ಸಾರಿಗೆ ಬಸ್ ನಲ್ಲೇ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ

By Web Desk  |  First Published Sep 25, 2019, 3:13 PM IST

ಮಹಿಳೆಯೊಬ್ಬರು ಬಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ| ಸಂಡೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದ ಘಟನೆ| ರತ್ನಮ್ಮ ಎಂಬುವರೆ ಬಸ್ ನಲ್ಲಿ ಗಂಡು ಮಗುವಿಗೆ ಜನ್ಮ  ಸಾರಿಗೆತಾಯಿ| ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಹೆರಿಗೆ| ಮಹಿಳಾ ಪ್ರಯಾಣಿಕರು ಸೀರೆ ಸುತ್ತಿ ಹೆರಿಗೆಯಾಗಲು ಸಹಾಯ ಮಾಡಿದ್ದಾರೆ| 


ಬಳ್ಳಾರಿ:(ಸೆ.25) ಮಹಿಳೆಯೊಬ್ಬರು ಬಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ ಎಂಬುವರೆ ಬಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರತ್ನಮ್ಮ ಅವರು ಜಿ.ಎಲ್. ಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. 


ರತ್ನಮ್ಮ ಅವರು ಸಂಡೂರಿನಿಂದ ರಾಂಪುರಕ್ಕೆ ಸಾರಿಗೆ ಬಸ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ದಿಢೀರ್ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರು ಸೀರೆ ಸುತ್ತಿ ಹೆರಿಗೆಯಾಗಲು ಸಹಾಯ ಮಾಡಿದ್ದಾರೆ. ರತ್ನಮ್ಮ ಅವರಿಗೆ ಹೆರಿಗೆಯಾಗುವವರೆಗೂ ಸಹ ಪ್ರಯಾಣಿಕರು ಸಹಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. 

Tap to resize

Latest Videos


ಪ್ರಯಾಣಿಕರ‌ ಮಾನವೀಯತೆಗೆ ತಾಯಿ ರತ್ನಮ್ಮ ಮತ್ತವರ ಕುಟುಂಬಸ್ಥರು ಋಣಿ


ಸಹ ಪ್ರಯಾಣಿಕರ‌ ಮಾನವೀಯತೆಗೆ ತಾಯಿ ರತ್ನಮ್ಮ ಮತ್ತವರ ಕುಟುಂಬಸ್ಥರು ಋಣಿಯಾಗಿದ್ದೇವೆ ಎಂದು ಹೇಳಿದ್ದಾರೆ. ಬಸ್ ನಲ್ಲಿ ಸುರಕ್ಷಿತ ಹೆರಿಗೆಯಾದ ಬಸ್ ಸಿಬ್ಬಂದಿ ರಾಂಪುರ ಪ್ರಾಥಮಿಕ ಆರೋಗ್ಯಕ್ಕೆ ಬಿಟ್ಟ ಬಸ್ ಬಿಟ್ಟಿದ್ದಾರೆ. ಸಧ್ಯ ತಾಯಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ರತ್ನಮ್ಮ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್ ಸಿಬ್ಬಂದಿ ದಾರಿ ಮಧ್ಯೆಯೇ ಬಸ್ ನಿಲ್ಲಿಸಿ ಹೆರಿಗೆಯಾಗಲು ಸಹಕಾರ ಮಾಡಿಕೊಟ್ಟಿದ್ದಾರೆ. ಇವರ ಜತೆಗೆ ಬಸ್ ನಲ್ಲಿದ್ದ ಸಹ ಪ್ರಯಾಣಿಕರು ಸಹಕಾರ ಮಾಡಿಕೊಟ್ಟಿದ್ದಾರೆ. 

click me!