ಗ್ರಾಪಂ ಕಸ ಗೂಡಿಸಿದ್ದ ಮಹಿಳೆ ಈಗ ಅಧ್ಯಕ್ಷೆ..!

By Kannadaprabha NewsFirst Published Feb 5, 2021, 2:12 PM IST
Highlights

ಕಸಗೂಡಿಸುವ ಕಾಯಕ ಮಾಡುತ್ತಿದ್ದ ವಯೋವೃದ್ಧೆ ಗ್ರಾಮ ಪಂಚಾಯತ್‌ ಅಧ್ಯಕ್ಷೆಯಾಗಿ ಆಯ್ಕೆ| ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮ ಪಂಚಾಯತ್‌| ಸುಮಾರು 35 ವರ್ಷ ಈ ಕಾಯಕ ಮಾಡಿ ತಮ್ಮ ಕುಟುಂಬ ನಿರ್ವಹಣೆ ಮಾಡಿದ್ದ ವೃದ್ಧೆ| 

ಬಸವನಬಾಗೇವಾಡಿ(ಫೆ.05):  ಹಿಂದೆ ಗ್ರಾಮ ಪಂಚಾಯಿತಿಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಯೊಬ್ಬರು ಅದೇ ಗ್ರಾಮ ಪಂಚಾಯಿತಿಗೆ ಇದೀಗ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನಲ್ಲಿ ನಡೆದಿದೆ. 

ಮಸಬಿನಾಳ ಗ್ರಾಮ ಪಂಚಾಯಿತಿಯಲ್ಲಿ ಹಿಂದೆ ಕಸಗೂಡಿಸುವ ಕಾಯಕ ಮಾಡುತ್ತಿದ್ದ ವಯೋವೃದ್ಧೆ ಪಾರವ್ವ ಶಂಕ್ರಪ್ಪ ಮೂರಮಾನ ಅವರು ಅಧ್ಯಕ್ಷರಾಗಿ ಆಯ್ಕೆಯಾದವರು. ಗುರುವಾರ ನಡೆದ ಗ್ರಾಪಂ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ 15 ಮತ ಪಡೆದು ಆಯ್ಕೆಯಾಗಿದ್ದಾರೆ.

ಪಂಚಾಯತ್‌ನಲ್ಲಿ ಕಸ ಗುಡಿಸುತ್ತಿದ್ದಾಕೆ ಈಗ ಅದೇ ಕಚೇರಿಯ ಅಧ್ಯಕ್ಷೆ

ಪಾರವ್ವ ಈ ಹಿಂದೆ ಇದೇ ಗ್ರಾಂಪನಲ್ಲಿ ದಿನಗೂಲಿಯಂತೆ ಕಸಗೂಡಿಸುವ ಕಾಯಕ ಮಾಡುತ್ತಿದ್ದರು. ಸುಮಾರು 35 ವರ್ಷ ಈ ಕಾಯಕ ಮಾಡಿ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಈಗ ತಮ್ಮ 75 ವಯಸ್ಸಿನಲ್ಲಿ ಅದೇ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಅಧ್ಯಕ್ಷರಾಗಿದ್ದಾರೆ.
 

click me!