ಕಾಣಿಹಳ್ಳ ಸಮಸ್ಯೆಗೆ ಸಚಿವ ಡಿಕೆಶಿ ಸ್ಪಂದನೆ

By Kannadaprabha News  |  First Published Jul 21, 2019, 8:59 AM IST

ಕಾಣಿಹಳ್ಳ ಹರಿದುಬರುವ ಅಕ್ಕಪಕ್ಕ ರಸ್ತೆ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಜನವಸತಿ ಪ್ರದೇಶಗಳಿವೆ. ನೀರು ಹರಿದುಹೋಗಲು ಸ್ಥಳಾವಕಾಶ ಕಡಿಮೆ ಇರುವುದರಿಂದ ಮನೆಯ ಆವರಣದಲ್ಲೇ ನೀರು ಹರಿಯುತ್ತದೆ. ನೀರಾವರಿ ಸಚಿವ ಡಿ. ಕೆ. ಶಿವಕುಮಾರ್‌ ಸೂಚನೆ ಮೇರೆಗೆ ಇಲಾಖೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ.


ಚಿಕ್ಕಮಗಳೂರು(ಜು.21): ಕೊಪ್ಪ ಗ್ರಾಮಾಂತರ ಪಂಚಾಯಿತಿ ಅಗಸರಕೇರಿಯ ಕಾಣಿಹಳ್ಳ ಮಳೆಗಾಲದಲ್ಲಿ ನೀರು ರಸ್ತೆ ಮತ್ತು ಅಕ್ಕಪಕ್ಕದ ಮನೆ ಆವರಣಗಳಲ್ಲಿ ಹರಿಯುವುದರಿಂದ ಜನ ಜೀವನಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಬೃಹತ್‌ ನೀರಾವರಿ ಇಲಾಖೆಯ ವೀರೇಶ್‌, ಜಗದೀಶ್‌, ಶಶಿಕಾಂತ್‌, ಆದಿಪ್ರಕಾಶ್‌ ಮುಂತಾದ ಅಧಿಕಾರಿಗಳ ತಂಡ ಶನಿವಾರ ಕಾಣಿಹಳ್ಳ ಪ್ರದೇಶಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿತು.

ಈ ಸಮಸ್ಯೆ ಪರಿಹಾರಕ್ಕಾಗಿ ಗ್ರಾಮಸ್ಥರ ಪರವಾಗಿ ಕೊಪ್ಪ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುಧೀರ್‌ಕುಮಾರ್‌ ಮುರೊಳ್ಳಿ, ನುಗ್ಗಿ ಮಂಜುನಾಥ್‌, ಬರ್ಕತ್‌ ಆಲಿ ಶಾಸಕ ಟಿ.ಡಿ. ರಾಜೇಗೌಡರಲ್ಲಿ ಮನವಿ ಮಾಡಿಕೊಂಡಿದ್ದರು.

Tap to resize

Latest Videos

ಇತ್ತೀಚೆಗೆ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್‌ ಶೃಂಗೇರಿಗೆ ಭೇಟಿ ನೀಡಿದಾಗ ಕ್ಷೇತ್ರದ ಶಾಸಕರು ಈ ಸಮಸ್ಯೆಯ ಬಗ್ಗೆ ವಿಸ್ತೃತ ವರದಿ ನೀಡುವ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದರು. ಡಿ.ಕೆ. ಶಿವಕುಮಾರ ಅವರ ಸೂಚನೆಯಂತೆ ಅಧಿಕಾರಿಗಳ ತಂಡ ಕಾಣಿಹಳ್ಳ ಪ್ರದೇಶಕ್ಕೆ ಆಗಮಿಸಿತು.

ಕೊಟ್ಯಂತರ ರು. ನೀರಾವರಿ ಹಗರಣ : ಕಾಂಗ್ರೆಸ್ ಶಾಸಕ ಅರೆಸ್ಟ್

ಕಾಣಿಹಳ್ಳ ಹರಿದುಬರುವ ಅಕ್ಕಪಕ್ಕ ರಸ್ತೆ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಜನವಸತಿ ಪ್ರದೇಶಗಳಿವೆ. ನೀರು ಹರಿದುಹೋಗಲು ಸ್ಥಳಾವಕಾಶ ಕಡಿಮೆ ಇರುವುದರಿಂದ ನೀರು ಸರಾಗವಾಗಿ ಹರಿದುಹೋಗುವಂತೆ ಚಾನೆಲ್‌ ಮತ್ತು ತಡೆಗೋಡೆ ನಿರ್ಮಿಸಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಂದಾಜು .50 ಲಕ್ಷ ವೆಚ್ಚದ ಕಾಮಗಾರಿ ನಡೆಸುವಂತೆ ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು. ಸ್ಥಳ ಪರಿಶೀಲನೆ ವೇಳೆ ಕಾಮಗಾರಿ ವೆಚ್ಚ ನಿರೀಕ್ಷೆಗಿಂತಲೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಕಾಂಗ್ರೆಸ್‌ ವಕ್ತಾರ ನುಗ್ಗಿ ಮಂಜುನಾಥ್‌, ಸಹ ಕಾರ್ಯದರ್ಶಿ ಬರ್ಕತ್‌ ಆಲಿ, ಅಗಸರಕೇರಿ ಮತ್ತು ಮೇಲಿನಪೇಟೆ ಗ್ರಾಮಸ್ಥರು ಜೊತೆಗಿದ್ದರು.

click me!