Ballari: ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವೃದ್ಧೆ

By Govindaraj S  |  First Published Apr 7, 2022, 2:51 PM IST

ಹುಟ್ಟು ಹೇಗಾದ್ರೂ ಆಗಲಿ ಸಾವು ಚರಿತ್ರೆಯಾಗಿರಬೇಕು ಎನ್ನುವ ಮಾತು ಸರ್ವಕಾಲಿಕ. ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಸಾಧನೆ ಬದುಕನ್ನು ಬಾಳಬೇಕು. ಆದರೆ ಇಲ್ಲಿನ ವೃದ್ಧೆ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.


ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಏ.07): ಹುಟ್ಟು ಹೇಗಾದ್ರೂ ಆಗಲಿ ಸಾವು ಚರಿತ್ರೆಯಾಗಿರಬೇಕು ಎನ್ನುವ ಮಾತು ಸರ್ವಕಾಲಿಕ. ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಸಾಧನೆ ಬದುಕನ್ನು ಬಾಳಬೇಕು. ಆದರೆ ಇಲ್ಲಿನ ವೃದ್ಧೆ (Old Women) ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತನ್ನ ಸಾವಿನ (Death) ಬಳಿಕ ತನ್ನ ದೇಹ ಮಣ್ಣು ಸೇರಬಾರದು ಕನಿಷ್ಠ ವೈದ್ಯಕೀಯ ವಿದ್ಯಾರ್ಥಿಗಳಿಗಾದರೂ (Students) ಕಲಿಕೆ ಸಹಾಯಕ್ಕೆ ಬರಲಿ ಎಂದು ದೇಹದಾನ ಮಾಡಿ ಮಾದರಿಯಾಗಿದ್ದಾರೆ.

Tap to resize

Latest Videos

undefined

ಬಳ್ಳಾರಿಗೆ ಬಂತು ಬೆಳಗಾವಿ ಮೃತದೇಹ: ಬೆಳಗಾವಿ ಜಿಲ್ಲೆ ಬೈಲಹೊಂಗಲದ ನಿವಾಸಿ ದಿ . ಕಸ್ತೂರವ್ವ ಬಸವಣ್ಣೆಪ್ಪ ಜಿಗಜಿನ್ನಿ (85) ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದರು. ಮೃತರ ಹತ್ತಿರ ಸಂಬಂಧಿಗಳ ಮನವಿ ಮೇರೆಗೆ ಮೃತ ದೇಹವನ್ನು ಬೈಲಹೊಂಗಲದ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಹೊಂಗಲದ ಡಾ. ರಾಮಣ್ಣನವರ ಚಾರಿಟಬಲ್ ಟ್ರಸ್ಟ್ ಮೂಲಕ ಬಳ್ಳಾರಿಯ ತಾರಾನಾಥ್ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಹಸ್ತಾಂತರಿಸಲಾಗಿದೆ.

Ballari ಭವಿಷ್ಯ ಹೇಳೋ ನೆಪದಲ್ಲಿ ವಾಮಾಚಾರ ಮಾಡಿ ಕಣ್ಣೆದುರೇ ಕತ್ತಿನ ಸರ ಎಗರಿಸಿದ ಚಾಲಾಕಿ!

