
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಶೇ.95 ರಷ್ಟು ಸಾಧನೆ ಮಾಡಲಾಗಿದ್ದು, 10.77 ಲಕ್ಷ ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಮೆಜೆಸ್ಟಿಕ್ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಸ್ವಯಂ ಸೇವಾ ಸಂಸ್ಥೆಯ ಆಸ್ಪತ್ರೆಗಳು, ಮಾಲ್, ಖಾಸಗಿ ನರ್ಸಿಂಗ್ ಹೋಂಗಳು, ವೈದ್ಯಕೀಯ ಮಹಾವಿದ್ಯಾಲಯ, ಪ್ರಮುಖ ಉದ್ಯಾನವನಗಳು, ಮೆಟ್ರೋ ನಿಲ್ದಾಣ, ಕೊಳೆಗೇರಿ, ಅಂಗನವಾಡಿ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ನಮ್ಮ ಕ್ಲಿನಿಕ್ ಸೇರಿ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಸಂಚಾರಿ ತಂಡಗಳು ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ನಡೆಸಲಾಯಿತು.
ಯೋಜನಾ ಘಟಕಗಳು, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಡಬ್ಲ್ಯೂಎಚ್‌ಒ, ಯುನಿಸೆಫ್ ಹಾಗೂ ಇತರ ಸ್ವಯಂಸೇವಾ ಸಂಸ್ಥೆಗಳ ಸಹಕಾರದಲ್ಲಿ 5 ವರ್ಷದೊಳಗೆ 10,77,134 ಮಕ್ಕಳಿಗೆ ಲಸಿಕೆ ನೀಡಲಾಗಿದೆ. 4,452 ಲಸಿಕಾ ಕೇಂದ್ರಗಳಲ್ಲಿ 9,70,557 ಮಕ್ಕಳು ಲಸಿಕೆ ಪಡೆದುಕೊಂಡಿದ್ದಾರೆ. ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ ಸೇರಿದಂತೆ ಮೊದಲಾದ ಕಡೆ 1,00,746 ಮಕ್ಕಳು ಲಸಿಕೆ ಪಡೆದಿದ್ದು, ಮನೆಯ ಬಳಿ ಮೇಲ್ವಿಚಾರಕರು ಭೇಟಿ ನೀಡಿದ ವೇಳೆ 1,741 ಮಕ್ಕಳು ಲಸಿಕೆ ಪಡೆದುಕೊಂಡಿದ್ದಾರೆ ಎಂದು ಜಿಬಿಎ ಸಾರ್ವಜನಿಕ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ 11,34,988 ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹಾಕಿಕೊಂಡಿತ್ತು. ಈ ಪೈಕಿ ಭಾನುವಾರ 10,77,134 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಇನ್ನೂ 66,796 ಮಕ್ಕಳು ಲಸಿಕೆ ಪಡೆದುಕೊಂಡಿಲ್ಲ. ಮಂಗಳವಾರದಿಂದ ಆಶಾ ಕಾರ್ಯಕರ್ತರು, ಅಂಗನವಾಡಿ ಹಾಗೂ ವೈದ್ಯಕೀಯ ಸಿಬ್ಬಂದಿಯು ಮನೆ ಮನೆ ಭೇಟಿ ನೀಡಿ ಲಸಿಕೆ ಪಡೆದ ಮಕ್ಕಳಿಗೆ ಲಸಿಕೆ ನೀಡಲಿದ್ದಾರೆ. ಡಿ.24ರ ವರೆಗೆ ಲಸಿಕೆ ನೀಡುವ ಅಭಿಯಾನ ಮುಂದುವರಿಯಲಿದೆ.
ನಗರ ಪಾಲಿಕೆಲಸಿಕೆ ಪಡೆದ ಮಕ್ಕಳ ಸಂಖ್ಯೆಲಸಿಕೆ ಪಡೆಯದ ಮಕ್ಕಳ ಸಂಖ್ಯೆಲಸಿಕೆ ಗುರಿಸಾಧನೆ(ಶೇ)
ಬೆಂ.ಕೇಂದ್ರ1,76,4139,9011,85,88895
ಬೆಂ.ಪಶ್ಚಿಮ2,63,38214,7602,80,52994
ಬೆಂ.ಪೂರ್ವ1,72,0019,1301,74,66798
ಬೆಂ.ದಕ್ಷಿಣ2,12,06711,6682,23,60795
ಬೆಂ.ಉತ್ತರ2,53,27121,3392,70,29794
ಒಟ್ಟು10,77,13466,79811,34,98895