ಎಲ್ಲ ವಾರ್ಡ್‌ನ ಎಲ್ಲ ಮನೆ ಸದಸ್ಯರಿಗೆ ಆ್ಯಂಟಿಜೆನ್‌ ಟೆಸ್ಟ್‌

By Kannadaprabha NewsFirst Published Jul 16, 2020, 7:55 AM IST
Highlights

ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಜು.22 ವರೆಗೆ ಕಂಟೈನ್ಮೆಂಟ್‌ ಪ್ರದೇಶದಲ್ಲಿರುವ ಮನೆಗಳಿಗೆ ಭೇಟಿ ನೀಡಿ ಕೊರೋನಾ ಸೋಂಕಿನ ಲಕ್ಷಣ ಇರುವವರನ್ನು ರಾರ‍ಯಪಿಡ್‌ ಆ್ಯಂಟಿಜೆನ್‌ ಸೋಂಕು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

ಬೆಂಗಳೂರು(ಜು.16): ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಜು.22 ವರೆಗೆ ಕಂಟೈನ್ಮೆಂಟ್‌ ಪ್ರದೇಶದಲ್ಲಿರುವ ಮನೆಗಳಿಗೆ ಭೇಟಿ ನೀಡಿ ಕೊರೋನಾ ಸೋಂಕಿನ ಲಕ್ಷಣ ಇರುವವರನ್ನು ರಾರ‍ಯಪಿಡ್‌ ಆ್ಯಂಟಿಜೆನ್‌ ಸೋಂಕು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾರ‍ಯಪಿಡ್‌ ಅ್ಯಂಟಿಜೆನ್‌ ಪರೀಕ್ಷೆ ಮೂಲಕ ತ್ವರಿತವಾಗಿ ಕೊರೋನಾ ಸೋಂಕಿತರನ್ನು ಪತ್ತೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಾರ್ಡ್‌ನ ವೈದ್ಯಾಧಿಕಾರಿಗಳು ಆಯಾ ವಾರ್ಡ್‌ನಲ್ಲಿ ಇರುವ ಕಂಟೈನ್ಮೆಂಟ್‌ ಪ್ರದೇಶದಲ್ಲಿರುವ ಮನೆಗಳಿಗೆ ಹೋಗಿ ಸೋಂಕಿನ ಲಕ್ಷಣ ಇರುವವರಿಗೆ ಆ್ಯಂಟಿಜೆನ್‌ ಪರೀಕ್ಷೆ ಮಾಡಬೇಕು.

MTR‌ ಸಂಸ್ಥೆಯ 30 ಸಿಬ್ಬಂದಿಗೆ ಕೊರೋನಾ ಸೋಂಕು ದೃಢ

ಸೋಂಕು ದೃಢಪಡುವವರ ವರದಿಯನ್ನು ನಗರ ಪ್ರಾಥಮಿಕ ವೈದ್ಯಾಧಿಕಾರಿಗಳಿಗೆ ವಾಟ್ಸ್‌ಆಪ್‌ ಮೂಲಕ ಕಳುಹಿಸಿಕೊಡಬೇಕು. ಈ ಬಗ್ಗೆ ಐಸಿಎಂಆರ್‌ ಪೋರ್ಟಲ್‌ ದಾಖಲಿಸುವಂತೆ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಆದೇಶಿಸಿದ್ದಾರೆ. ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗೆ ಒಂದು ವಾಹನ, ಓರ್ವ ಲ್ಯಾಬ್‌ ಟೆನ್ನಿಷಿಯನ್‌, ಸಹಾಯ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

click me!