ರೆಡ್ ಝೋನ್‌ನಲ್ಲಿ ತಪಾಸಣೆ ಮಾಡಿದಾಗ ವೃದ್ಧನಲ್ಲಿ ಕೆಎಫ್‌ಡಿ ಪತ್ತೆ, ಮಣಿಪಾಲ್‌ನಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಕೆಎಫ್‌ಡಿ ಜೊತೆ ಬೇರೆ ಬೇರೆ ಕಾಯಿಲೆಯಲ್ಲಿ ಬಳಲುತ್ತಿದ್ದ ವೃದ್ಧ ಸಾವು
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಫೆ.03): ಕಾಫಿನಾಡಲ್ಲಿ ಕೊಂಚ ರಿಲೀಫ್ ಎನಿಸಿದ್ದ ಮಹಾಮಾರಿ ಮಂಗನ ಕಾಯಿಲೆ ಭೀತಿ ಮತ್ತೆ ಆವರಿಸಿದೆ. ಸರ್ಕಾರ ವ್ಯಾಕ್ಸಿನೇಷನ್ ನಿಲ್ಲಿಸ್ತು. ಹಾಗಾದ್ರೆ, ಕಡಿಮೆಯಾಯ್ತು ಅನ್ನೋವಷ್ಟರಲ್ಲಿ ಅದೇ ಮಹಾಮಾರಿಗೆ ಮೂವರಲ್ಲಿ ಕಾಣಿಸಿಕೊಂಡಿದೆ. ಮೂವರಲ್ಲಿ ಓರ್ವ ಸಾವನ್ನಪ್ಪಿದ್ರೆ ಮತ್ತಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಮಲೆನಾಡಿಗರ ಆತಂಕವನ್ನ ಇಮ್ಮಡಿಗೊಳಿಸಿದೆ. ಈಗ್ಲೇ ಮೂರು ಪ್ರಕರಣವಾದ್ರೆ ಇನ್ನು ಮಳೆಗಾಲದ ಹೊತ್ತಿಗೆ ಮತ್ತಿನ್ನೆಷ್ಟು ಕೆಎಫ್‌ಡಿ ಪ್ರಕರಣಗಳು ಅವಾಂತರ ಎಬ್ಬಿಸುತ್ತೋ ಅನ್ನೋ ಭಯ ಅವರಿಸಿದೆ.
undefined
ವರ್ಷದ ಮೊದಲ ಬಲಿ :
ಮಂಗನ ಕಾಯಿಲೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದು, ಕೆಎಫ್ಡಿಗೆ ವರ್ಷದ ಮೊದಲ ಬಲಿಯಾದಂತಾಗಿದೆ.ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದ 79 ವರ್ಷದ ವ್ಯಕ್ತಿಯಲ್ಲಿ ಮಂಗನಕಾಯಿಲೆ ಕಾಣಿಸಿ ಕೊಂಡಿತ್ತು. ಮೂರು ದಿನಗಳ ಕಾಲ ಕೊಪ್ಪ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಅಣ್ಣಾಮಲೈ ತಮಿಳುನಾಡಿನ ಮುಖ್ಯಮಂತ್ರಿಯಾಗ್ತಾರೆ: ವಿನಯ್ ಗುರೂಜಿ
ಜಿಲ್ಲೆಯಲ್ಲಿ ಮೂರು ಪ್ರಕರಣ :
ಶೃಂಗೇರಿ ತಾಲೂಕಿನಲ್ಲಿ ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿರುವುದು ಇದೇ ಮೊದಲಗಿದ್ದು, ಈ ವರ್ಷ ಜಿಲ್ಲೆಯಲ್ಲಿ ಇದುವರೆಗೂ ಮೂರು ಪ್ರಕರಣಗಳು ಕಾಣಿಸಿ ಕೊಂಡಿದೆ.ಕೊಪ್ಪ ತಾಲೂಕಿನ ಜೋಗಿಸರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಅಲ್ಲಿಸುತ್ತಿರುವ 35ವರ್ಷದ ಮಹಿಳೆಯಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿದ್ದು, ಮಹಿಳೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೇ ಕೊಪ್ಪ ತಾಲೂಕಿನ 65 ವರ್ಷದ ವ್ಯಕ್ತಿಯಲ್ಲಿ ಕೆಎಫ್ಡಿ ಕಾಣಿಸಿಕೊಂಡಿದ್ದು ಇವರು ಗುಣಮುಖರಾಗಿದ್ದಾರೆ.
