ಒಂದೇ ಎತ್ತು ಬರೋಬ್ಬರಿ 18 ಲಕ್ಷ 1 ಸಾವಿರಕ್ಕೆ ಮಾರಾಟವಾಗಿದೆ. ಜಾನುವಾರು ಮಾರಾಟದ ವಿಚಾರದಲ್ಲಿ ದಾಖಲೆ ಮೊತ್ತಕ್ಕೆ ಮಾರಾಟವಾದ ಎತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಬಲೇಶ್ವರ (ಜು.2): ಒಂದೇ ಎತ್ತು ಬರೋಬ್ಬರಿ 18 ಲಕ್ಷ 1 ಸಾವಿರಕ್ಕೆ ಮಾರಾಟವಾಗಿದೆ. ಜಾನುವಾರು ಮಾರಾಟದ ವಿಚಾರದಲ್ಲಿ ದಾಖಲೆ ಮೊತ್ತಕ್ಕೆ ಮಾರಾಟವಾದ ಎತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ರಾಮನಗೌಡ ಪಾಟೀಲ್ ಎಂಬುವರರ ಎತ್ತನ್ನು ಬರೋಬ್ಬರಿ 18 ಲಕ್ಷ 1 ಸಾವಿರ ಕೊಟ್ಟು ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಹಿಟ್ನಾಳ ಗ್ರಾಮದ ಸದಾಶಿವ ಡಾಂಗೆ ಎಂಬುವರು ಖರೀದಿ ಮಾಡಿದ್ದಾರೆ.
undefined
ಪ್ರೀತಿಸಿ ಮದುವೆಯಾದವಳನ್ನು ಕೊಂದ ಪೇದೆಗೆ ಅಕ್ರಮ ಸಂಬಂಧ, ಹಾಸನದಲ್ಲಿ ಶವವಿಟ್ಟು ಪ್ರತಿಭಟನೆ
ಹಿಂದೂಸ್ತಾನ್ HP ಹೆಸರಿನ ಎತ್ತು ಇದಾಗಿದ್ದು. ಎಲ್ಲರೂ ಹುಬ್ಬೇರಿಸೋ ಮೊತ್ತಕ್ಕೆ ಎತ್ತು ಮಾರಾಟವಾಗಿದೆ. ತೆರ ಬಂಡಿ ಎಳೆಯುವುದರಲ್ಲಿ ಈ ಎತ್ತು ಪ್ರಸಿದ್ದಿಯಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ತೆರಬಂಡಿ ಸ್ಪರ್ಧೆಯಲ್ಲಿ ಈ ಎತ್ತು ಹಲಾವರು ಬಹುಮಾನಗಳನ್ನು ಗೆದ್ದಿದೆ.
ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವ ಬಗ್ಗೆ ಐವಿಎಫ್ ತಜ್ಞೆ ಅನುಮಾನ, ಬೇಬಿ ಬಂಪ್ ಶೇಪ್ ಬಗ್ಗೆ ಕಮೆಂಟ್!
ಐದುವರೆ ಅಡಿ ಎತ್ತರವಿರೋ ಈ ಎತ್ತು ಇಲ್ಲಿವರೆಗೆ 40 ಗ್ರಾಂ ಚಿನ್ನ, ಎರಡು ಬೆಳ್ಳಿ ಗದೆ, 4 ಬೈಕ್ ಅನ್ನು ಗೆದ್ದಿದೆ. ನಿತ್ಯ ಈ ಎತ್ತಿಗೆ ಮನೆಯವರು ಪೌಷ್ಟಿಕಾಂಶ ಆಹಾರ ನೀಡುತ್ತಿದ್ದರು. ಮಾಲೀಕರು ಹಾಲು ಮೊಟ್ಟೆ ಧವಸ ಧಾನ್ಯಗಳನ್ನು ಆಹಾರವಾಗಿ ನೀಡುತ್ತಿದ್ದರು. ಸದ್ಯ ವಿಜಯಪುರ ಜಿಲ್ಲೆಯಲ್ಲಿ ಈ ಎತ್ತಿನ ಮಾರಾಟ ಚರ್ಚೆಗೆ ಗ್ರಾಸವಾಗಿದೆ.