ಲಾಕ್‌ಡೌನ್ ಮಧ್ಯಯೇ ಕಾರಾಗೃಹದಿಂದ 80 ಕೈದಿಗಳ ಸ್ಥಳಾಂತರ

By Kannadaprabha NewsFirst Published Apr 19, 2020, 7:33 AM IST
Highlights

ಮಂಗಳೂರು ಕಾರಾಗೃಹದಿಂದ 80 ಮಂದಿ ವಿಚಾರಣಾಧೀನ ಕೈದಿಗಳನ್ನು ಕಾರವಾರ ಹಾಗೂ ಚಿಕ್ಕಮಗಳೂರು ಕಾರಾಗೃಹಗಳಿಗೆ ಶನಿವಾರ ಸ್ಥಳಾಂತರ ಮಾಡಲಾಗಿದೆ.

ಮಂಗಳೂರು(ಏ.19): ಮಂಗಳೂರು ಕಾರಾಗೃಹದಿಂದ 80 ಮಂದಿ ವಿಚಾರಣಾಧೀನ ಕೈದಿಗಳನ್ನು ಕಾರವಾರ ಹಾಗೂ ಚಿಕ್ಕಮಗಳೂರು ಕಾರಾಗೃಹಗಳಿಗೆ ಶನಿವಾರ ಸ್ಥಳಾಂತರ ಮಾಡಲಾಗಿದೆ.

ನಿಗದಿತ ಸಂಖ್ಯೆಗಿಂತ ಅಧಿಕ ಪ್ರಮಾಣದಲ್ಲಿ ವಿಚಾರಣಾಧೀನ ಕೈದಿಗಳು ಇರುವುದು ಹಾಗೂ ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಸೂಚನೆಯಂತೆ ಸ್ಥಳಾಂತರ ಮಾಡಲಾಗಿದೆ.

ಮಗು ಮೃತಪಟ್ಟ ಮರುದಿನವೇ ಕರ್ತವ್ಯಕ್ಕೆ ಹಾಜರ್‌!

40 ಮಂದಿಯನ್ನು ಕಾರವಾರ ಹಾಗೂ 40 ಮಂದಿಯನ್ನು ಚಿಕ್ಕಮಗಳೂರು ಕಾರಾಗೃಹಕ್ಕೆ ಬಿಗು ಪೊಲೀಸ್‌ ಬಂದೋಬಸ್‌್ತನಲ್ಲಿ ಮೂರು ಕೆಎಸ್‌ಆರ್‌ಟಿಸಿ ಬಸ್‌ ಮೂಲಕ ಕಳುಹಿಸಲಾಯಿತು. ಸುಮಾರು 250 ಮಂದಿಗೆ ಅವಕಾಶವಿರುವ ಈ ಕಾರಾಗೃಹದಲ್ಲಿ ಪ್ರಸ್ತುತ 311 ಮಂದಿ ಇದ್ದಾರೆ. ಹಾಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. 210ಕ್ಕೂ ಅಧಿಕ ಮಂದಿ ಕಾರಾಗೃಹದಲ್ಲಿದ್ದಾರೆ.

ಕೊರೋನಾ ಆತಂಕ: ಜಿಲ್ಲಾಡಳಿತಕ್ಕೀಗ ಮುಲ್ಲಾನ ಓಣಿಯದ್ದೇ ದೊಡ್ಡ ಸವಾಲು..!

ಕೊರೋನಾ ವೈರಸ್‌ ಹರಡದಂತೆ ಹೊಸದಾಗಿ ಬರುವ ಹಾಗೂ ಆಸ್ಪತ್ರೆಗೆ ದಾಖಲಾಗಿ ಬರುವ ಕೈದಿಗಳಿಗೆ ಪ್ರತ್ಯೇಕ ಸೆಲ್‌ ಮಾಡಲಾಗಿದೆ. ಇತರ ಸೆಲ್‌ಗಳಲ್ಲಿ ಕೈದಿಗಳು ಹೆಚ್ಚಾದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರಗೃಹದ ಅಧೀಕ್ಷಕ ಚಂದನ್‌ ಪಟೇಲ್‌ ತಿಳಿಸಿದ್ದಾರೆ.

click me!