ದೇಶದಲ್ಲಿ ಇನ್ನೆರಡು ವರ್ಷದಲ್ಲಿ ನಿರುದ್ಯೋಗ ಹೆಚ್ಚಳ: ವೀರಪ್ಪ ಮೊಯ್ಲಿ
ನಿಯಂತ್ರಣಕ್ಕೆ ಕ್ರಮ
ಮಂಗನ ಕಾಯಿಲೆ ನಿಯಮತ್ರಣಕ್ಕೆ ಇಲಾಖೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಪಶುವೈದ್ಯ ಇಲಾಖೆಯ ಸಹಕಾರವನ್ನೂ ಪಡೆಯಲಾಗುತ್ತಿದೆ. ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶ್ವತ್ಥಬಾಬು ತಿಳಿಸಿದ್ದಾರೆ.ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಮುಂಜಾಗ್ರತೆಯಾಗಿ ಕೆಎಫ್ಡಿ ಸೋಂಕಿತರಿಗೆಂದೇ 5 ಬೆಡ್ನ ಐಸಿಯು ಮಾದರಿಯ ಒಂದು ವಾರ್ಡ್ನನ್ನು ಮೀಸಲಿರಿಸಲಾಗಿದೆ. ಆಶಾ ಕಾರ್ಯಕರ್ತೆಯರು ಎಚ್ಐಓಗಳು ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಕಾಡು, ತೋಟಗಳಿಗೆ ಹೋಗುವವರಿಗೆ ಮೈ, ಕೈಗೆ ಹಚ್ಚಿಕೊಳ್ಳಲು ಸೋಂಕು ನಿರೋಧಕ ತೈಲವನ್ನು ನೀಡುತ್ತಿದ್ದೇವೆ. ಸೋಂಕಿಗೊಳಗಾದ ಇಬ್ಬರು ಈಗ ಗುಣಮುಖರಾಗಿದ್ದಾರೆ. ಅವರಲ್ಲಿ ಯಾವುದೇ ರೀತಿ ಪ್ರಯಾಣದ ಹಿನ್ನೆಲೆ ಕಂಡುಬಂದಿಲ್ಲ ಎಂದರು. ಕಾಫಿನಾಡ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನ ಜನರಲ್ಲಿ ಭಯವಂತು ಇದೇ ಇದೆ. ಆದ್ರೆ, ಸಾವನ್ನಪ್ಪಿರೋ ವೃದ್ಧನಿಗೆ ಕೆ.ಎಫ್.ಡಿ. ಜೊತೆ ಬೇರೆ ಖಾಯಿಲೆಗಳಿದ್ವು ಅನ್ನೋದೊಂದೆ ಸಮಾಧಾನದ ವಿಚಾರವಾಗಿದೆ. 2 ವರ್ಷದ ಹಿಂದೆ ಮಂಗನಕಾಯಿಲೆ ಭೀತಿ ಕಡಿಮೆಯಾಗಿರೋದ್ರಿಂದ ಸರ್ಕಾರ ವ್ಯಾಕ್ಸಿನೇಷನ್ ಕೂಡ ನಿಲ್ಲಿಸಿದೆ.
ಮಂಗನ ಕಾಯಿಲೆ ಭೀತಿ ಫೆಬ್ರವರಿ ಪ್ರಾರಂಭದಲ್ಲೇ ಅವರಿಸಿದೆ. ಉಳಿದಿರೋ 2 ತಿಂಗಳ ರಣ ಬೇಸಿಗೆ, ಆಮೇಲೆ ಮಳೆಗಾಲ. ಮಳೆಗಾಲದ ಹೊತ್ತಿಗೆ ಇನ್ನೇನಾಗುತ್ತೋ ಮತ್ತೆಷ್ಟು ಪ್ರಕರಣಗಳು ಬರುತ್ತೋ ಗೊತ್ತಿಲ್ಲ. ಆರೋಗ್ಯ ಇಲಾಖೆ ಅರಣ್ಯ ಇಲಾಖೆ, ಪಶು ವೈದ್ಯರ ಸಹಾಯದೊಂದಿಗೆ ಮಂಗನ ಕಾಯಿಲೆಯನ್ನ ತಡೆಯೋಕೆ , ಫೇಸ್ ಮಾಡೋಕೆ ಸನ್ನದ್ಧವಾಗಿದೆ.