ಸ್ವಚ್ಛ ಭಾರತ್: ತುಮಕೂರಲ್ಲಿ 8864 ಶೌಚಾಲಯ ನಿರ್ಮಾಣ

By Kannadaprabha NewsFirst Published Feb 16, 2020, 2:25 PM IST
Highlights

ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ತುಮಕೂರಿನಲ್ಲಿ 8 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅದಕ್ಕಾಗಿ 772.72 ಲಕ್ಷ ರು. ವಿನಿಯೊಗಿಸಲಾಗಿದೆ.

ತುಮಕೂರು(ಫೆ.16): ನಗರಾಭಿವೃದ್ಧಿ ಯೋಜನೆಯಡಿಯಲ್ಲಿ ಸ್ವಚ್ಛ ಭಾರತ್‌ ಮಿಷನ್‌ ವತಿಯಿಂದ ಜಿಲ್ಲೆಯ ನಗರಗಳಲ್ಲಿ 8864 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿ ಕೊಡಲಾಗಿದೆ, ಅದಕ್ಕಾಗಿ 772.72 ಲಕ್ಷ ರು. ವಿನಿಯೊಗಿಸಲಾಗಿದೆ.

ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 9198 ಭೌತಿಕ ಗುರಿ ನಿಗದಿ ಪಡಿಸಲಾಗಿತ್ತು, ಆ ಪೈಕಿ 8864 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿ ಶೇ.96.37ರಷ್ಟುಪ್ರಗತಿ ಸಾಧಿಸಲಾಗಿದೆ ಎಂದು ನಗರ ಮತ್ತು ಸ್ಥಳೀಯ ಪೌರಾಡಳಿತ ಇಲಾಖೆ ತಿಳಿಸಿದೆ.

ಕಣ್ಣೀರಿಡುತ್ತಲೇ ಹುತಾತ್ಮಯೋಧ ಗುರುವಿನ ಸಮಾಧಿಗೆ ಪೂಜೆ ಮಾಡಿದ ಪತ್ನಿ

ಇದೇ ಅವಧಿಯಲ್ಲಿ ಹುಳಿಯಾರು ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆರಿಸಿ ಬಯಲು ಶೌಚ ಮುಕ್ತ ನಗರ ಸ್ಥಳೀಯ ಸಂಸ್ಥೆಯಾಗಿ ಘೋಷಿಸಲು ಪೌರಾಡಳಿತ ನಿರ್ದೇಶನಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

click me!