ಬೆಂಗಳೂರು ರೈಲ್ವೆ ವಿಭಾಗಕ್ಕೆ 72 ಕೋಟಿ ಆದಾಯ

By Kannadaprabha NewsFirst Published Apr 1, 2021, 8:04 AM IST
Highlights

ನೈಋುತ್ಯ ರೈಲ್ವೆಗೆ 2020-21ನೇ ಸಾಲಿನಲ್ಲಿ ಪ್ರಯಾಣ ಶುಲ್ಕ ಹೊರತು ಪಡಿಸಿ 104.86 ಕೋಟಿ ಆದಾಯ ಸಂಗ್ರಹಿಸುವ ಗುರಿ ನೀಡಿದ್ದ ರೈಲ್ವೆ ಮಂಡಳಿ| ಬೆಂಗಳೂರು ವಿಭಾಗಕ್ಕೆ 58.65 ಕೋಟಿ ಗುರಿ ನಿಗದಿ| 72 ಕೋಟಿ ಆದಾಯ ಗಳಿಸುವ ಮೂಲಕ ಗುರಿಗಿಂತ ಶೇ.22 ಹೆಚ್ಚುವರಿ ಆದಾಯ| 

ಬೆಂಗಳೂರು(ಏ.01): ಕೊರೋನಾ ಸೋಂಕಿನ ನಡುವೆಯೂ ನೈಋುತ್ಯ ರೈಲ್ವೆ ಬೆಂಗಳೂರು ವಿಭಾಗ 2020-21ನೇ ಸಾಲಿನಲ್ಲಿ ಪ್ರಯಾಣ ಶುಲ್ಕ ಹೊರತು ಪಡಿಸಿ 72 ಕೋಟಿ ಆದಾಯ ಗಳಿಸಿದೆ.

ರೈಲ್ವೆ ಮಂಡಳಿಯು ನೈಋುತ್ಯ ರೈಲ್ವೆಗೆ 2020-21ನೇ ಸಾಲಿನಲ್ಲಿ ಪ್ರಯಾಣ ಶುಲ್ಕ ಹೊರತು ಪಡಿಸಿ 104.86 ಕೋಟಿ ಆದಾಯ ಸಂಗ್ರಹಿಸುವ ಗುರಿ ನೀಡಿತ್ತು. ಅದರಲ್ಲಿ ಬೆಂಗಳೂರು ವಿಭಾಗಕ್ಕೆ 58.65 ಕೋಟಿ ಗುರಿ ನಿಗದಿ ಮಾಡಲಾಗಿತ್ತು.

ಬೆಂಗಳೂರು: ರೈಲ್ವೆಯಿಂದ ತ್ಯಾಜ್ಯ ನೀರು ಶುದ್ಧೀಕರಣ ಘಟಕ

ಅದರಂತೆ ಬೆಂಗಳೂರು ವಿಭಾಗದಲ್ಲಿ ಭೂ ಪರವಾನಗಿ ಶುಲ್ಕ ಸೇರಿ ಇನ್ನಿತರ ಮೂಲಗಳಿಂದ .72 ಕೋಟಿ ಆದಾಯ ಗಳಿಸುವ ಮೂಲಕ ಗುರಿಗಿಂತ ಶೇ.22 ಹೆಚ್ಚುವರಿ ಆದಾಯ ಗಳಿಸಿದಂತಾಗಿದೆ.
 

click me!