ತುಮಕೂರು: ಅಪಾಯದ ಮಟ್ಟ ಮೀರಿದೆ ಕುಡಿಯೋ ನೀರಿನ ಫ್ಲೋರೈಡ್ ಅಂಶ..!

By Kannadaprabha News  |  First Published Sep 25, 2019, 3:06 PM IST

ತುಮಕೂರಿನ ಪಾವಗಡ ತಾಲೂಕಿನ ವೈ.ಎನ್‌.ಹೊಸಕೋಟೆ, ಕಸಬಾ, ನಾಗಲಮಡಿಕೆ, ನಿಡಗಲ್‌ ಹೋಬಳಿ ವ್ಯಾಪ್ತಿಯ ಕಂದಾಯ ಗ್ರಾಮಗಳು ಸೇರಿದಂತೆ ಭರ್ತಿ 265 ಹಳ್ಳಿಗಳಲ್ಲಿ ಫ್ಲೋರೈಡ್ ನೀರಿನ ಸಮಸ್ಯೆ ಇದೆ. ಇಲ್ಲಿನ ಜನ ಫ್ಲೋರೈಡ್ ಅಂಶವಿರುವ ನೀರು ಕುಡಿದು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹೀಗಿದ್ದರೂ ಜನಪ್ರತಿನಧಿಗಳಾಗಲಿ, ಅಧಿಕಾರಿಗಳಾಗಲೀ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.


ತುಮಕೂರು(ಸೆ.25): ನದಿಮೂಲವಿಲ್ಲದೆ ನೀರಿಗೆ ತತ್ವಾರ ಅನುಭವಿಸುತ್ತಿರುವ ಗಡಿನಾಡು ಪಾವಗಡದ ಜನತೆ ಫ್ಲೋರೈಡ್ ಯುಕ್ತ ನೀರಿನಿಂದ ಅಕ್ಷರಶಃ ಬಸವಳಿದು ಹೋಗಿದ್ದಾರೆ. ಪಾವಗಡ ತಾಲೂಕಿನ ವೈ.ಎನ್‌.ಹೊಸಕೋಟೆ, ಕಸಬಾ, ನಾಗಲಮಡಿಕೆ, ನಿಡಗಲ್‌ ಹೋಬಳಿ ವ್ಯಾಪ್ತಿಯ ಕಂದಾಯ ಗ್ರಾಮಗಳು ಸೇರಿದಂತೆ ಭರ್ತಿ 265 ಹಳ್ಳಿಗಳಲ್ಲಿ ಫ್ಲೋರೈಡ್ ನೀರಿನ ಸಮಸ್ಯೆ ಇದೆ.

20 ವರ್ಷಗಳಿಂದ ನೀರಿನಲ್ಲಿ ಫ್ಲೋರೈಡ್ ಅಂಶವಿದ್ದರೂ ಒಂದು ದಶಕದಿಂದ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಗಣನೀಯವಾಗಿ ಏರಿದೆ. ನೀರಿನಲ್ಲಿ 1.5ರಷ್ಟು ಫ್ಲೋರೈಡ್ ಅಂಶವಿದ್ದರೆ ಅದು ಕುಡಿಯಲು ಯೋಗ್ಯವಲ್ಲ ಎಂದು ತಜ್ಞರು ಹೇಳುತ್ತಾರೆ. ಆದರೆ ಪಾವಗಡ ತಾಲೂಕಿನ ಕೆಲ ಹಳ್ಳಿಗಳಲ್ಲಿ ಇದರ ಪ್ರಮಾಣ 3.5 ರಷ್ಟಾಗಿದೆ. ಉಳಿದಂತೆ ಬಹುತೇಕ ಗ್ರಾಮಗಳಲ್ಲಿ ಫ್ಲೋರೈಡ್ ಅಂಶ 2.5 ಕ್ಕಿಂತಲೂ ಹೆಚ್ಚಿದೆ.

Latest Videos

undefined

'ಬಿಎಸ್‌ವೈಗೆ ಅಮಿತ್ ಶಾ ಅವರ ಕಣ್ಣು ನೋಡುವ ಧೈರ್ಯವಿಲ್ಲ'..!