ನೇತ್ರದಾನ ಚರ್ಮದಾನವನ್ನು ಮಾಡಿದ್ದಾರೆ: ಮಣ್ಣಿಗೆ ಹೋಗೋ ದೇಹಕ್ಕಾಗಿ ಜೀವನವೀಡಿ ಬಡಿದಾಡೋ ಮನುಷ್ಯ ಸತ್ತ ಮೇಲೂ ಮತ್ತೊಬ್ಬರಿ ಸಹಕಾರಿಯಾಗಬೇಕು ಅನ್ನೋ ತತ್ವದಡಿ ಇಲ್ಲಿ ದೇಹದ ಎಲ್ಲ ಅಂಗಾಂಗಗಳನ್ನು ದಾನ ಮಾಡಲಾಗಿದೆ. ನೇತ್ರದಾನದ ಮುಖಾಂತರ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಚರ್ಮ ದಾನದ ಮುಖಾಂತರ ಸುಟ್ಟ ರೋಗಿಗೆ ಜೀವದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.  ಕಸ್ತೂರವ್ವ ಅವರ ನೇತ್ರಗಳು, ಬೆಳಗಾವಿ ಕೆಎಲ್‌ಇ ಸಂಸ್ಥೆಯ ಡಾ,ಪ್ರಭಾಕರ ಕೋರೆ ಆಸತ್ರೆಯ ನೇತ್ರ ಭಂಡಾರಕ್ಕೆ ಹಾಗೂ ಚರ್ಮವನ್ನು ಅದೇ ಆಸ್ಪತ್ರೆಯ ಕೆಎಲ್‌ಇ ರೋಟರಿ ಸ್ಕಿನ್‌ ಬ್ಯಾಂಕ್‌ಗೆ (ಚರ್ಮ ಭಂಡಾರ) ದಾನ ನೀಡಿದ್ದಾರೆ.

ಸುಟ್ಟ ಗಾಯವಿರೋರಿಗೆ ಚರ್ಮವೇ ಸಿಗೋದಿಲ್ಲ: ಹೌದು! ವಿವಿಧ ಅವಘಡದಲ್ಲಿ ಮೈಮೇಲಿನ ಚರ್ಮ ಸುಟ್ಟಿರೋ ರೋಗಿಗಳಿಗೆ ಚರ್ಮವೇ ಸಿಗೋದಿಲ್ಲ. ಹೀಗಾಗಿ ಮೃತಪಟ್ಟ ವ್ಯಕ್ತಿಗಳು ಈ ರೀತಿಯ ದೇಹದಾನ ಮಾಡಿದರೆ ಆ ವ್ಯಕ್ತಿಯ ಚರ್ಮ ಹಲವರಿಗೆ ಬಳಕೆ ಮಾಡಬಹುದಂತೆ. ಇನ್ನೂ ಸುಟ್ಟಗಾಯಕ್ಕೆ ದಾನಿಯ ಚರ್ಮ ಜೋಡಿಸುವ ಮೂಲಕ ಬೇಗ ಗುಣವಾಗುವಂತೆ ಮಾಡಲು ಅವಕಾಶವಿದೆ. ಹೀಗೆ ಅಂಗಾಂಗ ದಾನದ ಮೂಲಕ ಇಬ್ಬರು ಅಂಧರಿಗೆ ಬೆಳಕು ನೀಡಿದ್ದಲ್ಲದೇ, ಸುಟ್ಟಗಾಯದಿಂದ ಬಳಲುತ್ತಿರುವ ರೋಗಿಗಳಿಗೆ ಶೀಘ್ರ ಗುಣಮುಖರಾಗಲು ನೆರವಾಗಿರೋದು ವಿಶೇಷವಾಗಿದೆ.

Ballari: ಕುಡಿಯುವ ನೀರಿಗಾಗಿ ಹೆದ್ದಾರಿ ತಡೆದು ಜನರ ಆಕ್ರೋಶ

ದೇಹದಾನ ಪ್ರಕ್ರಿಯೆಗೆ ಸಹಕರಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಸೈದಾ ಆತರ ಫಾತಿಮಾ , ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ರಾಜಶೇಖರ ಗಾಣಿಗೇರ, ಶರೀರ ಮಹಾವಿದ್ಯಾಲಯದ ಎಲ್ಲ ಸಹ ಪ್ರಾಧ್ಯಾಪಕರು ರಚನಾ ವಿಭಾಗ ಮುಖ್ಯಸ್ಥ ಡಾ. ಶಾಮ್ ಕಿಶೋರ್ ಸಿಂಗ್ ವಿದ್ಯಾರ್ಥಿಗಳಿಗೆ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಮಹಾಂತೇಶ ರಾಮಣ್ಣನವರ ಹಾಗೂ ಜಿಗಜಿನ್ನಿ ಕುಟುಂಬದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

click me!