Davangere ವಿವಿಯಲ್ಲಿ ಒಂಭತ್ತನೇ ಘಟಿಕೋತ್ಸವ: ರ್ಯಾಂಕ್ ಪಟ್ಟಿಯಲ್ಲಿ ಹುಡುಗಿಯರೇ ಮೇಲುಗೈ

By Suvarna News  |  First Published Mar 25, 2022, 12:44 AM IST

ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಕ್ಯಾಂಪಸ್ ನಲ್ಲಿ ಒಂಭತ್ತನೆ ಘಟಿಕೋತ್ಸವ ಜರುಗಿತು. ರಾಜ್ಯದ ವಿಶ್ವವಿದ್ಯಾನಿಲಯದ ಕುಲಾಧಿಪತಿ , ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅದ್ಯಕ್ಷತೆಯಲ್ಲಿ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು.


ದಾವಣಗೆರೆ (ಮಾ.25): ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಕ್ಯಾಂಪಸ್ ನಲ್ಲಿ ಒಂಭತ್ತನೆ ಘಟಿಕೋತ್ಸವ ಜರುಗಿತು. ರಾಜ್ಯದ ವಿಶ್ವವಿದ್ಯಾನಿಲಯದ ಕುಲಾಧಿಪತಿ , ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅದ್ಯಕ್ಷತೆಯಲ್ಲಿ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು. ಕೇಂದ್ರೀಯ ವಿವಿ ಮಾಜಿ ಕುಲಾಧಿಪತಿ ಡಾ.ಪಿ.ವಿ.‌ ಕೃಷ್ಣ ಭಟ್‌ರಿಂದ ಘಟಿಕೋತ್ಸವ ಭಾಷಣ ಮಾಡಿದರು. 

ಈ ಬಾರಿ ಘಟಿಕೋತ್ಸವದಲ್ಲಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.ವಿ.ಎಂ.‌ ಶಶಿಕುಮಾರ್, ಡಾ‌.ಮೀರಾಸಾಬಿ ಶಿವಣ್ಣ, ಪ್ರೊ.ಲಕ್ಷ್ಮಣ ತೆಲಗಾವಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.ಘಟಿಕೋತ್ಸವದಲ್ಲಿ 5 ಎಂಫಿಲ್, 6 ಪಿ.ಎಚ್‌ಡಿ ಪದವಿ ಪ್ರದಾನ ಮಾಡಲಾಯಿತು.‌ ಜೊತೆಗೆ 9,724 ವಿದ್ಯಾರ್ಥಿಗಳಿಗೆ ಸ್ನಾತಕ 11,336 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. ಸ್ನಾತಕ, ಸ್ನಾತಕೋತ್ತರ ಪದವಿಯಲ್ಲಿ 32 ವಿದ್ಯಾರ್ಥಿನಿಯರು, 12 ವಿದ್ಯಾರ್ಥಿಗಳು 79 ಚಿನ್ನದ ಪದಕಕ್ಕೆ ಭಾಜನರಾದರು.

