ಚಿಕ್ಕಮಗಳೂರು ಟ್ರಾಫಿಕ್ ಪೊಲೀಸ್ ಠಾಣೆ, ಡಿವೈಎಸ್‌ಪಿ ಕಚೇರಿ ಹಾಗೂ ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಇನ್ನೊಂದೆಡೆ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿನ ಏರಿಕೆ ಜನರಲ್ಲಿ ಭೀತಿ ಹುಟ್ಟಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಜು.21): ಕೊರೋನಾ ಸೋಂಕಿತರ ಸಂಖ್ಯೆ ವೇಗ ಪಡೆದುಕೊಂಡಿದ್ದು, ಜಿಲ್ಲೆಯ 3 ಪೊಲೀಸ್ ಠಾಣೆಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರ ಕಚೇರಿಗೆ ಸೋಮವಾರ ಸೀಲ್‌ಡೌನ್ ಮಾಡಲಾಗಿದೆ.
ಚಿಕ್ಕಮಗಳೂರು ಟ್ರಾಫಿಕ್ ಪೊಲೀಸ್ ಠಾಣೆ, ಡಿವೈಎಸ್‌ಪಿ ಕಚೇರಿ ಹಾಗೂ ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಇನ್ನೊಂದೆಡೆ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿನ ಏರಿಕೆ ಜನರಲ್ಲಿ ಭೀತಿ ಹುಟ್ಟಿಸಿದೆ.
ಮೇ 18ರವರೆಗೆ ಹಸಿರು ವಲಯದಲ್ಲಿದ್ದ ಕಾಫಿನಾಡಿನಲ್ಲಿ ಪ್ರಥಮ ಬಾರಿಗೆ ಮೇ 19ರಂದು ಎರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಅಲ್ಲಿಂದ ಈವರೆಗೆ ಸೋಂಕಿತರ ಸಂಖ್ಯೆ 334ರ ಗಡಿ ಮುಟ್ಟಿದೆ. ಸೋಮವಾರ ಒಂದೇ ದಿನ ಜಿಲ್ಲೆಯಲ್ಲಿ 43 ಪ್ರಕರಣಗಳು ಪತ್ತೆಯಾಗಿದ್ದು, ಇದೇ ಪ್ರಥಮ ಬಾರಿಗೆ ಇಷ್ಟು ಪ್ರಮಾಣದಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ಸೋಮವಾರ ಪತ್ತೆ ಆಗಿರುವ 43 ಪ್ರಕರಣಗಳ ಪೈಕಿ ಚಿಕ್ಕಮಗಳೂರು ತಾಲೂಕಿನಲ್ಲಿ 12, ತರೀಕೆರೆ 5, ಕಡೂರು 4, ಎನ್.ಆರ್.ಪುರ 2, ಕೊಪ್ಪ 17, ಶೃಂಗೇರಿ ತಾಲೂಕಿನಲ್ಲಿ 3 ಕೋವಿಡ್-19 ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾಗಿರುವ 334 ಪ್ರಕರಣಗಳ ಪೈಕಿ ಈವರೆಗೆ 136 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸೋಮವಾರ ಒಂದೇ ದಿನ 18 ಮಂದಿ ಡಿಸ್ಚಾಜ್‌ರ್ ಆಗಿದ್ದಾರೆ. ಸದ್ಯ 171 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿದ್ದು, ಎಲ್ಲರೂ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕ್ಕಮಗಳೂರು ನಗರದ ಗಾಂಧಿನಗರ, ಜಯನಗರ, ರಾಮನಹಳ್ಳಿಯ ಪೊಲೀಸ್ ಕ್ವಾಟ್ರರ್ಸ್, ಬೈಪಾಸ್ ರಸ್ತೆಯಲ್ಲಿ ಕೋರೋನಾ ಸೋಂಕು ಕಾಣಿಸಿಕೊಂಡಿದೆ.
ವಿದ್ಯಾರ್ಥಿನಿಯರಿಗೆ ಸೋಂಕು
ಕೊಪ್ಪ: ತಾಲೂಕಿನ ಕೊರಡಿಹಿತ್ಲು ಖಾಸಗಿ ಆಸ್ಪತ್ರೆಯ 27 ವರ್ಷದ ವೈದ್ಯರು ಮತ್ತು ಕೊಪ್ಪ ಆಯುರ್ವೇದಿಕ್ ಕಾಲೇಜಿನ 23 ವರ್ಷ ವಯಸ್ಸಿನ ಮೂವರು ವೈದ್ಯಕೀಯ ವಿದ್ಯಾರ್ಥಿನಿಯರು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ರಾರಯಪಿಡ್ ಟೆಸ್ಟ್ ಮಾಡಿಸಿಕೊಂಡಾಗ ಪಾಸಿಟಿವ್ ಅಂಶ ಇರುವುದು ಕಂಡುಬಂದಿದೆ.
