ದಕ್ಷಿಣ ಕನ್ನಡದಲ್ಲಿ ಒಂದೇ ದಿನ 84 ಪಾಸಿ​ಟಿವ್‌ ಕೇಸ್‌

By Kannadaprabha NewsFirst Published Jul 2, 2020, 7:17 AM IST
Highlights

ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಾವಿನ ಸರಣಿ ಮುಂದುವರಿದಿದ್ದು, ಬುಧವಾರ ಒಂದೇ ದಿನ ಮೂರು ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ ಒಂದೇ ದಿನ ಬರೋಬ್ಬರಿ 84 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿವರೆಗೆ ಒಟ್ಟು ಸೋಂಕಿತರ ಸಂಖ್ಯೆ 833ಕ್ಕೆ ತಲುಪಿದೆ.

ಮಂಗ​ಳೂರು(ಜೂ.02): ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಾವಿನ ಸರಣಿ ಮುಂದುವರಿದಿದ್ದು, ಬುಧವಾರ ಒಂದೇ ದಿನ ಮೂರು ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ ಒಂದೇ ದಿನ ಬರೋಬ್ಬರಿ 84 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿವರೆಗೆ ಒಟ್ಟು ಸೋಂಕಿತರ ಸಂಖ್ಯೆ 833ಕ್ಕೆ ತಲುಪಿದೆ. ಇದರೊಂದಿಗೆ ದ.ಕ.ದಲ್ಲೂ ಸೋಂಕಿತರ ಸಂಖ್ಯೆ ಒಂದು ಸಾವಿರ ಸಮೀಪಿಸುವ ಭೀತಿ ಉಂಟಾಗಿದೆ.

ಜಿಲ್ಲೆಯಲ್ಲಿ ಮೂಲ ಪತ್ತೆಯಾಗದ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಹೆಚ್ಚುವ ಜೊತೆಗೆ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಕೊರೋನಾ ಸೋಂಕು ಸಾಮುದಾಯಿಕವಾಗಿ ಹಬ್ಬುತ್ತಿದ್ದು, ಜನತೆಯಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ.

ಡಿಕೆ ಶಿವಕುಮಾರ್‌ಗೆ ಇದ್ದಲ್ಲಿಯೇ ಸಿಕ್ತು ವಿಶೇಷ ಆಶೀರ್ವಾದ...!

84 ಮಂದಿ ಪಾಸಿಟಿವ್‌: ಬುಧವಾರ ಬಂದ ಒಟ್ಟು 145 ವರದಿಗಳ ಪೈಕಿ 84 ಪಾಸಿಟಿವ್‌ ಮತ್ತು 61 ನೆಗೆಟಿವ್‌ ಬಂದಿದೆ. ಸೋಂಕಿತರ ಪೈಕಿ ಏಳು ದಿನದ ಕಂದಮ್ಮ 1 ಹಾಗೂ 4 ವರ್ಷದ ಗಂಡು ಮಗು ಸೇರಿದೆ. ಒಟ್ಟು 28 ಜ್ವರ ಶೀತ ಸಮಸ್ಯೆ ಕಂಡುಬಂದವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. 6 ಮಂದಿ ಅಂತಾರಾಷ್ಟ್ರೀಯ ಪ್ರಯಾಣ ಮಾಡಿದವರಾಗಿದ್ದು, ಒಬ್ಬರು ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದಾರೆ. 11 ಮಂದಿಯ ಸೋಂಕಿನ ಮೂಲ ನಿಗೂಢವಾಗಿದೆ. 38 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. ಇನ್ನೂ ಕೂಡ 264 ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ. 30 ಮಂದಿಯಲ್ಲಿ ಶ್ವಾಸಕೋಶದ ಸೋಂಕು ಪತ್ತೆಯಾಗಿದೆ.