Tap to resize

Latest Videos

ದೇಶದಲ್ಲಿ ಜನಸಂಖ್ಯೆ ಸ್ಪೋಟ ಮುಂದುವರಿದಿದೆ: ಥಾವರ್ ಚಂದ್ ಗೆಹ್ಲೋಟ್

ಐದು ಚಿನ್ನದ ಪದಕ ಪಡೆದ‌ ಆಟೋ ಚಾಲಕನ‌ ಮಗಳು: ಘಟಿಕೋತ್ಸವದಲ್ಲಿ ಆಟೋ ಚಾಲಕನ ಮಗಳು ಸ್ವಪ್ನಾ  ಎಂಬಿಎ ಪದವಿಯಲ್ಲಿ ಟಾಪರ್​​ ಆಗಿ ಐದು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರ ತಾಯಿ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡ್ತಿದ್ದಾರೆ. ಪದವಿ ಹಾಗು ಸ್ನಾತಕಕೋತ್ತರ ಪದವಿ ಕಲಿಯುವಾಗಲು ಇನ್ನೊಂದು ಕಡೆ ಕೆಲಸ ಮಾಡಿಕೊಂಡು ತನ್ನ ಓದಿನ ಖರ್ಚು ತಾನೇ ದುಡಿದು  ಎಂಕಾಂ ನಲ್ಲಿ ರ್ಯಾಂಕ್ ಗಳಿಸಿರುವುದು ಸ್ವಪ್ನಾಗೆ ಎಲ್ಲಿಲ್ಲದ ಖುಷಿ ನೀಡಿದೆ. ಎಂಬಿಎಯಲ್ಲಿ ಟಾಪರ್​ ಆಗಿ 5  ಚಿನ್ನದ ಪದಕಗಳನ್ನು ಪಡೆದಿರುವ  ಕ್ಯಾಂಪಸ್ ಸೆಲೆಕ್ಷನ್ ಆಗಿದ್ದು, ಖಾಸಗಿ ಕಂಪನಿಯಲ್ಲಿ ಸ್ಟೋರ್ ಮ್ಯಾನೇಜರ್ ಕೆಲಸ ಮಾಡ್ತಿದ್ದಾರೆ.

ಬರದ ನಾಡಿನ ಹುಡುಗಿ ಅಡುಗೆ ಸಹಾಯಕ ದಂಪತಿ ಪುತ್ರಿಗೆ ಗೋಲ್ಡ್ ಮೆಡಲ್: ಜಗಳೂರು ತಾಲ್ಲೂಕಿನ ಅಣಬೂರು ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಸೌಮ್ಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಎಂ ಎಸ್ ಸಿ ಕೆಮಿಸ್ಟ್ರಿ ವಿಭಾಗದಲ್ಲಿ  ರ್ಯಾಂಕ್  ಪಡೆದು ಎರಡು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಜಗಳೂರು ತಾಲ್ಲೂಕಿನ‌ ಅಣಬೂರು ಗ್ರಾಮದ ನಾಗರಾಜ್ ಮತ್ತು ರೇಣುಕಮ್ಮ ಅವರು ಮುಗ್ಗಿದ ರಾಗಿಹಳ್ಳಿ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಅಡುಗೆ ಸಹಾಯಕರಾಗಿ ಬದುಕಿನ ಬಂಡಿ ಸಾಗಿಸುತ್ತಿರುವ ಬಡದಂಪತಿಗಳಿಗೆ ಪುತ್ರಿಯಾಗಿ ಜನಿಸಿ ಮೊರಾರ್ಜಿ ದೇಸಾಯಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ 6ರಿಂದ 10 ನೇ ತರಗತಿವರೆಗೆ ಮೊರಾರ್ಜಿದೇಸಾಯಿ ವಸತಿಶಾಲೆಯಲ್ಲಿ ಪೂರೈಸಿ, ಜಗಳೂರಿನಲ್ಲಿ ಪಿಯುಸಿ ಸೈನ್ಸ್ ವ್ಯಾಸಂಗ ಮಾಡಿ ದಾವಣಗೆರೆ ಮಹಿಳಾ ಕಾಲೇಜಿನಲ್ಲಿ ಪದವಿ ಪಡೆದು, ಎಂ ಸಿ ಕೆಮಿಸ್ಟ್ರಿ ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆಯುವ ಕನಸ್ಸನ್ನು ನನಸು ಮಾಡಿದ್ದಾರೆ.

