'ಬಿಎಸ್‌ವೈಗೆ ಅಮಿತ್ ಶಾ ಅವರ ಕಣ್ಣು ನೋಡುವ ಧೈರ್ಯವಿಲ್ಲ'..!

By Kannadaprabha News  |  First Published Sep 25, 2019, 2:40 PM IST

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅವರ ಕಣ್ಣನ್ನು ನೋಡುವ ಧೈರ್ಯವಿಲ್ಲ ಎಂದು ಕೊಪ್ಪ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸುಧೀರ್‌ ಕುಮಾರ್‌ ಮುರೋಳಿ ಹೇಳಿದ್ದಾರೆ. ಉಡುಪಿಯ ಉತ್ತರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ಹಿರಿಯಡ್ಕ ಬಸ್‌ ನಿಲ್ದಾಣದ ಬಳಿ ಜರಗಿದ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.


ಉಡುಪಿ(ಸೆ.25): ಏಕ ಭಾಷೆಯನ್ನು ಹೇರುವ ಮೂಲಕ ಬಿಜೆಪಿ ದೇಶದ ಬಹುತ್ವವನ್ನು ನಾಶ ಮಾಡಲು ಹೊರಟಿದೆ. ಇದನ್ನು ಪ್ರಜ್ಞಾವಂತ ನಾಗರೀಕರು ವಿರೋಧಿಸಬೇಕಾಗಿದೆ. ದೇಶದ ಬಹುತ್ವ ನಾಶವಾದರೆ ದೇಶ ಏಕ ಸಂಸ್ಕೃತಿಯತ್ತ ಸಾಗಿ ಅದು ಸರ್ವಾಧಿಕಾರಕ್ಕೆ ಎಡೆ ಮಾಡುತ್ತದೆ. ಇದು ದೇಶಕ್ಕೆ ಅಪಾಯಕಾರಿ ಎಂದು ನ್ಯಾಯವಾದಿ, ಕೊಪ್ಪ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸುಧೀರ್‌ ಕುಮಾರ್‌ ಮುರೋಳಿ ಹೇಳಿದ್ದಾರೆ.

ಕಾಪು ಉತ್ತರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ಹಿರಿಯಡ್ಕ ಬಸ್‌ ನಿಲ್ದಾಣದ ಬಳಿ ಜರಗಿದ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Tap to resize

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯದ ಜನತೆ ಭೀಕರ ಪ್ರವಾಹದಿಂದ ಸಂತ್ರಸ್ತರಾಗಿ ಎರಡು ತಿಂಗಳು ಕಳೆದರೂ ಕೇಂದ್ರದಿಂದ ಬಿಡಿ ಕಾಸು ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರಿಗಂತೂ ಅಮಿತ್‌ ಶಾನ ಕಣ್ಣು ನೋಡುವ ಧೈರ್ಯವಿಲ್ಲ ಎಂದು ಟೀಕಿಸಿದರು.

ದೇಶದ ಜನರ ಗಮನ ಬೇರೆಡೆ ಸೆಳೆಯುವ ಯತ್ನ:

ದೇಶ ಆರ್ಥಿಕ ಹಿಂಜರಿತಕ್ಕೆ ಒಳಗಾದಾಗ ಜನರ ಗಮನ ಬೇರೆಡೆ ತಿರುಗಿಸಲು 370 ವಿಧಿ ರದ್ದು ಎಂಬ ನಾಟಕ ಪ್ರಾರಂಭವಾಯಿತು. ಆರ್ಥಿಕ ಹಿಂಜರಿತದ ಬಗ್ಗೆ ಜನರೊಂದಿಗೆ ಮಾತನಾಡುತ್ತಾರೆ ಎಂಬ ಭಯದಿಂದ ಆರ್ಥಿಕ ತಜ್ಞ ಪಿ. ಚಿದಂಬರಂ ಅವರನ್ನು ಬಂಧಿಸಲಾಯಿತು. ಕರ್ನಾಟಕದ ಉಪಚುನಾವಣೆಯಲ್ಲಿ ಕಾಂಗ್ರೆಸನ್ನು ಹಿಮ್ಮೆಟ್ಟಿಸಲು ಡಿ.ಕೆ. ಶಿವಕುಮಾರ್‌ರವರನ್ನು ಸೆರೆಮನೆಗೆ ದೂಡಲಾಯಿತು ಎಂದು ಆರೋಪಿಸಿದರು.

ಶಿವಮೊಗ್ಗ: ಪರವಾನಗಿ ನೋಂದಣಿ ಮಾಡ್ಸಿ ಅಂದ್ರೆ ಕ್ಯಾರೇ ಅಂತಿಲ್ಲ ವ್ಯಾಪಾರಿಗಳು..!

ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಮಾತನಾಡಿ, ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಪ್ರಧಾನಿಗಳು ಅಮೆರಿಕಾದಲ್ಲಿ ನಾನು ಭಾರತದಲ್ಲಿ ಶೌಚಾಲಯವನ್ನು ಕಟ್ಟಿಸಿಕೊಟ್ಟೆಎಂದು ಬಾಲಿಶವಾಗಿ ಭಾಷಣ ಮಾಡುತ್ತಾರೆ. ಇದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದರು.

ನೆರೆ ಸಂತ್ರಸ್ತರಿಗೆ ಚಿಕ್ಕಾಸು ಕೊಟ್ಟಿಲ್ಲ:

ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಪ್ರವಾಹ ಬಂದು ಮನೆ ಮಠ ಕಳಕೊಂಡ ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ತನಕ ಯಾವುದೇ ಪರಿಹಾರ ಕ್ರಮ ಜರಗಿಲ್ಲ. ಕೇಂದ್ರದಿಂದ ಚಿಕ್ಕಾಸು ಬಿಡುಗಡೆ ಆಗಿಲ್ಲ. ಟಾರು ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸಿ ಬಡ ವಾಹನ ಚಾಲಕರು ಪರದಾಡುವಂತೆ ಮಾಡಿದ ಕೇಂದ್ರ ಸರ್ಕಾರದ ಕ್ರಮ ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಇದು ಹಿಟ್ಲರ್‌ ಆಡಳಿತ. ಅಘೋಷಿತ ತುರ್ತು ಪರಿಸ್ಥಿತಿ ದೇಶದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ತವ್ಯನಿರತ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವು

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡೆವೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಯು.ಆರ್‌. ಸಭಾಪತಿ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ವಾಗ್ಳೆ, ಕಾಪು ಉತ್ತರ ವಲಯ ಮಹಿಳಾ ಅಧ್ಯಕ್ಷೆ ಸಂಧ್ಯಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಿಕಾ ಕೇಳ್ಕರ್‌, ಮೈರ್ಮಾಡಿ ಸುಧಾಕರ ಶೆಟ್ಟಿ, ಹಿರಿಯರಾದ ಶಂಕರ್‌ ಶೆಟ್ಟಿ ಇದ್ದರು.

ಕಾಪು ಉತ್ತರ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿಸ್ವಾಗತಿಸಿದರು. ಕಾಪು ಬ್ಲಾಕ್‌ (ದಕ್ಷಿಣ) ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ವಂದಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಾಲಯದಿಂದ ಸಭೆಯ ಸ್ಥಳದ ತನಕ ಪ್ರತಿಭಟನಾ ಮೆರವಣಿಗೆ ಜರಗಿತು.

ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲೂ ಆಧಾರ್‌ ನೋಂದಣಿ, ತಿದ್ದುಪಡಿ

click me!