ಜಿಲ್ಲೆಯ 10 ತಾಲೂಕುಗಳ ಪೈಕಿ ಪಾವಗಡಕ್ಕೆ ಮಾತ್ರ ನದಿ ನೀರು ಇಲ್ಲ. ಕುಡಿಯುವ ಸಲುವಾಗಿ ಹೇಮಾವತಿಯನ್ನು ಜಿಲ್ಲೆಯ 9 ತಾಲೂಕುಗಳಿಗೂ ಹರಿಸಲಾಗಿದೆ. ಆದರೆ ಪಾವಗಡಕ್ಕೆ ಮಾತ್ರ ಹೇಮೆಯ ನೀರಿಲ್ಲ. ಮೊದಲೆಲ್ಲಾ 200ರಿಂದ 300 ಅಡಿಗೆ ಬೋರ್‌ ಕೊರೆದರೆ ನೀರು ಸಿಗುತ್ತಿತ್ತು. ಆದರೆ ಈಗ 800 ಅಡಿ ಕೊರೆದರೂ ನೀರು ಸಿಗುವುದು ದುಸ್ಸಾಹಸವಾಗುತ್ತಿದೆ. ಬೋರ್‌ವೆಲ್‌ಗಳನ್ನು ಹೆಚ್ಚು ಅಡಿ ಕೊರೆದಂತೆಲ್ಲಾ ನೀರಿನಲ್ಲಿ ಫೆä್ಲೕರೈಡ್‌ ಅಂಶ ಹೆಚ್ಚಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಕಾಯಿಲೆಗಳು ಹಲವಾರು:

ಫ್ಲೋರೈಡ್ ನೀರಿನ ಸಮಸ್ಯೆಯಿಂದ ಪಾವಗಡದ ಜನತೆ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮುಖ್ಯವಾಗಿ ಕೆಲವು ಕಡೆ 30ರ ಯುವಕರು ವಯಸ್ಸಾದವರಂತೆ ಕಾಣುತ್ತಾರೆ. ಹಲ್ಲುಗಳು ಪಾಚಿಗಟ್ಟುತ್ತವೆ. ಮೂಳೆ ಸವೆತ ಸೇರಿದಂತೆ ಹತ್ತು ಹಲವು ಕಾಯಿಲೆಗಳಿಗೆ ಜನ ತುತ್ತಾಗುತ್ತಿದ್ದಾರೆ. ಕೆಲವು ಗ್ರಾಮಗಳಲ್ಲಿ ಅತಿ ಹೆಚ್ಚು ಫೆä್ಲೕರೈಡ್‌ ಅಂಶದ ನೀರು ಸೇವನೆಯಿಂದ ಕಾಲುಗಳು ಸೊಟ್ಟಗಾಗಿರುವ ಉದಾಹರಣೆಗಳು ಸಾಕಷ್ಟಿವೆ.

ಡಿಫ್ಲೋರೈಡ್ ನೀರಿನ ಘಟಕ:

ಜಿಲ್ಲೆಯ 265 ಹಳ್ಳಿಗಳಲ್ಲಿ ಸರಿ ಸುಮಾರು 250ಕ್ಕೂ ಹೆಚ್ಚು ಡಿಫ್ಲೋರೈಡ್ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದರೂ ಸಮರ್ಪಕ ನಿರ್ವಹಣೆಯಾಗದೆ ಬಹಳಷ್ಟುನೀರಿನ ಘಟಕಗಳು ಸ್ಥಗಿತಗೊಂಡಿವೆ. ಈಗಾಗಲೇ ಅರ್ಧಕ್ಕಿಂತಲೂ ಹೆಚ್ಚು ನೀರಿನ ಘಟಕಗಳು ಹಾಳಾಗಿವೆ. ಹೀಗಾಗಿ ನೀರಿನ ಘಟಕವಿದ್ದರೂ ಉಪಯೋಗಕ್ಕೆ ಬಾರದೆ ಪಾವಗಡದ ಜನ ಫ್ಲೋರೈಡ್ ಯುಕ್ತ ನೀರನ್ನೇ ಕುಡಿಯುವಂತಾಗಿದೆ. ತಿರುಮಣಿ ಮುಂತಾದ ಭಾಗಗಳಲ್ಲಂತೂ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವುದರಿಂದ ಜನತೆ ಸಾಕಷ್ಟುತೊಂದರೆ ಅನುಭವಿಸುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಫ್ಲೋರೈಡ್ ನೀರಿನ ಸಮಸ್ಯೆಯಿಂದ ಹೊರಗೆ ಬಾರಲು ಹಾಗೂ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಪಾವಗಡಕ್ಕೆ ಜಾರಿ ಮಾಡಿಸಲು ಹಲವಾರು ಹೋರಾಟಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. 20 ವರ್ಷಗಳಿಂದ ಫೆä್ಲೕರೈಡ್‌ ನೀರಿನ ಪ್ರಮಾಣ ಇದೆ. ಆದರೆ 1 ದಶಕದಿಂದ ಅದರ ತೀವ್ರತೆ ಮತ್ತಷ್ಟುಹೆಚ್ಚಾಗಿದೆ. ಹೀಗಾಗಿ ಆರೋಗ್ಯದ ಸಮಸ್ಯೆಯಿಂದ ಜನ ತತ್ತರಿಸಿ ಹೋಗಿದ್ದಾರೆ.