ಐಸಿಯುನಲ್ಲಿ ಮೂವರು: ಕೊರೋನಾ ಸೋಂಕಿನಿಂದ ಬಳಲುತ್ತಿದ್ದವರ ಪೈಕಿ 71 ವರ್ಷದ ವೃದ್ಧ ಗುಣಮುಖರಾಗಿದ್ದು, ಬುಧವಾರ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿದ್ದಾರೆ. ಇದರೊಂದಿಗೆ ಒಟ್ಟು 444 ಮಂದಿ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆದಂತಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಮೂರು ಮಂದಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಿವರ್‌ ಕಾಯಿಲೆ, ಡಯಾಬಿಟಿಸ್‌ ಮತ್ತು ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿರುವ 57 ವರ್ಷದ ಮಹಿಳೆ, ಡಯಾಬಿಟಿಕ್‌, ಅ​ಧಿಕ ರಕ್ತದ ಒತ್ತಡ ಪಾರ್ಕಿನ್‌ಸನ್‌ ಸಮಸ್ಯೆಯಿಂದ ಬಳಲುತ್ತಿರುವ 78 ವರ್ಷದ ವೃದ್ಧ, ಮಧುಮೇಹ ಹಾಗೂ ಹೃದಯ ಸಮಸ್ಯೆಯಿಂದ ಬಳಲುತ್ತಿರುವ 52 ವರ್ಷದ ಮಹಿಳೆಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ಇಬ್ಬರು ರೋಗಿಗಳನ್ನು ಬುಧವಾರ ಐಸಿಯುವಿನಿಂದ ವಾರ್ಡ್‌ಗ್‌ ಶಿಫ್ಟ್‌ ಮಾಡಲಾಗಿದೆ.

ನಾಳೆ​ಯಿಂದ 5ರ ವರೆಗೆ ಡಿಸಿ ಕಚೇರಿಗೆ ಸಾರ್ವಜನಿಕರಿಗೆ ನಿರ್ಬಂಧ

ಮಂಗಳೂರಿನಲ್ಲಿರುವ ದ.ಕ. ಜಿಲ್ಲಾ​ಧಿಕಾರಿ ಕಚೇರಿ ಸಂಕೀರ್ಣಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇಲ್ಲಿರುವ ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಒಳಗೊಂಡಂತೆ ಎಲ್ಲ ಕಚೇರಿಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡುವ ಕಾರಣದಿಂದ ಜು.3ರಿಂದ ಜು.5ರವರೆಗೆ ಸಾರ್ವಜನಿಕರ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿ​ಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ರಾತ್ರಿ ನಿಷೇಧಾಜ್ಞೆ ವಿಸ್ತರಣೆ

ಕೋವಿಡ್‌-19 ನಿಯಂತ್ರಣ ಸಲುವಾಗಿ ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರದಂತೆ ದ.ಕ. ಜಿಲ್ಲೆಯಲ್ಲೂ ಜು.1ರಿಂದ 31ರ ವರೆಗೆ ರಾತ್ರಿ 8ರಿಂದ ನಸುಕಿನ 5 ಗಂಟೆ ವರೆಗೆ ಸೆಕ್ಷನ್‌ 144ರನ್ವಯ ನಿಷೇಧಾಜ್ಞೆ ವಿಸ್ತರಿಸಿ ಜಿಲ್ಲಾ ದಂಡಾಧಿಕಾರಿ ಬುಧವಾರ ಆದೇಶ ಹೊರಡಿಸಿದ್ದಾರೆ.

ದ.ಕ. ಬುಧವಾರ ಬುಲೆಟಿನ್‌

ಜಿಲ್ಲೆಯ ಒಟ್ಟು ಸೋಂಕಿತರು- 833.

ಗುಣಮುಖರು -444

ಮೃತರು-17

ಚಿಕಿತ್ಸೆ ಪಡೆಯುತ್ತಿರುವವರು-372

ತೀವ್ರ ನಿಗಾದಲ್ಲಿ-3

click me!