ನ್ಯಾಯಾಲಯದಲ್ಲಿ ಪುನರ್‌ ಒಂದಾದ 8 ಜೋಡಿ

Published : Jul 09, 2023, 06:04 AM IST
  ನ್ಯಾಯಾಲಯದಲ್ಲಿ ಪುನರ್‌ ಒಂದಾದ 8 ಜೋಡಿ

ಸಾರಾಂಶ

ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದ ಡಿವೋರ್ಸ್‌ ಮತ್ತು ಜೀವನಾಂಶ ಸೇರಿದಂತೆ ವಿವಿಧ ಕೇಸುಗಳಲ್ಲಿ ಪುನಃ 8 ಜೋಡಿಗಳು ಒಂದಾದ ಐತಿಹಾಸಿಕ ಘಟನೆಗೆ ಅಲ್ಲಿದ್ದ ನ್ಯಾಯಾಧೀಶರು, ವಕೀಲರು,ಕಕ್ಷಿದಾರರು,ನ್ಯಾಯಾಲಯದ ಸಿಬ್ಬಂದಿ ಸಾಕ್ಷಿಯಾದರು.

  ತುಮಕೂರು :  ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದ ಡಿವೋರ್ಸ್‌ ಮತ್ತು ಜೀವನಾಂಶ ಸೇರಿದಂತೆ ವಿವಿಧ ಕೇಸುಗಳಲ್ಲಿ ಪುನಃ 8 ಜೋಡಿಗಳು ಒಂದಾದ ಐತಿಹಾಸಿಕ ಘಟನೆಗೆ ಅಲ್ಲಿದ್ದ ನ್ಯಾಯಾಧೀಶರು, ವಕೀಲರು,ಕಕ್ಷಿದಾರರು,ನ್ಯಾಯಾಲಯದ ಸಿಬ್ಬಂದಿ ಸಾಕ್ಷಿಯಾದರು.

ಪುನಃ ಒಂದಾದ ಸತಿ-ಪತಿಗಳನ್ನು ಕುರಿತು ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾರವರು ಹಲವು ಚಿಕ್ಕ-ಪುಟ್ಟಮನಸ್ತಾಪದಿಂದ ಸತಿ-ಪತಿಗಳು ವೈವಾಹಿಕ ಸಂಬಂಧಗಳನ್ನು ಮುರಿದುಕೊಳ್ಳಬಾರದು,ಇಬ್ಬರೂ ಪರಸ್ಪರ ಅನುಸರಿಸಿಕೊಂಡು ಜೀವನ ಸಾಗಿದಾಗ ಯಶಸ್ಸು ಗಳಿಸಲು ಸಾಧ್ಯ. ಮಕ್ಕಳ ಬಗ್ಗೆ ದಂಪತಿಗಳು ಯೋಚಿಸಬೇಕು, ಮಕ್ಕಳ ಮುಂದಿನ ಭವಿಷ್ಯದಿಂದ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡು ಪುನಃ ಒಂದಾಗಿದ್ದಕ್ಕೆ ಅವರಿಗೆ ಬುದ್ಧಿ ಹೇಳಿದ ಅವರು ಅವರ ತಂದೆ-ತಾಯಿಯರಿಗೆ ಸಹ ಧನ್ಯವಾದಗಳು. ಇವರ ಮನಸ್ಸು ಪರಿವರ್ತನೆ ಮಾಡಿ ಅವರನ್ನು ಒಂದು ಮಾಡಿದ ವಕೀಲರು,ನ್ಯಾಯಾಧೀಶರಿಗೆ ಧನ್ಯವಾದಗಳನ್ನು ತಿಳಿಸಿದರು.

ಜಿಲ್ಲಾ ಕೌಟುಂಬಿಕ ಜಿಲ್ಲಾ ನ್ಯಾಯಾಧೀಶರಾದ ಮುನಿರಾಜು ಮಾತನಾಡಿ, ನ್ಯಾಯಾಲಯಕ್ಕೆ ಬಂದಿದ್ದ ದಂಪತಿಗಳಿಗೆ ನಾವು ಮತ್ತು ಕಕ್ಷಿದಾರರ ವಕೀಲರು ಹಲವು ಬಾರಿ ಬುದ್ಧಿವಾದಗಳನ್ನು ಹೇಳಿದ್ದೆವು. ಅದರಂತೆ ವೈಯಕ್ತಿಕ ಮನಸ್ತಾಪಗಳನ್ನು ಮರೆತು ಇಂದು ಪುನಃ ಒಂದಾಗಿ ಜೊತೆಯಾಗಿ ಪರಸ್ಪರ ಹಾರ ಬದಲಾಯಿಸಿಕೊಂಡು ಸಿಹಿ ತಿಂದು ಗಂಡನ ಮನೆಗೆ ಮಕ್ಕಳೊಂದಿಗೆ ಹೋಗುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮಾತನಾಡಿ, ಇಂದು ನಡೆದ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ ಹಲವು ಕೇಸುಗಳು ರಾಜಿಯಾಗಿದ್ದು ಅವುಗಳಲ್ಲಿ ಸಿವಿಲ್‌, ಕ್ರಿಮಿನಲ್‌, ಮನಿ ರಿಕವರಿ, ಬ್ಯಾಂಕ್‌ ದಾವೆಗಳು ರಾಜಿ-ಪಂಚಾಯ್ತಿಯಿಂದ ಮುಕ್ತಾಯವಾಗಿದ್ದು ಎರಡೂ ಕಡೆಯ ಕಕ್ಷಿದಾರರಿಗೆ ಹಣ ಮತ್ತು ಸಮಯ ಉಳಿತಾಯವಾಗಿದೆ. 8 ದಂಪತಿಗಳು ಪುನಃ ಒಂದಾಗಿರುವುದು ನಮಗೆಲ್ಲರಿಗೂ ಸಂತೋಷವಾಗಿದೆ. ಸಣ್ಣಪುಟ್ಟವೈಮನಸ್ಸುಗಳನ್ನು ಮರೆತು ಜೊತೆಯಾಗಿ ಬಾಳಬೇಕು ಎಂದು ದಂಪತಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಸಿವಿಲ್‌ ಮಿಸ್‌ 1 ಪ್ರಕರಣದಲ್ಲಿ 1 ಕೋಟಿ 55 ಲಕ್ಷಕ್ಕೆ ಇತ್ಯರ್ಥವಾಗಿರುವುದು ಸಹ ಇತಿಹಾಸ ಸೃಷ್ಟಿಸಿದೆ. ಅದರಂತೆ ಎಲ್ಲಾ ನ್ಯಾಯಾಲಯಗಳಲ್ಲಿ ಸಿವಿಲ್‌, ಕ್ರಿಮಿನಲ್‌ ಸೇರಿದಂತೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ನ್ಯಾಯಾಲಯದ ಹೊರಗೆ ಕಕ್ಷಿದಾರರು ಹೋಗುತ್ತಿರುವುದು ಇಂದು ಕಂಡು ಬಂದಿತು.

PREV
Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!