Samskaara Bhaarathi: ಸಂಸ್ಕಾರ ಭಾರತಿಯ ಅಮೃತ ಕಳಶ India@75: 75 ಕಲಾವಿದರು 75 ಕಲಾಕೃತಿ

By Suvarna NewsFirst Published Nov 22, 2021, 8:29 PM IST
Highlights

* ಇಂಥ ಪ್ರದರ್ಶನ ಬೆಂಗಳೂರಿನಲ್ಲಿ ಇದೇ ಪ್ರಥಮ
* ಭಾರತದ  75ನೇ ಸ್ವಾತಂತ್ರ್ಯೋತ್ಸವದ ಮಹೋನ್ನತ ಸ್ಮರಣೆ
* ಸಂಸ್ಕಾರ ಭಾರತೀಯಿಂದ 5 ದಿನಗಳ ಅಮೃತ ದೃಶ್ಯಕಲಾ ಉತ್ಸವ
* ಸಚಿವ ಸುನೀಲ್ ಕುಮಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ ಭಾಗಿ

ಬೆಂಗಳೂರು(ನ. 22) ಒಂದು ವಿಶಿಷ್ಟ ಕಾರ್ಯಕ್ರಮಕ್ಕೆ ಸಮಸ್ತರೂ ಸಾಕ್ಷಿಯಾಗಬಹುದು.  ಸಂಸ್ಕಾರ ಭಾರತೀ (Samskaara Bhaarathi) (ಬೆಂಗಳೂರು ಮಹಾನಗರ ) ಆಯೋಜಿಸಿರುವ ಕಾರ್ಯಕ್ರಮ ದೇಶಪ್ರೇಮ ಸಾರುತ್ತಿದೆ.  ಪ್ರತಿಭಾವಂತ ಕಲಾವಿದರಿಂದ ಅರಳಿದ ಕಲಾಕೃತಿಗಳ ಸ್ವಾದ ಆಸ್ವಾದಿಸಬಹುದು. 

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ತುಂಬಿದ (75th Independence Day) ಸಂದರ್ಭದಲ್ಲಿ ಆ ಮಹನೀಯರನ್ನೆಲ್ಲಾ ಸ್ಮರಣೆ ಮಾಡಿಕೊಳ್ಳಲೇಬೇಕು ತಾನೆ.  1857 ರಲ್ಲಿ ಆರಂಭವಾದ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಇತಿಹಾಸದ ಪುಟಗಳು ಒಂದೊಂದೇ ಹೋರಾಟದ ಕತೆಯನ್ನು ಹೇಳುತ್ತಾ ಹೋಗುತ್ತವೆ. ಅದೆಷ್ಟೋ ಮಹಾನ್  ಚೇತನಗಳು ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಒಂದೊಂದು ಹೋರಾಟವೂ ಒಂದೊಂದು ಪ್ರೇರಣೆ.

ಬ್ರಿಟಿಷ್ ಆಳ್ವಿಕೆ ಕೊನೆಯಾಗಿ ನಮ್ಮದೆ ಪ್ರಜಾತಂತ್ರ ಮಾದರಿ ಸರ್ಕಾರ  ದೇಶವನ್ನು ಕಾಪಾಡಿಕೊಂಡು ಬಂದಿದೆ.  ವಿಶ್ವದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರ ಎನ್ನುವ ಹೆಗ್ಗಳಿಕೆಯೂ ನಮ್ಮದಲ್ಲವೆ.  ದೇಶಕ್ಕಾಗಿ ದುಡಿದವರ ಸ್ಮರಣೆಯನ್ನು ಮತ್ತೊಮ್ಮೆ ಮಾಡುವಂತೆ, ಅವರನ್ನು ನೆನೆಯುವಂತೆ ಮಾಡುವ ಕಾರ್ಯಕ್ರಮ ಇದು. ಹೌದು.  (Amrut Mahotsav) 75 ಕಲಾವಿದರು, 75 ಕಲಾಕೃತಿ.

ಕಣ್ಮನ ಸೆಳೆದ ಚಿತ್ರಸಂತೆಯಲ್ಲೊಂದು ಸುತ್ತು

ಅಮೃತ ದೃಶ್ಯಕಲಾ ಉತ್ಸವವನ್ನು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ (Sunil Kumar) ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.  ಅಧ್ಯಕ್ಷತೆಯನ್ನು ಸಂಸ್ಕಾರ ಭಾರತೀ ದಕ್ಷಿಣ ಪ್ರಾಂತದ ಅಧ್ಯಕ್ಷ ಸುಚೇಂದ್ರ ಪ್ರಸಾದ್ ವಹಿಸಿಕೊಳ್ಳಲಿದ್ದಾರೆ.  ಮುಖ್ಯ ಅತಿಥಿಗಳಾಗಿ  ಚಿಂತಕ ಚಕ್ರವರ್ತಿ ಸೂಲಿಬೆಲೆ(Chakravarti Sulibele), ಚಿತ್ರಕಾರ  ಬಿ.ಕೆ.ಎಸ್ ವರ್ಮಾ(BKS Varma),  ಸಂಸ್ಕಾರ ಭಾರತೀ ಅಖಿಲ ಭಾರತ ಚಿತ್ರಕಲಾ ಸಂಯೋಜಕ  ಚಿ.ಸು. ಕೃಷ್ಣ ಶೆಟ್ಟಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ, ಚಿತ್ರಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರೊ.ಕೆಎಸ್. ಅಪ್ಪಾಜಯ್ಯ ಇರುತ್ತಾರೆ.

