79 ಕಾರ್ಮಿಕರಿಗೆ ಕೊರೋನಾ: ಮೆಟ್ರೋ, ಬಿಬಿಎಂಪಿಗೆ ಚಾಟಿ, ಹೈಕೋರ್ಟ್ ಗರಂ

By Kannadaprabha News  |  First Published Jul 21, 2020, 9:34 AM IST

ಮೆಟ್ರೋ ರೈಲು ಯೋಜನೆ ಕಾಮಗಾರಿ ನಡೆಯುತ್ತಿರುವ ನಗರದ ಕಣ್ಣೂರು ಕ್ಯಾಂಪ್‌ನಲ್ಲಿ 79 ಮಂದಿ ಕಾರ್ಮಿಕರಿಗೆ ಕೊರೋನಾ ಸೋಂಕು ತಗುಲಿರುವುದಕ್ಕೆ ಬಿಎಂಆರ್‌ಸಿಎಲ್‌ಗೆ ಚಾಟಿ ಬೀಸಿರುವ ಹೈಕೋರ್ಟ್‌,ಕೂಡಲೇ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮೆಟ್ರೋ ಯೋಜನೆಗೆ ತಡೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.


ಬೆಂಗಳೂರು(ಜು.21): ಮೆಟ್ರೋ ರೈಲು ಯೋಜನೆ ಕಾಮಗಾರಿ ನಡೆಯುತ್ತಿರುವ ನಗರದ ಕಣ್ಣೂರು ಕ್ಯಾಂಪ್‌ನಲ್ಲಿ 79 ಮಂದಿ ಕಾರ್ಮಿಕರಿಗೆ ಕೊರೋನಾ ಸೋಂಕು ತಗುಲಿರುವುದಕ್ಕೆ ಬಿಎಂಆರ್‌ಸಿಎಲ್‌ಗೆ ಚಾಟಿ ಬೀಸಿರುವ ಹೈಕೋರ್ಟ್‌,ಕೂಡಲೇ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮೆಟ್ರೋ ಯೋಜನೆಗೆ ತಡೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿಸಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಮೆಟ್ರೋ ಕಾರ್ಮಿಕರ ಕ್ಯಾಂಪ್‌ಗಳು ಕೊರೋನಾ ಹರಡುವ ಕೇಂದ್ರಗಳಾಗದಂತೆ ಎಚ್ಚರಿಕೆ ವಹಿಸುವಂತೆ ಸರ್ಕಾರ ಮತ್ತು ಬಿಎಂಆರ್‌ ಸಿಎಲ್‌ಗೆ ತಾಕೀತು ಮಾಡಿತು.

Tap to resize

Latest Videos

ಪಾಲಿಕೆ ಕೊರೋನಾ ಜಾಗೃತಿಗೆ ನಟ ರಮೇಶ್‌ ರಾಯಭಾರಿ

ವಿಚಾರಣೆ ವೇಳೆ ಬಿಎಂಆರ್‌ಸಿಎಲ್‌ ಪರ ವಕೀಲರು, ಕಣ್ಣೂರು ಕ್ಯಾಂಪ್‌ನಲ್ಲಿ 211 ಮಂದಿ ಕಾರ್ಮಿಕರಿದ್ದಾರೆ. ಅದರಲ್ಲಿ 79 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಸೋಂಕಿತರನ್ನು ಆಸ್ಪತ್ರೆ-ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ದಾಖಲಿಸಿದ್ದು, ಉಳಿದವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ತಿಳಿಸಿದರು.

ಅದಕ್ಕೆ ಗರಂ ಆದ ನ್ಯಾಯಪೀಠ, 211 ಮಂದಿಯಲ್ಲಿ 79 ಮಂದಿಯಲ್ಲಿ ಕೊರೋನಾ ಸೋಂಕು ತಗುಲಿದೆ ಎಂದರೆ ಸಾಮಾನ್ಯ ವಿಚಾರವಲ್ಲ. ಇದು ಬಿಎಂಆರ್‌ಸಿಎಲ್‌ ನಿರ್ವಹಣೆ ಎಷ್ಟರ ಮಟ್ಟಿಗೆ ಉತ್ತಮವಾಗಿದೆ ಎಂಬುದನ್ನು ತಿಳಿಸುತ್ತದೆ ಎಂದು ತೀಕ್ಷ$್ಣಣವಾಗಿ ನುಡಿಯಿತು.

