2 ದಿನದಲ್ಲಿ 8,113 ಕಾರ‍್ಯಪಡೆ ರಚನೆಗೆ ಸಚಿವ ಸುಧಾಕರ್ ಸೂಚನೆ

By Kannadaprabha NewsFirst Published Jul 16, 2020, 8:53 AM IST
Highlights

ಬೆಂಗಳೂರಲ್ಲಿ ಇನ್ನು ಎರಡು ದಿನಗಳಲ್ಲಿ 8113 ಬೂತ್‌ ಮಟ್ಟದ ಕಾರ್ಯಪಡೆಗಳನ್ನು ರಚಿಸಿ ಲಾಕ್‌ಡೌನ್‌ ಅವಧಿ ಮುಗಿಯುವುದರೊಳಗೆ ಮನೆ ಮನೆ ಸರ್ವೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿಯ ಎಂಟು ವಲಯಗಳ ಕೋವಿಡ್‌ ಉಸ್ತುವಾರಿ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್‌ ಸೂಚನೆ ನೀಡಿದ್ದಾರೆ.

ಬೆಂಗಳೂರು(ಜು.16): ಬೆಂಗಳೂರಲ್ಲಿ ಇನ್ನು ಎರಡು ದಿನಗಳಲ್ಲಿ 8113 ಬೂತ್‌ ಮಟ್ಟದ ಕಾರ್ಯಪಡೆಗಳನ್ನು ರಚಿಸಿ ಲಾಕ್‌ಡೌನ್‌ ಅವಧಿ ಮುಗಿಯುವುದರೊಳಗೆ ಮನೆ ಮನೆ ಸರ್ವೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿಯ ಎಂಟು ವಲಯಗಳ ಕೋವಿಡ್‌ ಉಸ್ತುವಾರಿ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್‌ ಸೂಚನೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ಉಸ್ತುವಾರಿ ಅಧಿಕಾರಗಳ ಜತೆ ವಿಡಿಯೋ ಸಂವಾದ ನಡೆಸಿದ ಅವರು, ರಾಜಧಾನಿಯಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಬೂತ್‌ ಮಟ್ಟದ ಕಾರ್ಯಪಡೆ ರಚಿಸುವ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಲಾಗಿದೆ. ಅದರನ್ವಯ ಇನ್ನು ಒಂದೆರಡು ದಿನಗಳಲ್ಲಿ ಬೂತ್‌ ಮಟ್ಟದ ಕಾರ್ಯಪಡೆ ರಚನೆಯಾಗಬೇಕು. ಲಾಕ್‌ಡೌನ್‌ ಅವಧಿ ಮುಕ್ತಾಯಗೊಳ್ಳುವ ಅಂದರೆ ಜು.22ರೊಳಗೆ ಈ ಕಾರ್ಯಪಡೆಗಳು ಮನೆ ಮನೆ ಸರ್ವೆ ಮೂಲಕ ತಮಗೆ ವಹಿಸಿರುವ ಜವಾಬ್ದಾರಿ ಪೂರ್ಣಗೊಳಿಸಬೇಕು. ಆ ನಿಟ್ಟಿನಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗುವಂತೆ ಸೂಚನೆ ನೀಡಿದರು.

ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬಾರದು: ಕೊರೋನ ಚಿಕಿತ್ಸೆಗೆ ಸಿದ್ಧ ಎಂದ ಖಾಸಗಿ ಆಸ್ಪತ್ರೆಗಳು