ಆಸ್ಪತ್ರೆಗಳ ಮುಂದೆ ಜನ:

ದೃಷ್ಟಿದೋಷ, ಮೂಳೆ ಸವೆತ, ಕಾಲು ಸೊಟ್ಟಗಾಗುವುದು, ಹಲ್ಲುಗಳು ಪಾಚಿಗಟ್ಟುವುದು ಹೀಗೆ ನೂರಾರು ಆರೋಗ್ಯದ ಸಮಸ್ಯೆಯಿಂದ ನರಳುತ್ತಿರುವ ಪಾವಗಡದ ಜನತೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳ ಮುಂದೆ ಎಡತಾಕುವಂತಾಗಿದೆ. ಹೀಗಾಗಿ ಪಾವಗಡ ಆಸ್ಪತ್ರೆಯಲ್ಲಿ ಸಾಕಷ್ಟುಜನ ಚಿಕಿತ್ಸೆಗಾಗಿ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಫೆä್ಲೕರೈಡ್‌ ನೀರನ್ನು ಹೋಗಲಾಡಿಸಬೇಕಾದರೆ ಪಾವಗಡಕ್ಕೆ ಶಾಶ್ವತ ಕುಡಿಯುವ ನೀರನ್ನು ಹರಿಸಬೇಕೆಂಬ ಹಕ್ಕೊತ್ತಾಯವನ್ನು ಗಡಿನಾಡ ಜನತೆ ಮಾಡುತ್ತಲೇ ಬಂದಿದ್ದಾರೆ. ಇನ್ನಾದರೂ ಸರ್ಕಾರಕ್ಕೆ ನಮ್ಮ ಕೂಗು ಕೇಳಿಸುವುದೇ ಎಂಬ ಆಶಾಭಾವನೆಯಲ್ಲಿ ಈ ಭಾಗದ ಜನತೆ ಇದ್ದಾರೆ.

  • ಪಾವಗಡ ತಾಲೂಕಿನ 265 ಗ್ರಾಮಗಳಲ್ಲಿ ನೀರಿನ ಸಮಸ್ಯೆ
  • 250 ಡಿಫ್ಲೋರೈಡ್ ಘಟಕವಿದ್ದರೂ ನಿರ್ವಹಣೆ ಸರಿಯಿಲ್ಲ
  • ಬಹುತೇಕ ಗ್ರಾಮಗಳಲ್ಲಿ ಶೇ.1.5 ರಿಂದ 3.5ರಷ್ಟುಅಂಶ ಪತ್ತೆ
  • ಪಿನಾಕಿನಿ ಬ್ಯಾರೇಜ್‌ನಿಂದ ನೀರು ಹರಿಸುವ ಯೋಜನೆ ವಿಫಲ
  • ಬೋರ್‌ವೆಲ್‌ ಆಳವಾಗಿ ಕೊರೆದಷ್ಟು ಫ್ಲೋರೈಡ್ಅಂಶ ಹೆಚ್ಚು

ಪಾವಗಡಕ್ಕೆ ಜಲಮೂಲಗಳಿಲ್ಲ

ನೀರು ಇಂಗಿಸಿ ನೀರು ಉಕ್ಕಿಸಬೇಕು. ಆದರೆ, ಭೂಮಿ ಇಂಗುತ್ತಲೇ ಇಲ್ಲ. ಸಕಾಲಕ್ಕೆ ಮಳೆ ಬರುತ್ತಿಲ್ಲ. ಬಂದರೂ ಅತಿ ಕಡಿಮೆ ಮಳೆಯಿಂದಾಗಿ ಭೂಮಿಯ ಆಳಕ್ಕೆ ನೀರು ಹೋಗದೆ ಫ್ಲೋರೈಡ್ ಅಂಶ ಹೆಚ್ಚಾಗುತ್ತಲೇ ಇದೆ. ಪಾವಗಡಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆ ಬಗ್ಗೆ ಸರ್ಕಾರ ಇನ್ನೂ ಗಮನಹರಿಸಿಲ್ಲ. ಹಿಂದೆ ಪಿನಾಕಿನ ಬ್ಯಾರೇಜ್‌ನಿಂದ ನೀರು ತರುವ ಯೋಜನೆ ಹಮ್ಮಿಕೊಂಡಿತ್ತು. ಆದರೆ, ಬ್ಯಾರೇಜ್‌ನಲ್ಲಿ ನೀರು ಸಂಗ್ರಹವಾಗದೆ ಆ ಯೋಜನೆಯನ್ನು ಕೈ ಬಿಡಲಾಗಿತ್ತು. ಇನ್ನು ತುಂಗಭದ್ರಾ ಹಿನ್ನೀರಿನಿಂದ ಪಾವಗಡಕ್ಕೆ ನೀರು ಹರಿಸುವ ಯೋಜನೆ ಕೂಡ ಆಮೆಗತಿಯಲ್ಲಿ ಸಾಗಿದೆ. ಹೀಗಾಗಿ ಜನ ಫ್ಲೋರೈಡ್ ನೀರು ಕುಡಿಯುವಂತಾಗಿದೆ.

-ಉಗಮ ಶ್ರೀನಿವಾಸ್‌

click me!