ಬೆಂಗಳೂರಲ್ಲಿ ಸೋಂಕಿನ ನಿಯಂತ್ರಣಕ್ಕೆ 2 ಸಾವಿರ ಗೃಹ ರಕ್ಷಕ ಸಿಬ್ಬಂದಿಗೆ BBMP ಮನವಿ
ಕೆಸವೆ ರಸ್ತೆಯ 46 ವರ್ಷದ ಮಹಿಳೆ, 19 ವರ್ಷದ ಯುವಕ, ಸುಭಾಷ್ ರಸ್ತೆಯ 46 ವರ್ಷದ ಮಹಿಳೆ, 22 ವರ್ಷದ ಯುವಕ, 13 ವರ್ಷದ ಬಾಲಕಿ, 10 ವರ್ಷದ ಹುಡುಗ, 43 ವರ್ಷದ ಪುರುಷ, ಎಸ್.ವಿ.ಟಿ. ರಸ್ತೆಯ 52 ವರ್ಷದ ಪುರುಷ, ಅಯ್ಯಂಗಾರ್ ಲೇಔಟ್‌ನ 42 ವರ್ಷದ ಪುರುಷ, ತ್ಯಾಗರಾಜ ರಸ್ತೆಯ 34 ವರ್ಷದ ಪುರುಷ, ಗುಣವಂತೆ ಅಚ್ಚರಡಿಯ 32 ವರ್ಷದ ಪುರುಷ, ಗುಣವಂತೆಯ 29 ವರ್ಷದ ಮಹಿಳೆ, ತಾಲೂಕಿನ ಬೆಳಗೋಡು ಎಸ್ಟೇಟ್‌ನ 26 ವರ್ಷದ ಪುರುಷ ಸೇರಿದಂತೆ 13 ಜನರಲ್ಲಿ ಪಾಸಿಟಿವ್ ಅಂಶ ಕಂಡುಬಂದಿದೆ.
ಕೆಸವೆ ರಸ್ತೆ ಮತ್ತು ಸುಭಾಷ್ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ಕೋವಿಡ್-19 ಪ್ರಕರಣಗಳು ಪತ್ತೆಯಾಗಿ ಚಿಕಿತ್ಸೆ ಪಡೆಯುತ್ತಿರುವವರ ಸಂಬಂಧಿಗಳು ಮತ್ತು ಪ್ರಥಮ ಸಂಪರ್ಕದಲ್ಲಿದ್ದ 8 ಮಂದಿ ಜು.11, 12ರಂದು ಆರ್.ಟಿ.ಪಿ.ಸಿ.ಆರ್ ಮುಖೇನ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿದ ವರದಿ ಸೋಮವಾರ ಬಂದಿದ್ದು ಗಂಟಲ ದ್ರವ ಪರೀಕ್ಷೆಯ ನಂತರ ಇವರೆಲ್ಲರೂ ಹೋಂ ಕ್ವಾರಂಟೈನ್‌ನಲ್ಲಿದ್ದವರಾಗಿದ್ದಾರೆ.
4 ಕೊರೋನಾ ಪಾಸಿಟಿವ್ ಪ್ರಕರಣ
ಕಡೂರು: ಬೀರೂರು ಹಾಗೂ ಕಡೂರು ಪಟ್ಟಣಗಳು ಸೇರಿದಂತೆ ಸೋಮವಾರ 4 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತು ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಕಡೂರು ಪಟ್ಟಣದ ಕೆ.ವಿ. ಕಾಲೋನಿಯಲ್ಲಿ 11 ದಿನಗಳ ಹಿಂದೆ ಬೆಂಗಳೂರಿನಿಂದ ವಾಪಸಾಗಿದ್ದ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಹಿನ್ನಲೆ ಅವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಿ, ಕೆ.ವಿ. ಕಾಲೋನಿಯ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿತ್ತು.
ಬಳ್ಳಾರಿ ಕ್ಯಾಂಪಿನಲ್ಲಿರುವ ಇಂದಿರಾನಗರ ನಿವಾಸಿ ಆಗಿರುವ 35 ವರ್ಷದ ಮಹಿಳೆಯೊಬ್ಬರಿಗೆ ಮತ್ತು ಹಳೇ ಅಜ್ಜಂಪುರ ರಸ್ತೆಯ ಮರಾಠ ಕಾಲೋನಿಯ 25 ವರ್ಷದ ಯುವಕನಿಗೆ ಪಾಸಿಟಿವ್ ಕಂಡುಬಂದಿದೆ. ಸದರಿ ನಿವಾಸಿಗಳ ಪ್ರದೇಶಗಳನ್ನು ಸೀಲ್‌ಡೌನ್ ಮಾಡಿ ಅಧಿಕಾರಿಗಳೊಂದಿಗೆ ತೆರಳಿ ಜನರಿಗೆ ಮುನ್ನೆಚ್ಚರಿಕೆ ನೀಡಿರುವುದಾಗಿ ರವಿಕುಮಾರ್ ತಿಳಿಸಿದರು.