕ್ಕಳಿಗೆ ಸೈಕಲ್‌ ಖರೀದಿಸಲು ಸಾಧ್ಯವಾಗದ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿತರಿಸುವುದು ಇದರ ಉದ್ದೇಶವಾಗಿತ್ತು ಎಂದೂ ತಿಳಿದುಬಂದಿದೆ. ನಮ್ಮ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಗೆ ಪ್ರಯಾಣಿಸಲು ಸೈಕಲ್‌ಗಳನ್ನು ಬಳಸುತ್ತಾರೆ. ನಮ್ಮ ಕೆಲವು ವಿದ್ಯಾರ್ಥಿಗಳು ತಮ್ಮದೇ ಆದ ಸೈಕಲ್ ಹೊಂದಲು ಕನಸು ಕಂಡಿದ್ದಾರೆ ಎಂದು ನಮಗೆ ತಿಳಿದಿತ್ತು, ಆದರೆ ಅದನ್ನು ಹೊಂದಲು ಸಾಧ್ಯವಿರಲಿಲ್ಲ. ಆದ್ದರಿಂದ ನಾವು ಅವರಿಗೆ ಸೈಕಲ್‌ ನೀಡಿದರೆ ಅದು ಉತ್ತಮ ಸಹಾಯವಾಗುತ್ತದೆ ಎಂದು ತಿಳಿದು ಇದನ್ನು ಮಾಡಿದೆವು ಎಂದೂ ಹೇಳಿದ್ದಾರೆ. 

ಇದನ್ನೂ ಓದಿ: ತಂಗಿ ಸೈಕಲ್‌ನಿಂದ ಕೆಳಕ್ಕೆ ಬೀಳದಿರಲೆಂದು ಅಣ್ಣನ ಪ್ರಯತ್ನ ನೋಡಿ: ವಿಡಿಯೋ ವೈರಲ್‌..!

ಶಾಲಾ ಆಡಳಿತ ಮಂಡಳಿ ಹಾಗೂ ಪಿಟಿಎ ಹಸಿರು ನಿಶಾನೆ ತೋರಿದ ಬಳಿಕ ‘ಮರುಬಳಕೆ’ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. "ನಾವು ಈ ಅಭಿಯಾನದ ಮೂಲಕ ಸುಮಾರು 20 ಸೈಕಲ್‌ಗಳನ್ನು ಸಂಗ್ರಹಿಸಲು ಆಶಿಸಿದ್ದೆವು. ಆದರೆ ನಾವು ಸಾಮಾಜಿಕ ಮಾಧ್ಯಮದಲ್ಲಿ ಉಪಕ್ರಮದ ಬಗ್ಗೆ ಪೋಸ್ಟ್ ಮಾಡಿದ ಕೆಲವೇ ಗಂಟೆಗಳ ನಂತರ ಮತ್ತು ನಮ್ಮ ಸ್ನೇಹಿತರಲ್ಲಿ ಪ್ರಚಾರ ಮಾಡಿದ ಕೆಲವೇ ಗಂಟೆಗಳ ನಂತರ, ನಮಗೆ ಹಲವಾರು ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದವು. ಮೂರು ದಿನಗಳಲ್ಲಿ, ನಾವು ಕೇವಲ ಪಯ್ಯನೂರಿನಿಂದ ಮಾತ್ರವಲ್ಲದೆ ಕಣ್ಣೂರು ಜಿಲ್ಲೆಯ ಇತರ ಭಾಗಗಳಿಂದ ಮತ್ತು ನೆರೆಯ ಕಾಸರಗೋಡಿನಿಂದ ನೂರಕ್ಕೂ ಹೆಚ್ಚು ಕರೆಗಳು ಮತ್ತು ಸಂದೇಶಗಳು ಬಂದವು, ಆದ್ದರಿಂದ ನಾವು ಹೆಚ್ಚಿನ ಕೊಡುಗೆಗಳನ್ನು ಸ್ವೀಕರಿಸುವುದನ್ನು ಮುಚ್ಚಬೇಕಾಯಿತು" ಎಂದು ರಾಜು ಹೇಳಿದರು.

click me!