ಕೋವಿಡ್‌ಗೆ ಮೃತ ಕ್ರೈಸ್ತರಿಗೂ ಈಗ ಗೌರವದ ಅಂತ್ಯಸಂಸ್ಕಾರ!

ನಂತರ ನಗರದಲ್ಲಿ ಮತ್ತು ಕಣ್ಣೂರಿನಲ್ಲಿ ಮೆಟ್ರೋ ಕಾರ್ಮಿಕರ ಎಷ್ಟುಕ್ಯಾಂಪ್‌ಗಳಿವೆ? ಸೋಂಕಿತರನ್ನು ಪ್ರತ್ಯೇಕ ಕ್ಯಾಂಪ್‌ನಲ್ಲಿ ಇರಿಸಲಾಗಿದೆಯೇ, ಕಾರ್ಮಿಕರ ಸುರಕ್ಷತೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ, ಸೋಂಕು ತಗುಲಿರುವ ಮತ್ತು ಕ್ವಾರಂಟೈನ್‌ಗೆ ಒಳಗಾಗಿರುವ ಕಾರ್ಮಿಕರಿಗೆ ವೇತನ ಪಾವತಿಸಲಾಗುತ್ತಿದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು.

ಬಿಎಂಆರ್‌ಸಿಎಲ್‌ ಪರ ವಕೀಲರು, ಈ ಎಲ್ಲ ವಿಷಯಗಳನ್ನು ತಿಳಿದು ಮಾಹಿತಿ ನೀಡುವುದಾಗಿ ತಿಳಿಸಿದರು. ಅದರಿಂದ ಮತ್ತಷ್ಟುಕೋಪಗೊಂಡ ನ್ಯಾಯಪೀಠ, ತಾನು ‘ಎಲ್ಲರಂತೆ ಅಲ್ಲ’ ಎಂಬ ಭ್ರಮೆಯನ್ನು ಬಿಎಂಆರ್‌ಸಿಎಲ್‌ ಬಿಡಬೇಕು. ಸರ್ಕಾರದ ಅಂಗ ಸಂಸ್ಥೆ ಎಂಬುದನ್ನು ಮರೆಯಬಾರದು. ಮೆಟ್ರೋ ಕೊರೋನಾ ಹರಡುವ ಕೇಂದ್ರವಾಗಬಾರದು. ಸಂಸ್ಥೆಯ ಮೇಲೆ ನ್ಯಾಯಾಲಯ ಇನ್ನೂ ನಂಬಿಕೆ ಇಟ್ಟಿದೆ. ಕೂಡಲೇ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕೈಗೊಳ್ಳದಿದ್ದರೆ ಮೆಟ್ರೋ ಯೋಜನೆಗೆ ತಡೆ ನೀಡಬೇಕಾಗುತ್ತದೆ ಎಂದು ಮೌಖಿಕವಾಗಿ ಎಚ್ಚರಿಸಿತು.

ಮತ್ತೆ ಮೇಷ್ಟ್ರಾದ ವೈಎಸ್‌ವಿ: ವರ್ಷ ಪೂರ್ತಿ ‘ದತ್ತ’ ಆನ್‌ಲೈನ್‌ ಗಣಿತ ಪಾಠ!

ನಂತರ ಕಾರ್ಮಿಕರ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಬಿಎಂಆರ್‌ ಸಿಎಲ್‌ಗೆ ಸೂಚಿಸಿ ವಿಚಾರಣೆಯನ್ನು ಜು.23ಕ್ಕೆ ಮುಂದೂಡಿತು.

click me!