ಪುಟ್ಟ ಬಾಲಕಿ ಅನುಮಾನಾಸ್ಪದ ಸಾವು : ಕೆರೆಯಲ್ಲಿ ಸಿಕ್ತು ಮೃತದೇಹ

Suvarna News   | Asianet News
Published : Dec 17, 2019, 11:08 AM IST
ಪುಟ್ಟ ಬಾಲಕಿ ಅನುಮಾನಾಸ್ಪದ ಸಾವು : ಕೆರೆಯಲ್ಲಿ ಸಿಕ್ತು ಮೃತದೇಹ

ಸಾರಾಂಶ

9 ವರ್ಷದ ಬಾಲಕಿಯೋರ್ವಳು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಕೆರೆಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಹಲವು ಶಂಕೆ ವ್ಯಕ್ತವಾಗಿದೆ. 

ಹಾಸನ [ಡಿ.17]: ಒಂಭತ್ತು ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮಡಬ ಗ್ರಾಮದಲ್ಲಿರುವ ಕೆರೆಯಲ್ಲಿ ಬ್ಯಾಡರಹಳ್ಳಿಯ ಬಾಲಕಿಯ ಶವ ಪತ್ತೆಯಾಗಿದೆ. 

ಶನಿವಾರ ನಾಲ್ಕನೆ ತರಗತಿ ಓದುತ್ತಿದ್ದ ಆಕೆ ತನ್ನ  ಸ್ನೇಹಿತರ ಜೊತೆಗೆ ಸೇರಿ ಚನ್ನರಾಯಪಟ್ಟಣ ತಾಲೂಕಿನ ಮಡಬ ಗ್ರಾಮದಲ್ಲಿ ನಡೆಯುತ್ತಿದ್ದ ಜಾತ್ರೆಗೆ ಹೋಗಿದ್ದ ಬಾಲಕಿ ಕಾಣೆಯಾಗಿದ್ದಳು.  ಆದರೆ ಸ್ನೇಹಿತರ ಮನೆಯಲ್ಲಿ ಇರಬಹುದೆಂದು ಮನೆಯವರು ಸುಮ್ಮನಾಗಿದ್ದು, ಆದರೆ ಎರಡು ದಿನ ಕಳೆದರು ಮನೆಗೆ ಬಾರದ ಹಿನ್ನೆಲೆ ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ. 

ಪ್ರಿಯತಮನ ಮರ್ಮಾಂಗ ಕತ್ತರಿಸಿದ್ದ ವೈದ್ಯೆಗೆ 10 ವರ್ಷ ಜೈಲು...

ತೀವ್ರ ಹುಡುಕಾಟದ ಬಳಿಕ ಮಡಬ ಕೆರೆಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಘಟನೆ ನಡೆದಿದ್ದು, ಬಾಲಕಿಯ ಶವವನ್ನು ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. 

ಈ ಬಾಲಕಿ ಸಾವಿನ ಸುತ್ತ ಇದೀಗ ಹಲವು ಅನುಮಾನಗಳೂ ಕೂಡ ವ್ಯಕ್ತವಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ತನಿಖೆ ನಡೆಯಲಿದೆ.

PREV
click me!

Recommended Stories

ಅಡಿಕೆ ತೋಟದ ದುರಂತ: ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!