ಯುದ್ಧನೌಕೆ ವಿಕ್ರಮಾದಿತ್ಯ ವೀಕ್ಷಣೆಗೆ ಜನಸಾಗರ

By Kannadaprabha NewsFirst Published Jul 21, 2019, 9:33 AM IST
Highlights

ಕಾರ್ಗಿಲ್‌ ವಿಜಯೋತ್ಸವ ಹಿನ್ನೆಲೆಯಲ್ಲಿ ವಿಜಯ್‌ ದಿವಸ್‌ ಆಚರಣೆ ಪ್ರಯುಕ್ತ ಶನಿವಾರ ಕಾರವಾರದ ಐಎನ್‌ಎಸ್‌ ಕದಂಬ ನೌಕಾನೆಲೆಯಲ್ಲಿ ದೇಶದ ಅತಿ ದೊಡ್ಡ ವಿಮಾನ ವಾಹಕ ಯುದ್ಧ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. 7 ಸಾವಿರಕ್ಕೂ ಅಧಿಕ ಮಂದಿ ನೌಕೆಯನ್ನು ಕಣ್ತುಂಬಿಕೊಂಡರು.

ಕಾರವಾರ(ಜು.21): ಐಎನ್‌ಎಸ್‌ ಕದಂಬ ನೌಕಾನೆಲೆಯಲ್ಲಿ 7000ಕ್ಕೂ ಹೆಚ್ಚು ಜನ ದೇಶದ ಅತಿ ದೊಡ್ಡ ವಿಮಾನ ವಾಹಕ ಯುದ್ಧ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯವನ್ನು ಕಣ್ತುಂಬಿಕೊಂಡರು.

ಕಾರ್ಗಿಲ್‌ ವಿಜಯೋತ್ಸವ ಹಿನ್ನೆಲೆಯಲ್ಲಿ ವಿಜಯ್‌ ದಿವಸ್‌ ಆಚರಣೆ ಮಾಡಲಾಗುತ್ತಿದ್ದು, ಇದರ ಅಂಗವಾಗಿ ಶನಿವಾರ ಕಾರವಾರದ ಐಎನ್‌ಎಸ್‌ ಕದಂಬ ನೌಕಾನೆಲೆಯಲ್ಲಿ ಐಎನ್‌ಎಸ್‌ ವಿಕ್ರಮಾದಿತ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಇದೇ ವೇಳೆ ಐಎನ್‌ಎಸ್‌ ಸುವರ್ಣ ನೌಕೆ ವೀಕ್ಷಣೆಗೂ ಬೆಳಗ್ಗೆ 11ರಿಂದ ಸಂಜೆ 5ರ ತನಕ ಅವಕಾಶ ಕಲ್ಪಿಸಲಾಯಿತು. 7 ಸಾವಿರಕ್ಕೂ ಅಧಿಕ ಮಂದಿ ನೌಕೆಗಳನ್ನು ಕಣ್ತುಂಬಿಕೊಂಡರು.

ವಿಕ್ರಮಾದಿತ್ಯ ಮೂಲತಃ ರಷ್ಯಾ ದೇಶದ್ದಾಗಿದ್ದು, 2013ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿತು. ನೌಕೆ 44,500 ಟನ್‌ ತೂಕವಿದ್ದು, 284 ಮೀಟರ್‌ ಉದ್ದ, 60 ಮೀಟರ್‌ ಎತ್ತರವಿದೆ. ಏಕಕಾಲದಲ್ಲಿ 34 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ವಿಕ್ರಮಾದಿತ್ಯ ಹೊಂದಿದೆ.

ಸಮುದ್ರದ ಮಧ್ಯೆ ಯುದ್ಧ ನೌಕೆಯಲ್ಲಿ ಯೋಗ ಮಾಡಿದ ನೌಕಾಪಡೆ!

ನೌಕೆಯಲ್ಲಿ 1,600 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಒಮ್ಮೆ ಇಂಧನ ಭರ್ತಿಯಾದರೆ 13,000 ಕಿ.ಮೀ. ದೂರವನ್ನು ಕ್ರಮಿಸಲಿದೆ. 62 ಸಾವಿರ ಕೋಟಿ ನೀಡಿ ವಿಕ್ರಮಾದಿತ್ಯ ನೌಕೆಯನ್ನು ಖರೀದಿಸಲಾಗಿತ್ತು.

click me!