ಅಹಮದಬಾದ್‌ನಿಂದ ಆಗಮಿಸಿದ ಧಾರವಾಡದ 9 ಮಂದಿಗೆ ಕೊರೋನಾ ಸೋಂಕು ದೃಢ| ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆ| ಸೋಂಕಿತರಿಗೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ|
ಧಾರವಾಡ(ಮೇ.13): ಗುಜರಾತ್‌ನ ಅಹಮದಬಾದ್‌ನಿಂದ ಆಗಮಿಸಿದ ಧಾರವಾಡದ 9 ಮಂದಿಗೆ ಕೊರೋನಾ ಸೋಂಕು ಇರುವುದು ಮಂಗಳವಾರ ದೃಢವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಇವರೆಲ್ಲರೂ ಅಹಮದಬಾದ್‌ನಿಂದ ಕಳೆದ ಮೇ 8ರಂದು ಆಗಮಿಸಿದ್ದರು. ಇವರನ್ನು ಜಿಲ್ಲೆಯ ಕೃಷಿ ವಿವಿಯಲ್ಲಿರುವ ಆಗಮನ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡು ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಲಾಗಿತ್ತು. ಜತೆಗೆ ಎಲ್ಲರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೂ ಒಳಪಡಿಸಲಾಗಿತ್ತು.
ಲಾಕ್‌ಡೌನ್: ಮಂಗಳೂರಿಂದ ನಡೆದು ಹುಬ್ಬಳ್ಳಿಗೆ ಬಂದಿದ್ದವರು ಇಲ್ಲಿಂದರೂ ಕಾಲ್ಕಿತ್ತರು..!
ಇದೀಗ ಸೋಂಕು ದೃಢಪಟ್ಟಿರುವುದರಿಂದ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರೆಲ್ಲರೂ ತಬ್ಲೀಘಿಗಳೆಂದು ತಿಳಿದುಬಂದಿದೆ. ಈಗಾಗಲೇ ಜಿಲ್ಲೆಯಲ್ಲಿ ಏಳು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.