ಲಾಕ್ ಡೌನ್ ನಡುವೆ ನಿಖಿಲ್ ವಿವಾಹಕ್ಕೆ ಅನುಮತಿ/ ಹೈಕೋರ್ಟ್ ಗೆ ಲಿಖಿತ ವಿವರಣೆ ಸಲ್ಲಿಸಿದ ರಾಜ್ಯ ಸರ್ಕಾರ/ ಜಿಲ್ಲಾಧಿಕಾರಿ ಅನುಮತಿ ನೀಡುವಾಗ ಸಂಖ್ಯೆ ನಮೂದಿಸಿರಲಿಲ್ಲ/ ವಿವಾಹದಲ್ಲಿ ಪಾಲ್ಗೊಳ್ಳುವುದಕ್ಕೆ ಜನರ ಮಿತಿ ನಿಗದಿಪಡಿಸಬೇಕಿತ್ತು/ ಕೇಂದ್ರದ ಮಾರ್ಗಸೂಚಿಯಲ್ಲಿ ಡಿಸಿಗೆ ವಿವಾಹ ನಿಯಂತ್ರಣ ಅಧಿಕಾರವಿತ್ತು
ಬೆಂಗಳೂರು(ಮೇ 12) ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹಕ್ಕೆ ಸಂಬಂಧಿಸಿ ಎಷ್ಟು ವಾಹನಗಳಿಗೆ ಅನುಮತಿ ನೀಡಲಾಗಿತ್ತು ಸ್ಪಷ್ಟನೆ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಸೂಚನೆ ನೀಡಿದೆ.
ಲಾಕ್ ಡೌನ್ ನಡುವೆ ನಿಖಿಲ್ ವಿವಾಹ ನಡೆದಿತ್ತು. ನಿಖಿಲ್ ಕುಮಾರಸ್ವಾಮಿ ಮದುವೆಯಲ್ಲಿ ಲಾಕ್‌ಡೌನ್ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮೌಖಿಕ ಅಭಿಪ್ರಾಯಪಟ್ಟಿತ್ತು. ಏ.17ರಂದು ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿ ಮದುವೆ ನಡೆದಿತ್ತು. ಈ ಕುರಿತು ರಾಜ್ಯ ಸರ್ಕಾರದ ವಕೀಲ ವಿಕ್ರಮ್ ಹುಯಿಲ್ಗೊಳ್ ವರದಿ ಸಲ್ಲಿಸಿದ್ದರು.
ರಾಜ್ಯ ಸರ್ಕಾರಕ್ಕೆ ತಲೆನೋವು ತಂದ ನಿಖಿಲ್ ಮದುವೆ
ಜಿಲ್ಲಾಧಿಕಾರಿ ಅನುಮತಿ ನೀಡುವಾಗ ಸಂಖ್ಯೆ ನಮೂದಿಸಿರಲಿಲ್ಲ. ವಿವಾಹದಲ್ಲಿ ಪಾಲ್ಗೊಳ್ಳುವುದಕ್ಕೆ ಜನರ ಮಿತಿ ನಿಗದಿಪಡಿಸಬೇಕಿತ್ತು. ಕೇಂದ್ರದ ಮಾರ್ಗಸೂಚಿಯಲ್ಲಿ ಡಿಸಿಗೆ ವಿವಾಹ ನಿಯಂತ್ರಣ ಅಧಿಕಾರವಿತ್ತು. ಆದರೆ ಏ.15. ರ ಮಾರ್ಗಸೂಚಿಯಲ್ಲಿ ವಿವಾಹಕ್ಕೆ ಸಂಖ್ಯಾ ಮಿತಿ ನಿಗದಿಪಡಿಸಿರಲಿಲ್ಲ. ಮೇ.1 ರ ಮಾರ್ಗಸೂಚಿಯಲ್ಲಿ 50 ಜನರ ಮಿತಿ ನಿಗದಿಪಡಿಸಲಾಗಿತ್ತು. ಈ ಕಾರಣದಿಂ ಏ.17 ರಂದು ನಡೆದ ನಿಖಿಲ್ ವಿವಾಹಕ್ಕೆ ಸಂಖ್ಯಾ ಮಿತಿ ವಿಧಿಸಬೇಕಿತ್ತು ಎಂದು ಹೇಳಿದೆ.
ನಿಖಿಲ್ ಕುಮಾರಸ್ವಾಮಿ ಮದುವೆ ಸಂಭ್ರಮ
ಮುಂದೆ ಇಂಥ ಲೋಪ ಮರುಕಳಿಸಲ್ಲ ಎಂದು ಸರ್ಕಾರಿ ವಕೀಲ ವಿಕ್ರಮ್ ಹುಯಿಲ್ಗೋಳ್ ಹೈಕೋರ್ಟ್ ಗೆ ವಿನಂತಿ ಮಾಡಿಕೊಂಡಿದ್ದಾರೆ. ಆದರೆ ವಾಹನಗಳ ವಿಚಾರದಲ್ಲಿ ಖಡಕ್ ನಿರ್ಧಾರ ತೆಗೆದುಕೊಂಡಿರುವ ಹೈಕೋರ್ಟ್ ಅನುಮತಿ ನೀಡಿದ್ದರ ಬಗ್ಗೆ ವಿವರಣೆ ಕೇಳಿದೆ.
ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ವಿವಾಹ ಸರಳವಾಗಿ ನಡೆದಿದೆ ಎಂದು ವರದಿಯಾಗಿದ್ದರೂ ಹೈಕೋರ್ಟ್ ವಿವರಣೆ ಕೇಳಿದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತೆ ಎಂದು ಈ ಹಿಂದೆಯೇ ಪ್ರಶ್ನೆ ಮಾಡಿತ್ತು .