ಮಂಗಳವಾರ ನವೆಂಬರ್ 23  ರಂದು ಸಂಜೆ ಶೇಷಾದ್ರಿಪುರಂನ ಸ್ವಸ್ತಿಕ್ ವೃತ್ತದಿಂದ ಚಿತ್ರಕಲಾ ಪರಿಷತ್ (Karnataka Chitrakala Parishath)ವರೆಗೆ ಜಾನಪದ ಕಲಾತಂಡಗಳೊಂದಿಗೆ ಶೋಭಾ ಯಾತ್ರೆ ನಡೆಯಲಿದ್ದು ಮಹೋತ್ಸವಕ್ಕೆ ಅದುವೆ ಚಾಲನೆ.  ಚಿತ್ರಕಲಾ ಪ್ರದರ್ಶನ ನ.  23 ರಿಂದ 27ರ ವರೆಗೆ ಐದು ದಿನಗಳ ಕಾಲ ಇರುತ್ತದೆ.

ಸಂಸ್ಕಾರ ಭಾರತೀ :   ಸಂಸ್ಕಾರ ಭಾರತಿ ಭಾರತೀಯ ಕಲೆ ಮತ್ತು ಸಂಸ್ಕೃತಿಯ ಪ್ರಚಾರಕ್ಕಾಗಿ ಇರುವ ಅಖಿಲ ಭಾರತ ಸಂಸ್ಥೆಯಾಗಿದೆ. ಬೆಂಗಳೂರು ದಕ್ಷಿಣ  ಪ್ರಾಂತವೂ ಭಾರತೀಯ  ಸಂಸ್ಕೃತಿಯನ್ನು ಸಮಾಜದ ಎಲ್ಲಾ ವರ್ಗಗಳಿಗೂ ಪರಿಚಯ ಮಾಡುವ ಗುರಿ  ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ವೇದಿಕೆ ನಿರ್ಮಿಸಿಕೊಡುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿಯೂ ಪೇಜ್ ಹೊಂದಿರುವ ಸಂಸ್ಕಾರ ಭಾರತೀ ಸದ್ಯ ಕುಮಾರವ್ಯಾಸ ಕಾವ್ಯಾನುಸಂಧಾನ ಪ್ರಸ್ತುತ ಮಾಡಿಕೊಂಡು ಬಂದಿದೆ.   ವಿದ್ವಾನ್ ಜಗದೀಶ ಶರ್ಮಾ ಸಂಪ (Jagadisha Sharma Sampa) ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.

ಯುವ  ಬ್ರಿಗೇಡ್ (Yuva Brigade) ಮೂಲಕ ಚಿಂತಕ ಚಕ್ರವರ್ತಿ ಸೂಲಿಬೆಲೆ ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಕಲ್ಯಾಣಿ ಮತ್ತು ನದಿಗಳನ್ನು ತಾವೇ ಮುಂದೆ ನಿಂತು ಸ್ವಚ್ಛ ಮಾಡಿದ್ದಾರೆ. ಶಿಕ್ಷಣ  ಕ್ಷೇತ್ರದಲ್ಲಿಯೂ ಮಾದರಿ ಹೆಜ್ಜೆಗಳನ್ನು ಇಟ್ಟಿದ್ದು ತರಬೇತಿ ನೀಡುವ ಕಾರ್ಯ ಯುವ ಬ್ರಿಗೇಡ್  ನಿಂದ ನಡೆಯುತ್ತಿದೆ.

ಚಿತ್ರಕಲಾ ಪರಿಷತ್ ಸಹ  ಚಿತ್ರಕಲಾ ಪ್ರದರ್ಶನ ಸೇರಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಅನೂಚಾನವಾಗಿ ಮಾಡಿಕೊಂಡೆ ಬಂದಿದೆ. ವರ್ಷದಿಂದ ವರ್ಷಕ್ಕೆ ಚಿತ್ರಕಲಾ ಪ್ರದರ್ಶನಕ್ಕೆ ಭೇಟಿ ನೀಡುವ ಆಸಕ್ತರ ಸಂಖ್ಯೆ ಹೆಚ್ಚುತ್ತಲೇ ಇರುವುದು ಗಮನಾರ್ಹ. ಕೊರೋನಾ ಕಾರಣಕ್ಕೆ ಒಂದಿಷ್ಟು ವಿಚಾರಗಳಿಗೆ ಬ್ರೇಕ್ ಬಿದ್ದಿದ್ದರೂ ಕಲೆ ಮೇಲಿನ ಆಸಕ್ತಿ ಕಡಿಮೆ ಆಗಿಲ್ಲ. ಆಗುವುದೂ ಇಲ್ಲ. ಶೋಭಾ ಯಾತ್ರೆ, ಕಲಾಪ್ರದರ್ಶನ ಕುರಿತಂತೆ ಹೆಚ್ಚಿನ ಮಾಹಿತಿಗೆ  ಸಂಸ್ಕಾರ ಭಾರತೀ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಜೋಯಿಸ  (9449671847) ಸಂಪರ್ಕಿಸಬಹುದು.

 

click me!