ಅರ್ಚಕನ‌ ಮಗಳು ಇಂಗ್ಲೀಷ್‌ ಸ್ನಾತಕೋತ್ತರ ಪದವಿಯಲ್ಲಿ ಸೆಕೆಂಡ್ ರ್ಯಾಂಕ್: ಜಗಳೂರು ಪಟ್ಟಣದ ತಂದೆ ಅರ್ಚಕ  ತಾಯಿ ಟೈಲರ್ ಇವರ ಮಗಳು ಇಂಗ್ಲೀಷ್ ವಿಭಾಗದಲ್ಲಿ ಸೆಕೆಂಡ್ ರ್ಯಾಂಕ್ ಪಡೆದು ಚಿನ್ನದ ಪದಕ‌ ಪಡೆದಿದ್ದಾರೆ. ಪತ್ರಿಕೋಧ್ಯಮ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡಿದ ಹರಿಹರ ಆಶ್ರಯ ಕಾಲೋನಿಯ ಯೋಗೆಶ್ ಪ್ರಥಮ ರ್ಯಾಂಕ್ ಗಳಿಸಿ ಗೋಲ್ಡ್ ಮೆಡಲ್ ಪಡೆದಿದ್ದಾರೆ. ಘಟಿಕೋತ್ಸವದಲ್ಲಿ ಒರಿಸ್ಸಾದ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಮಾಜಿ ಕುಲಾಧಿಪತಿ ಡಾ.ಪಿ.ವಿ.ಕೃಷ್ಣ ಭಟ್‌ ಘಟಿಕೋತ್ಸವ ಭಾಷಣ ಮಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ವಿವಿಯ ಎಲ್ಲಾ ಪ್ರಾಧ್ಯಾಪಕ ವೃಂದದವರು ಶ್ರಮಿಸಿದ್ದು, ಪಠ್ಯ ಮತ್ತು ಪ್ರಾಯೋಗಿಕ ತರಗತಿ ಮುಗಿಸಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜು ಮಾಡಿರುವುದು ವಿಶೇಷ. 

Chikkaballapura Nandi Hill: ‌ಪ್ರವಾಸಿಗರಿಗೆ ವಿಕೇಂಡ್‌ನಲ್ಲಿ ನಂದಿಬೆಟ್ಟಕ್ಕೆ ಪ್ರವೇಶ ಮುಕ್ತ!

ಕೊರೋನಾ ಭಯದ ಮಧ್ಯೆಯೂ ದಾವಿವಿಯಲ್ಲಿ ಉತ್ತಮ ಕೆಲಸ ಆಗಿವೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ವಿವಿಯಲ್ಲಿ ಇಂಗ್ಲೀಷ್‌ ಭಾಷೆ ಮತ್ತು ಕಂಪ್ಯೂಟರ್‌ ಲ್ಯಾಬ್‌ ಆರಂಭಿಸಲಾಗಿದೆ. ಇದರಿಂದ ಸಾಕಷ್ಟುಅನುಕೂಲವಾಗಿದೆ. ನಾನೂ ಹಳ್ಳಿಗಾಡಿನಿಂದ ಬಂದಿದ್ದರಿಂದ ಗ್ರಾಮೀಣ ವಿದ್ಯಾರ್ಥಿಗಳ ಕಷ್ಟತಿಳಿದು, ಈ ಲ್ಯಾಬ್‌ ಸ್ಥಾಪಿಸಲು ಒತ್ತು ನೀಡಿದ್ದೆವು ಎಂದು ಡಾ.ಶರಣಪ್ಪ ಹಲಸೆ ತಿಳಿಸಿದರು. ವಿವಿ ಮೌಲ್ಯ ಮಾಪನ ಕುಲ ಸಚಿವರಾದ ಎಚ್‌.ಎಸ್‌.ಅನಿತಾ, ಕುಲ ಸಚಿವರಾದ ಪ್ರೊ.ಗಾಯತ್ರಿ ದೇವರಾಜ, ಹಣಕಾಸು ಅಧಿಕಾರಿ ಡಿ.ಪ್ರಿಯಾಂಕ, ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯರಾದ ಎಚ್‌.ಜಿ.ವೀರಣ್ಣ ಗೌಡ, ಎಂ.ಇ.ಶಿವಕುಮಾರ, ಜಯಲಿಂಗಪ್ಪ, ಸಿಂಡಿಕೇಟ್‌ ಸದಸ್ಯರಾದ ಟಿ.ಇನಾಯತ್ತುಲ್ಲಾ, ವಿಜಯಲಕ್ಷ್ಮಿ ಹಿರೇಮಠ, ಮೈಸೂರು ಗೀತಾ, ಆಶೀಶ್‌ ರೆಡ್ಡಿ, ವಿವಿಧ ವಿಭಾಗ ಮುಖ್ಯಸ್ಥರಾದ ಡಾ.ಲಕ್ಷ್ಮಣ್‌, ಡಾ.ಶಿವಕುಮಾರ ಕಣಸೋಗಿ, ವಿದ್ಯಾ ವಿಷಯಕ್‌ ಪರಿಷತ್‌ ಸದಸ್ಯರು ಇದ್ದರು.

click me!