ಒಂದು ಕಡೆ ನೆರೆ ಪ್ರವಾಹ, ಇನ್ನೊಂದು ಕಡೆ ಕೊರೋನಾ ಪ್ರವಾಹ/ ಕರ್ನಾಟಕದಲ್ಲಿ ನಿಲ್ಲದ ಕೊರೋನಾ ಅಬ್ಬರ/ ಕಳೆದ 24 ಗಂಟೆ ಅವಧಿಯಲ್ಲಿ 7,184 ಹೊಸ ಪ್ರಕರಣ
ಬೆಂಗಳೂರು( ಅ. 17) ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುವ ಯಾವ ಲಕ್ಷಣಗಳು ಕಾಣುತ್ತಿಲ್ಲ. 7,184 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 7,58,574ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ 71 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10,427ಕ್ಕೆ ಏರಿಕೆಯಾಗಿದೆ. ಕೊರೋನಾ ನಿಯಂತ್ರಂಣಕ್ಕೆ ಮಾಡಿರುವ ಮಾರ್ಗೋಪಾಯಗಳು ಪರಿಣಾಮ ಬೀರುತ್ತಿಲ್ಲ.
undefined
ಕೊರೋನಾ ಲಸಿಕೆ; ಮೋದಿ ಸಭೆಯಲ್ಲಿ ಹೊರಬಂದ ಮಹತ್ವದ ಅಂಶ
ಮಾಮೂಲಿಯಂತೆ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. 3,371 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 3,04,005ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 14 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.
ಕೊರೋನಾ ಚೇತರಿಕೆ ಪ್ರಮಾಣದಲ್ಲಿಯೂ ಏರಿಕೆ ಇರುವುದು ನಿಟ್ಟುಸಿರು ತಂದಿದೆ 8,893 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 6,37,481ಕ್ಕೆ ಏರಿಕೆಯಾಗಿದೆ. 940 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಳೆ ಅವಾಂತರದೊಂದಿಗೆ ಕೊರೋನಾ ಪರಿಣಾಮ ಅನಿವಾರ್ಯವಾಗಿ ಅನುಭವಿಸಬೇಕಾಗಿದೆ.
ಇಂದಿನ 17/10/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ. https://t.co/wkQ7jfctoX pic.twitter.com/harmerD1nD
— K'taka Health Dept (@DHFWKA)