ಪ್ರತಿ ಕಾರ್ಯಪಡೆಗಳಿಗೆ ಸೀಮಿತ ಜವಾಬ್ದಾರಿಗಳಿರುತ್ತವೆ. ತಮ್ಮ ಬೂತ್‌ ಮಟ್ಟದ ಪ್ರತಿ ಮನೆಗೂ ಭೇಟಿ ನೀಡಿ 60 ವರ್ಷ ಮೇಲ್ಪಟ್ಟವರನ್ನು ಕೋವಿಡ್‌ ಇರಲಿ ಬಿಡಲಿ ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿ ಪ್ರತ್ಯೇಕವಾಗಿರುವಂತೆ (ರಿವರ್ಸ್‌ ಐಸೋಲೇಷನ್‌) ತಿಳಿಸಬೇಕು. ಅದೇ ರೀತಿ ಯಾವುದೇ ಮನೆಯಲ್ಲಿ ತೀವ್ರ ಉಸಿರಾಟದ ತೊಂದರೆ(ಸಾರಿ) ಮತ್ತು ವಿಷಮ ಶೀತ ಜ್ವರದ (ಐಎಲ್‌ಐ) ಲಕ್ಷಣಗಳಿರುವವರನ್ನು ತಕ್ಷಣ ಹತ್ತಿರದ ಫೀವರ್‌ ಕ್ಲಿನಿಕ್‌ಗೆ ಕರೆ ತಂದು ಕೋವಿಡ್‌ ಪರೀಕ್ಷೆ ಮಾಡಿಸಬೇಕು. ಸೋಂಕು ದೃಢಪಟ್ಟವರಲ್ಲಿ ರೋಗ ಲಕ್ಷಣ ಆಧರಿಸಿ ಹೋಮ್‌ ಐಸೋಲೇಷನ್‌, ಕೋವಿಡ್‌ ನಿಗಾ ಕೇಂದ್ರ, ಇಲ್ಲವೇ ಕೋವಿಡ್‌ ಆಸ್ಪತ್ರೆ ಮತ್ತು ಚಿಕಿತ್ಸಾ ಕೇಂದ್ರಗಳಿಗೆ ಸೇರಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

‘ಮುಂಬೈನ ಧಾರಾವಿ ಮಾದರಿ ಅನುಸರಿಸಿ’

ಈ ಬಗ್ಗೆ ಸಮಿತಿ ಸದಸ್ಯರಿಗೆ ಮಾರ್ಗಸೂಚಿ ಬಗ್ಗೆ ತರಬೇತಿ ಸಮಯದಲ್ಲೇ ಮನವರಿಕೆ ಮಾಡಿಕೊಡಬೇಕು. ಅವರಿಗೆ ಪಲ್ಸ್‌ ಆಕ್ಸಿಮೀಟರ್‌ ಮತ್ತು ಥರ್ಮಲ್‌ ಸ್ಕ್ರೀನಿಂಗ್‌ ಯಂತ್ರಗಳನ್ನು ಒದಗಿಸಬೇಕು ಎಂದು ಸಚಿವ ಸುಧಾಕರ್‌ ತಿಳಿಸಿದರು.

ಲಾಕ್‌ಡೌನ್‌ ವೇಳೆ ಸೇವೆ ಸಲ್ಲಿಸುವ ಬಿಎಂಟಿಸಿ ಸಿಬ್ಬಂದಿಗೆ ವಿಶೇಷ ಭತ್ಯೆ

ಆ್ಯಂಬುಲೆನ್ಸ್‌ ಒದಗಿಸುವುದು ಸಮಿತಿ ಜವಾಬ್ದಾರಿ ಆಗಬೇಕು. ಸಂಪರ್ಕಿತರ ಪತ್ತೆ ಕಾರ್ಯವೂ ಮರು ಆರಂಭ ಆಗಬೇಕು. ಕೊಳಚೆ ಪ್ರದೇಶ ಮತ್ತು ಹೋಮ್‌ ಕ್ವಾರಂಟೈನ್‌ ಸೌಲಭ್ಯಗಳಿಲ್ಲದ ಜನವಸತಿ ಪ್ರದೇಶಗಳಲ್ಲಿ ಪಾಸಿಟಿವ್‌ ಆದವರನ್ನು ಸರ್ಕಾರಿ ವ್ಯವಸ್ಥೆಯ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇಡುವ ಕೆಲಸ ಆಗಬೇಕು. ಇದಕ್ಕಾಗಿ ಮುಂಬಯಿ ಧಾರಾವಿಯಲ್ಲಿ ಅಳವಡಿಸಿಕೊಂಡಿರುವ ವ್ಯವಸ್ಥೆ ರೂಪಿಸಿಕೊಳ್ಳಬೇಕು ಸೂಚಿಸಿದರು.

click me!